newsfirstkannada.com

CSK ಮುಂದಿನ ಕ್ಯಾಪ್ಟನ್ ಋತುರಾಜ್ ಸಾಧ್ಯತೆ.. ಗಾಯಕ್ವಾಡ್ ಆಯ್ಕೆಗೆ ಇದೆ 5 ಕಾರಣ..!

Share :

Published February 27, 2024 at 10:31am

    ಈ ಬಾರಿ ಐಪಿಎಲ್​ನಲ್ಲಿ ಧೋನಿ ಕ್ಯಾಪ್ಟನ್ಸಿ ಡೌಟ್

    ಭವಿಷ್ಯದ ನಾಯಕನ ಹುಡುಕಾಟದಲ್ಲಿ ಸಿಎಸ್​ಕೆ

    ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟು ಕೈಸುಟ್ಟುಕೊಂಡಿದ್ದ CSK

ಮಹೇಂದ್ರ ಸಿಂಗ್ ಧೋನಿ ಸಿಎಸ್​ಕೆ ತಂಡದ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದು, ಭವಿಷ್ಯದ ನಾಯಕನಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿಎಸ್​ಕೆ ಅಂದುಕೊಂಡಂತೆ ಎಲ್ಲವೂ ಆದರೆ ಈ ಬಾರಿಯ ಐಪಿಎಲ್​ನಲ್ಲಿ ಧೋನಿ ಕ್ಯಾಪ್ಟನ್ಸಿ ಇರುವುದಿಲ್ಲ.

2022ರಲ್ಲಿ ಸರ್ ರವೀಂದ್ರ ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ಸಿಎಸ್​ಕೆ, ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಋತುರಾಜ್ ಗಾಯಕ್ವಾಡ್​ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ. ಹಾಗಾದ್ರೆ ಧೋನಿ ಬದಲು ರುತುರಾಜ್​ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡ್ತಿರೋದ್ಯಾಕೆ ? ತಂಡದಲ್ಲಿ ಅನುಭವಿ ಆಟಗಾರರಿದ್ರು ಗಾಯಕ್ವಾಡ್​​ ಮೇಲೆ ಹೆಚ್ಚು ಒಲವೇಕೆ ? ಅವರೇಕೆ ಚೆನ್ನೈ ಕ್ಯಾಪ್ಟನ್ ಆಗಲು ಯೋಗ್ಯ? ಅನ್ನೋದಕ್ಕೆ ಕಾರಣ ಇಲ್ಲಿದೆ.

ಗಾಯಕ್ವಾಡ್​​ ಯಾಕೆ ಕ್ಯಾಪ್ಟನ್ ಆಗ್ಬೇಕು..?

  • ಆಟಗಾರನಾಗಿ ಸಾಮರ್ಥ್ಯ ಸಾಬೀತು
  • ಒತ್ತಡದಲ್ಲಿ ತಾಳ್ಮೆಯಿಂದ ವರ್ತಿಸುವ ಗುಣ
  • ಸಿಎಸ್​​ಕೆ ತಂಡದ ಸಂಸ್ಕೃತಿ ಉಳಿಸಬಲ್ಲರು
  • ಸಣ್ಣ ವಯಸ್ಸು, ಉತ್ತಮ ನಾಯಕನಾಗಿ ಬೆಳೆಸುವ ಅವಕಾಶ
  • ಧೋನಿ ನಾಯಕತ್ವದ ಪ್ರಭಾವವಿದೆ

ರುತುರಾಜ್ ಗಾಯಕ್ವಾಡ್ ಆಟಗಾರನಾಗಿ 2021ರಲ್ಲಿ ಆರೆಂಜ್ ಕ್ಯಾಪ್​ ಜಯಿಸಿ ಸಾಮರ್ಥ್ಯ ಸಾಬೀತುಪಡಿಸಿದ್ರು. ಒತ್ತಡದಲ್ಲಿ ತಾಳ್ಮೆಯುವ ವರ್ತಿಸುವ ಗುಣವಿದ್ದು, ತಪ್ಪುಗಳನ್ನ ಬೇಗನೆ ತಿದ್ದಿಕೊಳ್ಳಬಲ್ಲರು. ಸಿಎಸ್​ಕೆ ತಂಡದ ಸಂಸ್ಕೃತಿ ಉಳಿಸುವ ಹಾಗೂ ಸಹ ಆಟಗಾರರನ್ನ ಗೌರವಿಸುವ ಗುಣವಿದೆ. ಈಗಿನ್ನೂ 27 ವರ್ಷ. ಸುದೀರ್ಘ ಕಾಲ ನಾಯಕನಾಗಿ ಬೆಳೆಸುವ ಅವಕಾಶವಿದೆ. ಜತೆಗೆ ಧೋನಿ ನಾಯಕತ್ವದಲ್ಲಿ ಸಾಕಷ್ಟು ಪಟ್ಟುಗಳನ್ನ ಕಲಿತ್ತಿದ್ದಾರೆ.

ಒಟ್ಟಿನಲ್ಲಿ 17ನೇ ಐಪಿಎಲ್ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡದ ಮಿಡ್​ ಸೀಸನ್​​ ಕ್ಯಾಪ್ಟನ್ಸಿ ಬದಲಾವಣೆಯ ವಿಚಾರ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಸಿಎಸ್​ಕೆ ಫ್ರಾಂಚೈಸಿ ನಿಜವಾಗಿಯೂ ಧೋನಿ ಕೆಳಗಿಳಿಸಿ, ಗಾಯಕ್ವಾಡ್​​​​​​ ಪಟ್ಟ ಕಟ್ಟುತ್ತಾ? ಇಲ್ಲ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಬೇರೆಯವರು ಕ್ಯಾಪ್ಟನ್ಸಿ ರೇಸ್​​​​ಗೆ ಎಂಟ್ರಿಕೊಡ್ತಾರಾ? ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

CSK ಮುಂದಿನ ಕ್ಯಾಪ್ಟನ್ ಋತುರಾಜ್ ಸಾಧ್ಯತೆ.. ಗಾಯಕ್ವಾಡ್ ಆಯ್ಕೆಗೆ ಇದೆ 5 ಕಾರಣ..!

https://newsfirstlive.com/wp-content/uploads/2024/02/RUTURAJ-GAIKWAD.jpg

Load More