/newsfirstlive-kannada/media/post_attachments/wp-content/uploads/2025/05/India-S-400-Air-Defense-System-Special-Story-2.jpg)
ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಜಸ್ಟ್ 25 ನಿಮಿಷದಲ್ಲಿ ಪಾಕ್ ಉಗ್ರರ 9 ನೆಲೆಗಳನ್ನ ಭಾರತೀಯ ಸೇನೆ ಧ್ವಂಸ ಮಾಡಿದೆ. ಇಷ್ಟಾದ ಮೇಲೂ ಪಾಕಿಸ್ತಾನದ ಉಗ್ರ ಪ್ರೇಮದ ಸೊಕ್ಕು ಅಡಗಿಲ್ಲ. ಭಾರತದ ದಾಳಿಗೆ ಪ್ರತಿಯಾಗಿ ಕಳೆದ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ಮಾಡಲು ಪ್ರಯತ್ನಿಸಿದೆ.
ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ನಡೆಸಿದ್ದು, ಅದನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣವಾಗಿ ವಿಫಲಗೊಳಿಸಿದೆ. ಭಾರತದ ರಕ್ಷಣಾ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತವನ್ನ ರಕ್ಷಿಸಿದೆ.
/newsfirstlive-kannada/media/post_attachments/wp-content/uploads/2025/05/India-S-400-Air-Defense-System-Special-Story-1.jpg)
S-400 ಏರ್ ಡಿಫೆನ್ಸ್ ಸಿಸ್ಟಮ್, ಇಸ್ರೇಲ್‌ನ ಐರನ್ ಡೋಮ್ ರೀತಿ ಕೆಲಸ ಮಾಡುತ್ತೆ. ಭಾರತಕ್ಕೆ ವೈರಿ ರಾಷ್ಟ್ರಗಳ ವಾಯು ದಾಳಿ, ಮಿಸೈಲ್ ದಾಳಿಯಿಂದ ಇದು ಸಂಪೂರ್ಣ ರಕ್ಷಣೆ ನೀಡುತ್ತೆ. S-400 ಅನ್ನು ಸುದರ್ಶನ ಚಕ್ರ ಅಂತ ಕರೆಯಲಾಗುತ್ತೆ.
S-400 ಎಷ್ಟು ಬಲಶಾಲಿ ಗೊತ್ತಾ?
ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತವು ರಷ್ಯಾದಿಂದ 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿದೆ. ಇದು 400 ಕಿಮೀ ದೂರದಿಂದಲೇ ಬರುವ ವೈರಿ ರಾಷ್ಟ್ರಗಳ ಮಿಸೈಲ್ ಅನ್ನು ಪತ್ತೆ ಹಚ್ಚಿ ಹೊಡೆದುರುಳಿಸುತ್ತದೆ. S-400 ಏಕಕಾಲಕ್ಕೆ 72 ವೈರಿ ಮಿಸೈಲ್ ದಾಳಿಯನ್ನು ಪತ್ತೆ ಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
/newsfirstlive-kannada/media/post_attachments/wp-content/uploads/2025/05/India-S-400-Air-Defense-System-Special-Story-3.jpg)
ಭಾರತಕ್ಕೆ ಅಮೆರಿಕಾದ ವಿರೋಧ!
2019ರ ಪುಲ್ವಾಮಾ ದಾಳಿಯ ಬಳಿಕ ಭಾರತ ರಷ್ಯಾದಿಂದ ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿ ಮಾಡಿದೆ. ಆಗ ರಷ್ಯಾದಿಂದ ಎಸ್-400 ಖರೀದಿಸಿದರೆ ಭಾರತದ ಮೇಲೆ ಕೆಲ ನಿರ್ಬಂಧ ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿತ್ತು. ಆದರೆ ಅಮೆರಿಕಾದ ಬೆದರಿಕೆಗೂ ಜಗ್ಗದ ಭಾರತ, ತನ್ನ ರಕ್ಷಣೆಗಾಗಿ ಏರ್ ಡಿಫೆನ್ಸ್ ಸಿಸ್ಟಮ್ ಬೇಕೆಂದು ಖರೀದಿಸಿತ್ತು.
/newsfirstlive-kannada/media/post_attachments/wp-content/uploads/2025/05/India-S-400-Air-Defense-System-Special-Story-4.jpg)
ರಷ್ಯಾದ ಏರ್ ಡಿಫೆನ್ಸ್ ಸಿಸ್ಚಮ್‌ನಿಂದ ತನ್ನ ವಿಮಾನಗಳ ರಹಸ್ಯವನ್ನು ಭೇದಿಸಬಹುದು ಎಂಬ ಭಯ ಅಮೆರಿಕಾಕ್ಕೂ ಇತ್ತು. ಹೀಗಾಗಿ ರಷ್ಯಾದ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತ ಖರೀದಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಮೆರಿಕಾದ ವಿರೋಧಕ್ಕೆ ಮಣಿಯದ ಭಾರತ S-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿ ಮಾಡಿದ್ದ ಈಗ ಭಾರತದ ರಕ್ಷಣೆಗೆ ಬಳಕೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us