/newsfirstlive-kannada/media/post_attachments/wp-content/uploads/2025/07/russian-woman4.jpg)
ಬೆಂಗಳೂರು: ಮೊನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗುಹೆಯೊಳಗೆ ರಷ್ಯಾದ ಮಹಿಳೆ ಹಾಗೂ ಇಬ್ಬರು ಮಕ್ಕಳು ಪತ್ತೆಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು, ರಷ್ಯಾದ ಮಹಿಳೆಗೆ ಇಸ್ರೇಲ್ ವ್ಯಕ್ತಿಯ ಜೊತೆ 2-3 ವರ್ಷ ಲಿವಿಂಗ್ ಟುಗೆದರ್ನಲ್ಲಿದ್ದರು ಎಂಬ ವಿಚಾರ ಗೊತ್ತಾಗಿದೆ.
ರಷ್ಯಾ ಮಹಿಳೆ ನೀನಾ ಬಗ್ಗೆ ಲವರ್ ಡ್ರೋರ್ ಗೋಲ್ಡ್ಸ್ಟೀನ್ (Dror Goldstein) ಒಂದೊಂದೇ ಮಾಹಿತಿಯನ್ನು ನ್ಯೂಸ್ಫಸ್ಟ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಡ್ರೋರ್ ಗೋಲ್ಡ್ಸ್ಟೀನ್, ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ನಾನು ನೀನಾಳನ್ನು ಫಸ್ಟ್ ಟೈಮ್ ಭೇಟಿಯಾದೆ. ಆಗ ಅವಳಿಗೆ ಇಬ್ಬರು ಗಂಡು ಮಕ್ಕಳು ಇದ್ದರು. 2017ರಲ್ಲಿ ಗೋವಾದಲ್ಲಿ ನೀನಾ ಪರಿಚಯ ಆಯ್ತು. ನಮ್ಮ ನಡುವೆ ಮಾತುಕತೆ ಶುರುವಾಗಿ ಲವ್ ಆಯ್ತು. 2-3 ವರ್ಷ ಲಿವಿಂಗ್ ಟುಗೆದರ್ನಲ್ಲಿ ಇದ್ವಿ. ಗೋವಾದಲ್ಲೇ 7 ತಿಂಗಳು ಇದ್ವಿ. ಮತ್ತೆ ನಾವಿಬ್ಬರು ಉಕ್ರೇನ್ಗೆ ಹೋದ್ವಿ. ಆಗ ಲಾಕ್ ಡೌನ್ ಆಯ್ತು. ಅದೇ ವೇಳೆಗೆ ನಮಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಪ್ರೇಮಾ (6 ವರ್ಷ) ಮತ್ತು ಅಮಾ (5 ವರ್ಷ) ಎಂದರು.
ಇದಾದ ಬಳಿಕ ಮಾತನ್ನು ಮುಂದುವರೆಸಿದ ಅವರು, ನಾವು ತುಂಬಾ ದಿನ ಗಂಡ ಹೆಂಡತಿಯರ ಹಾಗೇ ಇದೋದಕ್ಕೆ ಆಗಿಲ್ಲ. ಕೆಲವೇ ಕೆಲವು ತಿಂಗಳು ಮಾತ್ರ ನೀನಾ ಜೊತೆ ನಾನಿದ್ದೆ. 2021ರಲ್ಲಿ ಆರು ತಿಂಗಳಿಗೆ ಒಮ್ಮೆ ನಾನು ಭಾರತಕ್ಕೆ ಬಂದು ಹೋಗ್ತಾ ಇದ್ದೆ. ನಾನು ಅವಳಿಗೆ 6 ತಿಂಗಳು ಆರ್ಥಿಕವಾಗಿ ಸಪೋರ್ಟ್ ಮಾಡಿದ್ದೇನೆ. ಅವಳಿಗೆ ಏನೆಲ್ಲಾ ಬೇಕು ಅದನ್ನೆಲ್ಲಾ ಮಾಡಿದ್ದೇನೆ. ಇಸ್ರೇನ್ನಿಂದಲೇ ಗೋವಾದಲ್ಲಿರುವ ಮನೆಗೆ ಬಾಡಿಗೆ, ಖರ್ಚು ವೆಚ್ಚಕ್ಕೆ ದುಡ್ಡು ಕಳುಹಿಸಿ ಕೊಟ್ಟಿದ್ದೇನೆ. ನನ್ನ ಮೊದಲ ಮಗಳು ಹುಟ್ಟಿದ್ದಾಗ 2,500 ಸಾವಿರ ಡಾಲರ್ ಕೊಟ್ಟಿದ್ದೆ. ಇದಾದ ಬಳಿಕ 4 ಸಾವಿರ ಡಾಲರ್ ಕೊಡುತ್ತಾ ಬಂದಿದ್ದೇನೆ. ಆಗ ಹಣವನ್ನು ಪಡೆದುಕೊಳ್ಳೋಕೆ ನಾನು ಪೋಸ್ಟ್ ಆಫೀಸ್ ಕಾರ್ಡ್ ಕೊಟ್ಟಿದ್ದೆ. ಪ್ರತಿ ತಿಂಗಳು ಅವಳು ದುಡ್ಡನ್ನು ಡ್ರಾ ಮಾಡುತ್ತಾ ಇದ್ದಳು. ಕೊನೆಯದಾಗಿ 2 ತಿಂಗಳ ಹಿಂದೆ ನನ್ನ ಜೊತೆಗೆ ನೀನಾ ಮಾತಾಡಿದ್ಳು. ನಂತರ ನನ್ನ ಇಬ್ಬರು ಮಕ್ಕಳೊಂದಿಗೆ ನೀನಾ ನಾಪತ್ತೆಯಾಗಿದ್ದಳು. ಈ ಬಗ್ಗೆ ಗೋವಾದಲ್ಲಿ ಮಿಸ್ಸಿಂಗ್ ದೂರು ನೀಡಿದ್ದೇ. ಕೆಲ ತಿಂಗಳ ಹಿಂದೆ ಗೋಕರ್ಣದಲ್ಲಿ ನೀನಾ ಪತ್ತೆಯಾಗಿದ್ದಳು. ಹೀಗಾಗಿ ಮತ್ತೆ ಭಾರತಕ್ಕೆ ವಾಪಸ್ ಆಗಿದ್ದೇನೆ ಎಂದಿದ್ದಾರೆ.
ಆದರೆ ಇದೀಗ ನೀನಾ ಮಕ್ಕಳನ್ನ ತಂದೆಯೊಟ್ಟಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾಳಂತೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಬೇಕು. ಅವರಿಗೆ ಒಳ್ಳೆಯ ಲೈಫ್ ಬೇಕು. ತನ್ನ ಜೊತೆ ಕಳುಹಿಸಿ ಕೊಡುವಂತೆ ಮಕ್ಕಳನ್ನ ನನ್ನ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ