ಟ್ರಂಪ್ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗ್ತಿರೋದು ಯಾರು..? ಅಂಬಾನಿ ಫೋಟೋ ವೈರಲ್..!

author-image
Ganesh
Updated On
ಟ್ರಂಪ್ ಸಮಾರಂಭಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗ್ತಿರೋದು ಯಾರು..? ಅಂಬಾನಿ ಫೋಟೋ ವೈರಲ್..!
Advertisment
  • ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮೋದಿ ಹೋಗಲ್ಲ
  • ಅಂಬಾನಿ ಕುಟುಂಬಕ್ಕೆ ಆಹ್ವಾನ ನೀಡಿರುವ ಡೊನಾಲ್ಡ್ ಟ್ರಂಪ್
  • ಇಂದು ರಾತ್ರಿ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರ

ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ವಿಶ್ವದೆಲ್ಲೆಡೆಯಿಂದ ಅತಿಥಿಗಳು ಆಗಮಿಸ್ತಿದ್ದಾರೆ. ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಭಾರತ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ಈ ವೇಳೆ ವಿದೇಶಾಂಗ ಸಚಿವರು ಟ್ರಂಪ್ ಆಡಳಿತವನ್ನು ಭೇಟಿಯಾಗಲಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಉತ್ತಮವಾಗಿವೆ. ಇನ್ನು ಟ್ರಂಪ್ ಮತ್ತು ಮೋದಿ ನಡುವಿನ ಮೊದಲ ಭೇಟಿಯು ವಾಷಿಂಗ್ಟನ್ DCಯಲ್ಲಿ ನಡೆಯಲಿದೆ. ಎರಡನೇ ಸಭೆಯು QUAD ಶೃಂಗಸಭೆಯಲ್ಲಿ ಆಗಲಿದೆ ಎಂದು ಯುಎಸ್ ರಾಯಭಾರಿ ಇತ್ತೀಚೆಗೆ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಟ್ರಂಪ್‌ ಹೋಟೆಲ್‌ ಮುಂದೆ ಟೆಸ್ಲಾ ಸೈಬರ್‌ ಟ್ರಕ್ ಸ್ಫೋಟ; ಅಸಲಿಗೆ ಆಗಿದ್ದೇನು?

publive-image

ಟ್ರಂಪ್ ಕೂಡ ಪ್ರಧಾನಿ ನರೇಂದ್ರ ಮೋದಿಯನ್ನು ಹಲವು ಸಂದರ್ಭಗಳಲ್ಲಿ ಹೊಗಳಿದ್ದಾರೆ. ಅವರ ಹಿಂದಿನ ಅಧಿಕಾರಾವಧಿಯಲ್ಲಿ, ಗುಜರಾತ್‌ಗೆ ಭೇಟಿ ನೀಡಿದ್ದರು. ಅಂದು ಮೋದಿ ಮತ್ತು ಟ್ರಂಪ್ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಂಪ್ ಅಧಿಕಾರ ಸ್ವೀಕಾರ ಮಾಡ್ತಿದ್ದಂತೆಯೇ ಭಾರತಕ್ಕೆ ಸಂಬಂಧಿಸಿದಂತೆ ಅಮೆರಿಕದ ಸುಂಕ ನೀತಿ ಏನು ಅನ್ನೋದ್ರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಭಾರತ ತನ್ನ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಪ್ರಪಂಚದೊಂದಿಗೆ ವ್ಯವಹರಿಸುತ್ತಿದೆ. ವೀಸಾ ನೀತಿ ವಿಚಾರದಲ್ಲಿ ಟ್ರಂಪ್ ಸರ್ಕಾರ ಈ ಹಿಂದೆ ಕಟ್ಟುನಿಟ್ಟಿನ ನಿಲುವು ತಾಳಿತ್ತು. ಇತ್ತೀಚಿನ ದಿನಗಳಲ್ಲಿ H1B ವೀಸಾ ನಿಯಮಗಳು ಸಿಂಪಲ್ ಆಗಿವೆ.

ಇದನ್ನೂ ಓದಿ:ಉಪಾಧ್ಯಕ್ಷರು ಮೊದಲು ಅಧಿಕಾರ ಸ್ವೀಕಾರ.. USನಲ್ಲಿ ಹೇಗಿರುತ್ತೆ ಪ್ರಕ್ರಿಯೆ ? ನಿನ್ನೆ ಬದಲು ಇವತ್ತೇ ಯಾಕೆ?

publive-image

ಅಮೆರಿಕ ಕಾಲಮಾನದ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 10:30ಕ್ಕೆ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ಪ್ರಸ್ತುತ ವಾಷಿಂಗ್ಟನ್ ಡಿಸಿಯಲ್ಲಿದ್ದಾರೆ. ಮುಕೇಶ್ ಅಂಬಾನಿ, ನೀತಾ ಅಂಬಾನಿ ಪ್ರಮಾಣಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಅಮೆರಿಕ ತೆರಳಿರುವ ಅವರು, ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಿನ್ನೆ ಟ್ರಂಪ್ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಭಾಗಿಯಾಗಿದ್ದ ಫೋಟೋಗಳಾಗಿವೆ.

ಇದನ್ನೂ ಓದಿ: ಅಮೆರಿಕದಲ್ಲಿ ಇಂದಿನಿಂದ ಟ್ರಂಪ್ ದರ್ಬಾರ್.. 40 ವರ್ಷಗಳ ಇತಿಹಾಸದಲ್ಲೇ ಒಂದು ದೊಡ್ಡ ಬದಲಾವಣೆ

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment