/newsfirstlive-kannada/media/post_attachments/wp-content/uploads/2024/07/GAMBHIR-11.jpg)
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಈ ಸೆಲೆಕ್ಷನ್ ಹಾಟ್ ಡಿಬೇಟ್ಗೆ ನಾಂದಿಯಾಡಿದೆ. ಕೆಲ ಆಟಗಾರರನ್ನು ಕೈ ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಟ್ಯಾಲೆಂಟೆಡ್ ಪ್ಲೇಯರ್ಸ್ಗೆ ಅನ್ಯಾಯವಾಗಿದೆ ಎಂಬ ಕೂಗು ಫ್ಯಾನ್ಸ್ ವಲಯದಲ್ಲಿ ಕೇಳಿ ಬರುತ್ತಿದೆ. ಸೆಲೆಕ್ಷನ್ ವಿಚಾರದಲ್ಲಿ ತೆಗೆದುಕೊಂಡ ಟಫ್ ಕಾಲ್ಸ್ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಟೀಮ್ ಇಂಡಿಯಾದಲ್ಲಿ ಹೊಸ ಪರ್ವ ಶುರುವಾಗಿದೆ. ಶ್ರೀಲಂಕಾ ಪ್ರವಾಸಕ್ಕೆ ಪ್ರಕಟಿಸಿರುವ ತಂಡದಲ್ಲಿ ಹೊಸ ನಾಯಕನ ಜೊತೆ ಭವಿಷ್ಯದ ನಾಯಕನ ಉಗಮವೂ ಆಗಿದೆ. ಕೆಲ ಟಿ20 ವಿಶ್ವಕಪ್ ಹೀರೋಗಳು ತಂಡಕ್ಕೆ ಮರಳಿದ್ದಾರೆ. ನೂತನ ಕೋಚ್ ಗೌತಮ್ ಗಂಭೀರ್ ತೆಗೆದುಕೊಂಡಿರುವ ಟಫ್ ಕಾಲ್ನಿಂದಾಗಿ ಹಲವರಿಗೆ ಅನ್ಯಾಯವಾಗಿದೆ. ರೆಡ್ ಹಾಟ್ ಫಾರ್ಮ್ನಲ್ಲಿದ್ದ ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಭಾರೀ ಟೀಕೆಗೂ ಗುರಿಯಾಗುವಂತೆ ಮಾಡಿದೆ.
ಇದನ್ನೂ ಓದಿ:‘ನಿಮ್ಗೆ ಗಟ್ಸ್ ಇದ್ದರೆ..’ ಸಾನಿಯಾ ಜೊತೆ ಮದ್ವೆ ವಿಚಾರಕ್ಕೆ ಮೌನ ಮುರಿದು ಶಮಿ ಕಿಡಿಕಿಡಿ..!
ಗಾಯಕ್ವಾಡ್ ವಿಚಾರದಲ್ಲಿ ಕಠಿಣ ನಿರ್ಧಾರ
ಗಾಯಕ್ವಾಡ್ ಸದ್ಯ ಸಾಲಿಟ್ ಫಾರ್ಮ್ನಲ್ಲಿರುವ ಆಟಗಾರ. ಜಿಂಬಾಬ್ವೆ ಪ್ರವಾಸದಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದ ಈತ, ಸದ್ಯ ಟಿ20 ಱಂಕಿಂಗ್ನಲ್ಲಿ 8ನೇ ಸ್ಥಾನದಲ್ಲಿರೋ ಪ್ಲೇಯರ್. ಹೀಗಾದ್ರೂ, ಋತುರಾಜ್ ಗಾಯಕ್ವಾಡ್ಗೆ ಟಿ20 ತಂಡದಲ್ಲಿ ಇಲ್ಲದಿರುವುದು ಹಲವರಿಗೆ ಅಚ್ಚರಿಯ ಜೊತೆ ಶಾಕ್ ನೀಡಿದೆ. ಇದಕ್ಕೆ ಕಾರಣ ಸೂರ್ಯಕುಮಾರ್ ಆಗಮನವೇ ಆಗಿದೆ. ಖಾಯಂ ಆಟಗಾರನ ಆಗಮನದಿಂದ ಗಾಯಕ್ವಾಡ್ಗೆ ವಿಚಾರದಲ್ಲಿ ಟಫ್ ಕಾಲ್ ತೆಗೆದುಕೊಳ್ಳಲಾಗಿದೆ.
ಶತಕದ ಹೊರತಾಗಿ ಅಭಿಷೇಕ್ ಕಿಕ್ ಔಟ್
ಮೋಸ್ಟ್ ಕಾಟ್ರವರ್ಸಿ ಕ್ರಿಯೇಟ್ ಮಾಡ್ತಿರೋದು ರಿಯಾನ್ ಪರಾಗ್ಗೆ ಸ್ಥಾನ ನೀಡಿದ್ದಾಗಿದೆ. ಜಿಂಬಾಬ್ವೆ ಸರಣಿಯಲ್ಲಿ ರಿಯಾನ್ ಪರಾಗ್ಗಿಂತ, ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ರು. ಶತಕ ಸಿಡಿಸಿ ಮಿಂಚಿದ್ರು. ಅಭಿಷೇಕ್ಗೆ ಕೊಕ್ ಕೊಡಲಾಗಿದೆ. ಮಿಡಲ್ ಆರ್ಡರ್ ಬ್ಯಾಟರ್ ಆ್ಯಂಡ್ ಆಲೌರಂಡರ್ ಕೋಟಾದಲ್ಲಿ ರಿಯಾನ್ ಪರಾಗ್ಗೆ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ:ಟೀಕೆಗಳನ್ನು ಪಕ್ಕಕ್ಕೆ ಇಡಿ.. ಪಾಂಡ್ಯರ ಈ ರೋಚಕ ಜರ್ನಿ ಬಗ್ಗೆ ನಿಮಗೆಷ್ಟು ಗೊತ್ತು..?
ಅವೇಶ್ ಮತ್ತು ಮುಖೇಶ್ಗೂ ಅನ್ಯಾಯ..?
ಜಿಂಬಾಬ್ವೆ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದವರಲ್ಲಿ ಅವೇಶ್ ಖಾನ್ ಹಾಗೂ ಮುಖೇಶ್ ಕುಮಾರ್ ಕೂಡ ಪ್ರಮುಖರು. ಆಡಿದ 3 ಪಂದ್ಯಗಳಲ್ಲಿ ಮುಖೇಶ್ 8 ವಿಕೆಟ್ ಉರುಳಿಸಿದ್ರೆ. ಅವೇಶ್ ಕೂಡ ಆಡಿದ್ದ 3 ಪಂದ್ಯಗಳಿಂದ 6 ವಿಕೆಟ್ ಉರುಳಿಸಿದ್ರು. ಸ್ಥಾನ ಸಿಕ್ಕಿಲ್ಲ. ಇದಕ್ಕೆ ಕಾರಣ ಟಿ20 ವಿಶ್ವಕಪ್ ಹೀರೋಸ್ ಅರ್ಷ್ದೀಪ್ ಸಿಂಗ್ ಅಂಡ್ ಮೊಹಮ್ಮದ್ ಸಿರಾಜ್. ಇವರಿಬ್ಬರ ಕಮ್ಬ್ಯಾಕ್ ಅವೇಶ್ ಖಾನ್ ಆ್ಯಂಡ್ ಮುಖೇಶ್ ಕುಮಾರ್ಗೆ ಕೊಕ್ ನೀಡುವಂತೆ ಮಾಡಿದೆ.
ವಿಶ್ವಕಪ್ ಹೀರೋ ಕುಲ್ದೀಪ್ಗಿಲ್ಲ ಟಿ20ಯಲ್ಲಿ ಸ್ಥಾನ
ಟಿ20 ವಿಶ್ವಕಪ್‌ನ ಹೀರೋಗಳಲ್ಲಿ ಒಬ್ಬರಾದ ಕುಲ್ದೀಪ್, ಟಿ20 ತಂಡದಲ್ಲಿರೋ ನಿರೀಕ್ಷೆ ಇತ್ತು. ಟಿ20ಯಿಂದ ಕೈಬಿಟ್ಟು, ಏಕದಿನ ತಂಡದಲ್ಲಿ ಮಾತ್ರವೇ ಅವಕಾಶ ನೀಡಲಾಗಿದೆ. ವಿಶ್ವಕಪ್ನಲ್ಲಿ ಬೆಂಚ್ಗೆ ಸಿಮೀತವಾಗಿದ್ದ ಯುಜುವೇಂದ್ರ ಚಹಲ್, ಎರಡೂ ತಂಡಗಳಲ್ಲಿ ಸ್ಥಾನ ಪಡೆದಿಲ್ಲ. ಬದಲಾಗಿ ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿಗೆ ಚಾನ್ಸ್ ನೀಡಲಾಗಿದೆ. ಬ್ಯಾಟಿಂಗ್ ಜೊತೆ ಅದ್ಬುತ ಫೀಲ್ಡಿಂಗ್ ಮಾಡುವ ಬಿಷ್ನೋಯಿ, ತಂಡಕ್ಕೆ ಪರಿಣಾಮಕಾರಿ ಆಗಬಲ್ಲರು ಎಂಬ ಕಾರಣಕ್ಕೆ ಅನುಭವಿ ಚಹಲ್ಗೆ ಕೊಕ್ ನೀಡಲಾಗಿದೆ.
ಇದನ್ನೂ ಓದಿ:ಈ ಹುಡ್ಗಿಯಿಂದಾಗಿ ಪಾಂಡ್ಯ ಡಿವೋರ್ಸ್ ಪಡೆದರಾ..? ಹಾರ್ದಿಕ್ ಜೊತೆ ತಳುಕು ಹಾಕಿಕೊಂಡ ಬ್ಯೂಟಿ ಇವರೇ..!
ಪ್ರತಿ ಸರಣಿಯ ಆಯ್ಕೆಯ ವೇಳೆ ವಿವಾದಗಳೂ ಇದ್ದೇ ಇರುತ್ತೆ. ಭವಿಷ್ಯ ಹಾಗೂ ತಂಡದ ಹಿತ ದೃಷ್ಟಿಯಿಂದ ಕೆಲವರಿಗೆ ನ್ಯಾಯ ಕೊಡಿಸುವ ಯತ್ನದಲ್ಲಿ ಕೆಲವರಿಗೆ ಅನ್ಯಾಯವಂತೂ ಆಗೇ ಆಗುತ್ತೆ. ಈ ಬಾರಿಯ ಸೆಲೆಕ್ಷನ್ ತೀವ್ರ ಟೀಕೆಗೆ ಗುರಿಯಾಗುವಂತೆ ಮಾಡಿದ್ದು ಆನ್ಫೀಲ್ಡ್ ಆಟದ ರಿಸಲ್ಟ್ ಏನಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ:ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್ನ ರಘು ಸಹೋದರಿ ಕಣ್ಣೀರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ