/newsfirstlive-kannada/media/post_attachments/wp-content/uploads/2025/02/Ryanair_flight.jpg)
ವಿಮಾನಗಳು ಚಳಿಗಾಲದಲ್ಲಿ ಮಂಜು ಬೀಳುತ್ತಿದ್ದರೇ, ಅತಿಯಾದ ಮಳೆ ಬರುತ್ತಿದ್ದರೇ ಅಥವಾ ಹವಾಮಾನ ವೈಪರೀತ್ಯದಿಂದ ಸಂಚಾರದಲ್ಲಿ ವ್ಯತ್ಯಯ ಆಗುವುದು ಸಾಮಾನ್ಯ. ಆದರೆ ಇಲ್ಲೊಂದು ಬೆಕ್ಕು ವಿಮಾನವನ್ನ ಹಾರದಂತೆ ಮಾಡಿದೆ. ಇನ್ನೇನು ಟೇಕ್ಆಫ್ ಆಗಬೇಕಿದ್ದ ವಿಮಾನ, ಬೆಕ್ಕಿನಿಂದಾಗಿ 2 ದಿನಗಳ ಕಾಲ ನಿಲ್ದಾಣದಲ್ಲೇ ನಿಂತಿತ್ತು.
ರೈನೈರ್ (Ryanair Flight) ಎನ್ನುವ ವಿಮಾನವು ಇಟಲಿಯಾ ರಾಜಧಾನಿ ರೋಮ್ನಿಂದ ಜರ್ಮನಿಗೆ ಹೋಗುತ್ತಿತ್ತು. ಎಲ್ಲ ಪ್ರಯಾಣಿಕರು ವಿಮಾನದ ಒಳಗೆ ಬಂದು ಆಸೀನರಾಗಿದ್ದರು. ಸಿಬ್ಬಂದಿ ಕೂಡ ಎಲ್ಲವನ್ನು ನೋಡಿಕೊಂಡು ವಿಮಾನ ಹಾರಲು ಗ್ರೀನ್ ಸಿಗ್ನಲ್ ಕೊಡಬೇಕಿತ್ತು ಅಷ್ಟೇ ನೋಡಿ. ಆದರೆ ಅಷ್ಟರಲ್ಲೇ ಮಿಯಾಂವ್.. ಮಿಯಾಂವ್ ಎನ್ನುವ ಶಬ್ಧ ಕೇಳಿಸಿದೆ ಅಷ್ಟೇ, ವಿಮಾನದಲ್ಲಿ ಬೆಕ್ಕು ಇದೆ ಎಂದು ಸಿಬ್ಬಂದಿ ಹುಡುಕಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 3 ಪ್ರತ್ಯೇಕ ಅಪಘಾತ; ದುರಂತದಲ್ಲಿ 7 ಕಾರುಗಳು ಜಖಂ, ಕಣ್ಮುಚ್ಚಿದ ಬೈಕ್ ಸವಾರರು
ಕೊನೆಗೆ ವಿಮಾನದಲ್ಲಿ ಕಪ್ಪು-ಬಿಳಿ ಬಣ್ಣದ ಬೆಕ್ಕು ಇರುವುದು ಕಾಣಿಸಿದೆ. ಆದರೆ ಬೆಕ್ಕು ವಿಮಾನದ ಕರೆಂಟ್ ವೈರ್ಗಳನ್ನು ಜೋಡಿಸಿರುವಂತ ಸ್ಥಳದಲ್ಲಿ, ಒಳಗೆ ಹೋಗಿ ಕುಳಿತು ಬಿಟ್ಟಿದೆ. ಅದನ್ನು ಹೇಗೆ ಹೊರಗೆ ತೆಗೆಯಬೇಕು ಎನ್ನುವುದೇ ರೈನೈರ್ ವಿಮಾನ ಸಿಬ್ಬಂದಿಗೆ ಯಕ್ಷ ಪ್ರಶ್ನೆ ಆಗಿತ್ತು. ಬೆಕ್ಕಿಗೆ ಏನು ಮಾಡಿದರೂ ಅದು ಮಿಯಾಂವ್.. ಮಿಯಾಂವ್ ಎನ್ನುತ್ತಾ ಒಳಗೆ ಓಡಾಡ ತೊಡಗಿತ್ತು. ಸಿಬ್ಬಂದಿ ತಿನ್ನಲು ಏನು ತೋರಿಸಿದರೂ ತನ್ನ ಆಟ ತಾನು ಆಡಿದೆ. ಇದರಿಂದ ಅಚ್ಚರಿಗೊಂಡ ಸಿಬ್ಬಂದಿ ಅದನ್ನು ಹೊರಗೆ ತರಲು ಎರಡು ದಿನ ತೆಗೆದುಕೊಂಡಿದ್ದಾರೆ.
ರೈನೈರ್ ವಿಮಾನದ ಒಳಗೆ ಬೆಕ್ಕು ಅಡಗಿ ಕುಳಿತಿರುವ ಸ್ಥಳಕ್ಕೆ ಹೋಗಲು ಒಂದೊಂದೇ ಪ್ಯಾನೆಲ್‌ಗಳನ್ನು ನಿಧಾನವಾಗಿ ತೆಗೆಯಲಾಗಿದೆ. ವಿದ್ಯುತ್ ಸಂಪರ್ಕ ಇರುವ ಸ್ಥಳದಲ್ಲೇ ಬೆಕ್ಕು ಕಣ್ಣಾಮುಚ್ಚಾಲೆ ಆಟ ಆಡುತ್ತಿತ್ತು. ಹೀಗಾಗಿ ಪ್ರಮಾದ ಆಗದಂತೆ ಪ್ಯಾನೆಲ್‌ಗಳನ್ನು ಜಾಗ್ರತೆಯಿಂದ ತೆಗೆದು ಬೆಕ್ಕು ಅನ್ನು ಹೊರಗೆ ಬರುವಂತೆ ಮಾಡಲಾಗಿದೆ. ಇದಾದ ಮೇಲೆ ವಿಮಾನ ಜರ್ಮನಿಗೆ ಪ್ರಯಾಣ ಬೆಳೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ