newsfirstkannada.com

ಬೆಂಚ್ ಕಾದಿದ್ದ ಋತುರಾಜ್ ಈಗ ಕ್ಯಾಪ್ಟನ್..! 24 ಗಂಟೆಯಲ್ಲೇ ಬದಲಾಯ್ತು ಭವಿಷ್ಯ

Share :

Published July 16, 2023 at 12:11pm

Update July 16, 2023 at 12:20pm

    ಋತುರಾಜ್​ಗೆ ಕಾದಿತ್ತು ಕನಸಲ್ಲೂ ಊಹಿಸದ ಆಫರ್

    14ರ ರಾತ್ರಿ ಟೀಮ್ ಇಂಡಿಯಾ ಕ್ಯಾಪ್ಟನ್ ಋತುರಾಜ್

    ಟಿ20 ತಂಡವನ್ನ ಮುನ್ನಡೆಸಲಿದ್ದಾರೆ ಗಾಯಕ್ವಾಡ್

ಕ್ರಿಕೆಟ್​ನಲ್ಲಿ ಎಲ್ಲವೂ ಸಾಧ್ಯ. ಒಂದೇ ಒಂದು ಇನ್ನಿಂಗ್ಸ್​ನಿಂದ ರಾತ್ರೋ ರಾತ್ರಿ ಹೀರೋ ಆದವರು ಇದ್ದಾರೆ. ಕೋಟ್ಯಾಧಿಪತಿಗಳಾಗಿ ಮೆರೆದಾಡಿದವರೂ ಇದ್ದಾರೆ. ಅಷ್ಟೇ ಅಲ್ಲ! ರಾತ್ರೋ ರಾತ್ರಿ ವಿಲನ್​ಗಳಾಗಿ ಟೀಮ್ ಇಂಡಿಯಾದಿಂದ ಕಿಕ್ ಔಟ್ ಆಗಿರೋ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ. ಆದರೆ, ನಾವ್ ಇವತ್ತು ಹೇಳ್ತಿರೋ ಸ್ಟೋರಿ ವಿಭಿನ್ನ. ಯಾಕಂದ್ರೆ, ವಾಟರ್ ಭಾಯ್ ಆಗಿದ್ದ ಈತ, ಈಗ ಏಕಾಏಕಿ ಟೀಮ್ ಇಂಡಿಯಾ ನಾಯಕನಾಗಿದ್ದಾನೆ. ಅಂದಹಾಗೆಯೇ ಕ್ರಿಕೆಟರ್ ಬೇರೆ ಯಾರೂ ಅಲ್ಲ. ಧೋನಿ ಜೊತೆ ಆಡಿದ್ದ ಋತುರಾಜ್ ಗಾಯಕ್ವಾಡ್..

13ರಂದು ಟೀಮ್ ಇಂಡಿಯಾದ ವಾಟರ್ ಬಾಯ್

ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರೋ ಈ ಋತುರಾಜ್ ಗಾಯಕ್ವಾಡ್, ಮೊದಲ ಟೆಸ್ಟ್​​ನಲ್ಲಿ ಬೆಂಚ್ ಬಿಸಿ ಮಾಡಿದ್ರು. ಅಷ್ಟೇ ಅಲ್ಲ.! ವಾಟರ್ ಭಾಯ್ ಆಗಿ ಕಾರ್ಯ ನಿರ್ವಹಿಸಿದ್ದ ಈ ಯಂಗ್ ಸ್ಟರ್, ಓಪನರ್ಗಳಾದ ರೋಹಿತ್ ಆ್ಯಂಡ್ ಯಶಸ್ವಿ ಜೈಸ್ವಾಲ್​ಗೆ ಛತ್ರಿ ಹಿಡಿದು ನಿಂತಿದ್ದರು. ಈ ಘಟನೆಗಳು ನಡೆದ ಜಸ್ಟ್ 24 ಗಂಟೆಗಳಲ್ಲೇ ಋತುರಾಜ್ ಹಣೆಬರಹ ಬದಲಾಗಿತ್ತು.

ಹೌದು! ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ 13ನೇ ತಾರೀಕು ಸಪ್ಲೆಯರ್ ಆಗಿದ್ದ ಋತುರಾಜ್ಗೆ, ಕನಸಿನಲ್ಲೂ ಊಹಿಸದ ಬಿಗ್ ಆಫರ್ 14ರ ರಾತ್ರಿ ಕಾದಿತ್ತು. ಅದೇ ಟೀಮ್ ಇಂಡಿಯಾ ಟಿ20 ತಂಡದ ಕ್ಯಾಪ್ಟನ್ ಪಟ್ಟ.

ಟಿ20 ಪ್ರದರ್ಶನದ ಆಧಾರದಲ್ಲಿ ಋತುರಾಜ್​ಗೆ ನಾಯಕತ್ವ ಪಟ್ಟ!

ನಿಜಕ್ಕೂ ಏಷ್ಯಾನ್ ಗೇಮ್ಸ್ನಲ್ಲಿ ಋತುರಾಜ್, ಟೀಮ್ ಇಂಡಿಯಾದ ಮುನ್ನಡೆಸ್ತಾರೆ, ನಾಯಕರಾಗ್ತಾರೆ ಅನ್ನೋದನ್ನ ಯಾರೂ ಊಹಿಸಿರಲಿಲ್ಲ. ಏಕದಿನ ವಿಶ್ವಕಪ್ ವೇಳೆಯೇ ಏಷ್ಯಾನ್ ಗೇಮ್ಸ್ ನಡೆಯೋ ಕಾರಣ ಶಿಖರ್ ನೇತೃತ್ವದ ತಂಡವನ್ನ ಕಳುಹಿಸ್ತಾರೆ ಎಂಬ ಗುಮಾನಿಯಿತ್ತು. ಆದ್ರೆ, ಭವಿಷ್ಯದ ಚಿಂತನೆಯಲ್ಲಿರೋ ಬಿಸಿಸಿಐ, ಋತುರಾಜ್​ಗೆ ನಾಯಕತ್ವದ ಪಟ್ಟ ಕಟ್ಟಿ ಅಚ್ಚರಿ ಮೂಡಿಸಿದೆ. ಆದರೆ ಗಾಯಕ್ವಾಡ್​ಗೆ ನಾಯಕತ್ವದ ಪಟ್ಟ ಕಟ್ಟಿದರ ಹಿಂದೆ ಕಾರಣವೂ ಇದೆ. ಅದೇ ಟಿ20 ಫಾರ್ಮೆಟ್​ನಲ್ಲಿ ಆತ ನೀಡ್ತಾ ಇರೋ ಪ್ರದರ್ಶನ.

ಹೌದು.! ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ವರ್ಷಗಳಿಂದ ಸಾಲಿಡ್ ಪರ್ಫಾಮೆನ್ಸ್ ತೋರಿರುವ ಋತುರಾಜ್, ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದ 5 ಇನ್ನಿಂಗ್ಸ್​ಗಳಿಂದ 220ರ ಸರಾಸರಿಯಲ್ಲಿ 660 ರನ್ ಚಚ್ಚಿದ್ದರು, ಇಟ್ರೆಸ್ಟಿಂಗ್ ವಿಚಾರ ಏನಂದ್ರೆ, ಒಂದೇ ಓವರ್​ನಲ್ಲಿ 7 ಸಿಕ್ಸರ್ ಸಿಡಿಸಿ ಗಮನ ಕೂಡ ಸೆಳೆದಿದ್ರು. ಅಷ್ಟೇ ಅಲ್ಲ.! ಇತ್ತಿಚಗಷ್ಟೇ ಮುಕ್ತಾಯವಾಗಿದ್ದ ಮಧ್ಯಪ್ರದೇಶ ಪ್ರೀಮಿಯರ್ ಲೀಗ್​ನಲ್ಲೂ ಅತ್ಯದ್ಬುತ ಪ್ರದರ್ಶನ ನೀಡಿದ್ರು. ಅಷ್ಟೇ ಅಲ್ಲ.! ಆತನ ಮೆಚ್ಯುರಿಟಿ ಇನ್ನಿಂಗ್ಸ್​ಗಳೇ ಈಗ ನಾಯಕತ್ವದ ಪಟ್ಟವನ್ನ ಕೊಡುಗೆಯಾಗಿ ನೀಡುವಂತೆ ಮಾಡಿದೆ.

ಇನ್ನೂ ಇದುವರೆಗೆ 106 ಟಿ20 ಮಾದರಿ ಪಂದ್ಯಗಳನ್ನಾಡಿರುವ ಗಾಯಕ್ವಾಡ್, 3426 ರನ್ ಕೊಳ್ಳೆ ಹೊಡೆದಿದ್ದಾರೆ. 36.06ರ ಸರಾಸರಿಯಲ್ಲಿ ರನ್ ಗಳಿಸಿರುವ ಋತುರಾಜ್, 3 ಶತಕ ಹಾಗೂ 24 ಅರ್ಧಶತಕಗಳನ್ನ ಸಿಡಿಸಿದ್ದಾರೆ.

ಈ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್​ನಿಂದಲೇ ವೆಸ್ಟ್ ಇಂಡೀಸ್ ಟೂರ್ ಟಿಕೆಟ್ ಪಡೆದಿರೋ ರುತುರಾಜ್, ಈಗ ಟಿ20 ಫಾರ್ಮೆಟ್ನಲ್ಲಿ ತಂಡವನ್ನ ಮುನ್ನಡೆಸೋ ನಂಬಿಕೆಯನ್ನೂ ಸೆಲೆಕ್ಷನ್ ಕಮಿಟಿಯಲ್ಲಿ ಮೂಡಿಸಿದ್ದಾರೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಧೋನಿ, ಕೊಹ್ಲಿ, ರೋಹಿತ್ ಕೂಡ ಆಗಿದ್ರೂ ವಾಟರ್ ಭಾಯ್!

ಹೌದು! ಟೀಮ್ ಇಂಡಿಯಾದ ಸಕ್ಸಸ್ಫುಲ್ ಕ್ಯಾಪ್ಟನ್​​ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಹಿತ ಹಲವರು ನಾಯಕತ್ವದ ಪಟ್ಟಕ್ಕೇರುವ ಮುನ್ನ ಬೆಂಚ್ ಬಿಸಿ ಮಾಡಿದರೇ ಆಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಧೋನಿ ಹಾಗೂ ಕೊಹ್ಲಿ ನಾಯಕನಾದ ಬಳಿಕವೂ ವಾಟರ್ ಬಾಯ್ ಆಗಿ ಕೆಲಸ ಮಾಡಿದ್ರೂ ಅನ್ನೋದನ್ನ ಮರೆಯುವಂತಿಲ್ಲ.

ಧೋನಿ ಉತ್ತರಾಧಿಕಾರಿ ಋತುರಾಜ್ ಗಾಯಕ್ವಾಡ್..?

ಸದ್ಯ ಋತುರಾಜ್ ಗಾಯಕ್ವಾಡ್, ಏಷ್ಯನ್ ಗೇಮ್ಸ್​ನಲ್ಲಿ ಟೀಮ್ ಇಂಡಿಯಾ ನಾಯಕನಾಗಿ ನೇಮಕಗೊಂಡಿದ್ದೇ ತಡ. ಧೋನಿ ಉತ್ತರಾಧಿಕಾರಿ ಋತುರಾಜ್ ಎಂಬ ಕೂಗು ಕೇಳಿಬರುತ್ತಿದೆ. ಈಗಾಗಲೇ ಭವಿಷ್ಯದ ನಾಯಕನಾಗಿ ಬಿಂಬಿತವಾಗಿರೋ ಋತುರಾಜ್, ಸಕ್ಸಸ್ಫುಲ್ ಓಪನರ್ ಆಗಿ ಛಾಪು ಮೂಡಿಸಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಚಾನ್ಸ್ ಕೂಡ ಗಿಟ್ಟಿಸಿದ್ದಾರೆ. ಹೀಗಾಗಿ ಚೆನ್ನೈನ ಮುಂದಿನ ನಾಯಕ ಋತುರಾಜ್ ಆಗೋದು ಫಿಕ್ಸ್ ಅನ್ನೋದು ಕ್ರಿಕೆಟ್ ವಲಯದ ಮಾತಾಗಿದೆ.

ಒಟ್ಟಿನಲ್ಲಿ.! ಅದೇನೇ ಆಗಲಿ. ಇದುವರೆಗೆ ಯಾರಿಗೂ ಸಿಗದ ಅದೃಷ್ಟ ಗಾಯಕ್ವಾಡ್​ಗೆ ಒಲಿದು ಬಂದಿದೆ. ಅಷ್ಟೇ ಅಲ್ಲ.! ಈ ಸಿಕ್ಕ ಚಾನ್ಸ್​ನಲ್ಲಿ ತಾನೇನು ಅನ್ನೋದನ್ನ ಫ್ರೂವ್ ಮಾಡಿಕೊಳ್ಳಬೇಕಾದ ಸವಾಲು ಇದೆ. ಈ ಒಂದು ಅವಕಾಶ ಸದ್ಬಳಕೆ ಮಾಡಿಕೊಂಡ್ರೆ, ಈ ಲಕ್ಕಿರಾಜ್​ಗೆ ಮತ್ತಷ್ಟು ಲಕ್ ಹೊಡೆಯೋದು ಗ್ಯಾರಂಟಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬೆಂಚ್ ಕಾದಿದ್ದ ಋತುರಾಜ್ ಈಗ ಕ್ಯಾಪ್ಟನ್..! 24 ಗಂಟೆಯಲ್ಲೇ ಬದಲಾಯ್ತು ಭವಿಷ್ಯ

https://newsfirstlive.com/wp-content/uploads/2023/07/Ruthuraj-Gaikwad.jpg

Load More