/newsfirstlive-kannada/media/post_attachments/wp-content/uploads/2025/05/S_400_Defence_System_2.jpg)
ಭಾರತದ 15 ಪ್ರದೇಶಗಳ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನದ ಎಲ್ಲ ಡ್ರೋನ್, ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು ಬಲಿಷ್ಠ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್. ಜಮ್ಮುವಿನ ಸಿವಿಲ್ ಏರ್ಪೋರ್ಟ್, ಸಾಂಬಾ, ಆರ್ಎಸ್ ಪುರ, ಆರ್ನಿಯಾ ಮತ್ತು ಸುತ್ತಲಿನ ಪ್ರದೇಶಗಳ ಮೇಲೆ ಪಾಪಿ ಪಾಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಆದರೆ ಇವುಗಳನ್ನು ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಆಕಾಶದಲ್ಲಿ ಹೊಡೆದುರುಳಿಸಿದೆ.
ಈ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತ ಸರ್ಕಾರವು ರಷ್ಯಾದಿಂದ ಖರೀದಿ ಮಾಡಿದೆ. ಇದಕ್ಕೆ ಸುದರ್ಶನ್ ಚಕ್ರ ಎಂದು ನಾಮಕರಣ ಮಾಡಲಾಗಿದೆ. ಭಾರತದ ಸುಮಾರು 50 ಪ್ರದೇಶಗಳ ಮೇಲೆ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟಿಸಿದೆ. ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಏರ್ ಡಿಫೆನ್ಸ್ ಸಿಸ್ಟಮ್ ಇದಾಗಿದ್ದು ಇದಕ್ಕೆ Fire and Forget Capability ಎನ್ನುವರು.
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ವಿಶ್ವದ ಅತ್ಯಂತ ಅಡ್ವಾನ್ಸ್ ದೀರ್ಘ- ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆ ಆಗಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ ಜಗತ್ತಿನಲ್ಲಿ ಚೀನಾವು 2014ರಲ್ಲಿ ಖರೀದಿ ಮಾಡಿತು.
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಪ್ರಮುಖವಾದ 3 ಘಟಕಗಳನ್ನು ಹೊಂದಿದೆ. ಅಂದರೆ ಈ ಒಂದು ಯಂತ್ರದಿಂದ ಮೂರು ಕೆಲಸಗಳನ್ನು ಮಾಡಬಹುದು. ಒಂದು ಕ್ಷಿಪಣಿ ಉಡಾವಣಾ ವಾಹನವಾಗಿದೆ, 2ನೇಯದಾಗಿ ಶಕ್ತಿಶಾಲಿ ರಾಡಾರ್ ಹೊಂದಿದ್ದು ನೂರಾರು ಕಿಲೋ ಮೀಟರ್ ದೂರವಿರುವ ವಸ್ತುಗಳ ದಿಕ್ಕು, ದೂರ, ಎತ್ತರ, ಆಕಾರ, ವೇಗವನ್ನು ರೇಡಿಯೋ ತರಂಗಗಳಿಂದ ಪತ್ತೆ ಹಚ್ಚಿ ನಾಶ ಮಾಡುತ್ತದೆ. ಕೊನೆಯದಾಗಿ ಕಮಾಂಡ್ ಸೆಂಟರ್ ಆಗಿದೆ.
S-400 ಕ್ಷಿಪಣಿ ಅತ್ಯಂತ ಶಕ್ತಿಶಾಲಿಯಾಗಿದ್ದು ಸುದೀರ್ಘವಾದ ಸಾಮರ್ಥ್ಯ ಹೊಂದಿರುವುದರಿಂದ ನ್ಯಾಟೋ (NATO) ಸದಸ್ಯರು ಇದನ್ನು ಬೆದರಿಕೆ ಯಂತ್ರ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ಗಳು ತಾತ್ಕಾಲಿಕ ಬಂದ್; ಭಾರತ- ಪಾಕ್ ನಡುವೆ ಘರ್ಷಣೆ ಬೆನ್ನಲ್ಲೇ ಸರ್ಕಾರ ಸೂಚನೆ
ಬಹುತೇಕ ಎಲ್ಲ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮಾರ್ಥ್ಯವನ್ನು ಈ S-400 ಕ್ಷಿಪಣಿ ಹೊಂದಿದೆ. ಇದರ ರಾಡಾರ್ ಸುಮಾರು 600 ಕಿಲೋ ಮೀಟರ್ವರೆಗೆ ಟಾರ್ಗೆಟ್ ಮಾಡಿ ನಾಶ ಪಡಿಸುವ ಶಕ್ತಿ ಇದೆ.
2018ರಲ್ಲಿ ರಷ್ಯಾ ಜೊತೆ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಒಪ್ಪಂದವನ್ನು ಭಾರತ ಮಾಡಿಕೊಂಡಿತು. ಇದು 5 ಬಿಲಿಯನ್ ಡಾಲರ್ ಒಪ್ಪಂದವಾಗಿದ್ದು ಒಟ್ಟು 5 ಅತ್ಯುನ್ನತ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತ ಖರೀದಿ ಮಾಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ