2 ಸಿಕ್ಸರ್​ ಸಿಡಿಸಿ ಬ್ಯಾಟಿಂಗ್ ಮುಗಿಸಿದ ರೋಹಿತ್​.. ಓಪನರ್​ ರಯಾನ್ ಸಿಡಿಲಬ್ಬರದ ಅರ್ಧಶತಕ

author-image
Bheemappa
Updated On
ಸೂರ್ಯಕುಮಾರ್, ರಯಾನ್ ಘರ್ಜನೆ.. ಪಂತ್​ ಪಡೆಗೆ ಬಿಗ್​ ಟಾರ್ಗೆಟ್​ ಸೆಟ್​ ಮಾಡಿದ ಮುಂಬೈ
Advertisment
  • ಈ ಹಿಂದಿನ ಎರಡು ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಔಟ್
  • ಪಂತ್ ಪಡೆ ವಿರುದ್ಧ ಬ್ಯಾಟಿಂಗ್​ನಲ್ಲಿ ಆರ್ಭಟಿಸಿದ ರಯಾನ್
  • ರಯಾನ್ ಬ್ಯಾಟಿಂಗ್​​ಗೆ ಥಂಡಾ ಹೊಡೆದ ಲಕ್ನೋ ಬೌಲರ್​ಗಳು

ಲಕ್ನೋ ಸೂಪರ್ ಜೈಂಟ್ಸ್​ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಓಪನರ್​ ರಯಾನ್ ರಿಕೆಲ್ಟನ್ ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್​​ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ತವರಿನಲ್ಲಿ ಮುಂಬೈ ಇಂಡಿಯನ್ಸ್​ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ಮುಂಬೈ ಪರ ಓಪನರ್​ಗಳಾಗಿ ಕ್ರೀಸ್​ಗೆ ಬಂದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ರಯಾನ್ ರಿಕೆಲ್ಟನ್ ಒಳ್ಳೆಯ ಆರಂಭ ಪಡೆಯಲಿಲ್ಲ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಪೆವಿಲಿಯನ್​ ಇರೋದು ಎಲ್ಲಿ.. ಸ್ಟಾರ್​ ಕ್ರಿಕೆಟರ್​ನ ಹೆಸರು ನಾಮಕರಣ ಮಾಡಿದ್ದು ಯಾವಾಗ?

publive-image

ಮೊದಲ ಎರಡು ಬಾಲ್​ಗೆ ಎರಡು ಸ್ಫೋಟಕ ಸಿಕ್ಸರ್​ ಸಿಡಿಸಿದ ರೋಹಿತ್ ಶರ್ಮಾ 5ನೇ ಬಾಲ್​ ಆಡುವಾಗ ಮಯಾಂಕ್ ಯಾದವ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟು ಹೊರನಡೆದರು. ರೋಹಿತ್ ಶರ್ಮಾ ಬಳಿಕ ಕ್ರೀಸ್​ಗೆ ಬಂದ ವಿಲ್ ಜಾಕ್ಸ್​ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ಇನ್ನೊಂದೆಡೆ ಸ್ಟ್ಯಾಂಡ್ ಆಗಿದ್ದ ರಯಾನ್ ರಿಕೆಲ್ಟನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿ ಅರ್ಧಶತಕ ಸಿಡಿಸಿದ್ದಾರೆ.

ಪಂದ್ಯದಲ್ಲಿ ಓಪನರ್​ ಆಗಿ ಅಬ್ಬರಿಸಿದ ರಯಾನ್ ರಿಕೆಲ್ಟನ್ ಕೇವಲ 24 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದರು. ಪಂದ್ಯದಲ್ಲಿ ಒಟ್ಟು 32 ಬಾಲ್​ಗಳನ್ನು ಆಡಿದ ರಯಾನ್​, 6 ಬೌಂಡರಿ ಹಾಗೂ 4 ಬಿಗ್​​ ಸಿಕ್ಸರ್​​ಗಳಿಂದ 58 ರನ್​ ಸಿಡಿಸಿದರು. ಈ ವೇಳೆ ದಿಗ್ವೇಶ್ ರಾಥಿ ಬೌಲಿಂಗ್​ನಲ್ಲಿ ಆಯುಷ್​ಗೆ ಕ್ಯಾಚ್ ಕೊಟ್ಟು ಬೇಸರದಿಂದಲೇ ಪೆವಿಲಿಯನ್​ ಸೇರಿದರು. ಸದ್ಯ ಮುಂಬೈ ತಂಡ 4 ವಿಕೆಟ್​ಗೆ 144 ರನ್​ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ಕ್ರೀಸ್​ನಲ್ಲಿ ಸೂರ್ಯಕುಮಾರ್ (35) ಇದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment