Advertisment

ನಾವು ದಾಳಿ ಮಾಡಿದ್ರೆ ಸುಮ್ಮನಿರಬೇಕು, ಪ್ರತೀಕಾರಕ್ಕೆ ಬರಬಾರ್ದು -ಇಸ್ರೇಲ್​ಗೆ ವಾರ್ನ್ ಮಾಡಿದ ಇರಾನ್​

author-image
Bheemappa
Updated On
ನಾವು ದಾಳಿ ಮಾಡಿದ್ರೆ ಸುಮ್ಮನಿರಬೇಕು, ಪ್ರತೀಕಾರಕ್ಕೆ ಬರಬಾರ್ದು -ಇಸ್ರೇಲ್​ಗೆ ವಾರ್ನ್ ಮಾಡಿದ ಇರಾನ್​
Advertisment
  • ಇಸ್ರೇಲ್ ಮೇಲೆ ಡ್ರೋನ್, ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ ಇರಾನ್
  • ಪ್ರತೀಕಾರಕ್ಕೆ ಮುಂದಾದರೆ ಇನ್ನಷ್ಟು ತೊಂದರೆ ಅನುಭವಿಸ್ತೀರಿ
  • ಇಸ್ರೇಲ್​ನ ಹಡಗಿನಲ್ಲಿ 25 ಮಂದಿಯಲ್ಲಿ 17 ಜನರು ಭಾರತೀಯರು

ವಿಶ್ವ ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗಿದೆ. ಸಿರಿಯಾದ ತನ್ನ ದೂತವಾಸ ಕಚೇರಿ ಮೇಲೆ ಏಪ್ರಿಲ್ 1ರಂದು ನಡೆದಿದ್ದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಸಮರಕ್ಕೆ ರಣಕಹಳೆ ಮೊಳಗಿಸಿದೆ. ಇಸ್ರೇಲ್ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ಮಳೆಗರೆದಿದೆ.

Advertisment

ಇಸ್ರೇಲ್ ಮೇಲೆ ಇರಾನ್ ತನ್ನ ಮೊಟ್ಟಮೊದಲ ನೇರ ದಾಳಿ ಆರಂಭಿಸಿದೆ. ಪ್ರಾದೇಶಿಕ ವೈರಿಗಳ ನಡುವಿನ ದೀರ್ಘಾವಧಿಯ ಶೀತಲ ಸಮರ ನೇರ ಘರ್ಷಣೆಗೆ ಕಾರಣವಾಗಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ಉಗ್ರರ ನಡುವಿನ ಹೋರಾಟ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ.

publive-image

ಸಿರಿಯಾ ಮೇಲಿನ ದಾಳಿ ಪ್ರತೀಕಾರ.. ಇರಾನ್ ಸಮರ!

ಇಸ್ರೇಲ್-ಇರಾನ್​ ನಡುವಿನ ಪ್ರತಿಷ್ಟೆ ಮಹಾಯುದ್ಧಕ್ಕೆ ತಿರುಗಿದೆ. ಇಸ್ರೇಲ್ ಮೇಲೆ ‘ಆಪರೇಷನ್ ಟ್ರೂ’ ಕಾರ್ಯಾಚರಣೆ ನಡೆಸಿರುವ ಇರಾನ್​ 170 ಡ್ರೋನ್​ಗಳು, 30ಕ್ಕೂ ಅಧಿಕ ಕ್ರೂಷ್ ಕ್ಷಿಪಣಿಗಳು, 120ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದ್ರೆ ಇರಾನ್ ದಾಳಿಯನ್ನ ಐರನ್ ಡೋಮ್​ ಶೇ.99ರಷ್ಟು ತಡೆದಿದ್ದು ಕೆಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯಿಂದ ತನ್ನ ಸೇನಾನೆಲೆಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ ಅಂತ ಇಸ್ರೇಲ್​ ಹೇಳಿದೆ.

‘ಇಸ್ರೇಲ್ ಪ್ರತೀಕಾರಕ್ಕೆ ಮುಂದಾದರೆ ಬಲವಾದ ಪ್ರತಿಕ್ರಿಯೆ’

ವಿಶ್ವ ನಾಯಕರು ಸಂಯಮ ಕಾಯ್ದುಕೊಳ್ಳಲು ಒತ್ತಾಯಿಸುತ್ತಿರುವಂತೆಯೇ ತನ್ನ ಅಭೂತಪೂರ್ವ ಕ್ಷಿಪಣಿ ಹಾಗೂ ಡ್ರೋನ್ ದಾಳಿಗೆ ಇಸ್ರೇಲ್ ಯಾವುದೇ ಪ್ರತೀಕಾರಕ್ಕೆ ಮುಂದಾದರೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಮೇಲಿನ ಇರಾನ್ ದಾಳಿಯ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ನಡೆಸಿದೆ. ಇರಾನ್‍ನ ದಾಳಿಯನ್ನು ಭದ್ರತಾಮಂಡಳಿ ಸರ್ವಾನುಮತದಿಂದ ಖಂಡಿಸಿದೆ. ಇಸ್ರೇಲ್​ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್​ ಕ್ರಾಪ್​ ಅನ್ನು ಭಯೋತ್ಪಾದಕ ಸಂಸ್ಥೆಯೆಂದು ಘೋಷಿಸುವಂತೆ ಇಸ್ರೇಲ್ ಒತ್ತಾಯಿಸಿದೆ.

Advertisment

publive-image

ಇದನ್ನೂ ಓದಿ: ಪೆಟ್ರೋಲ್ ದರ ಏರಿಕೆಯಾಗುತ್ತಾ? ಭಾರತದಲ್ಲೂ ಸಂಚಲನ ಸೃಷ್ಟಿಸಿದ ಇಸ್ರೇಲ್​​​-ಇರಾನ್​ ದೇಶಗಳ ಸಂಘರ್ಷ!

ಮತ್ತೊಂದೆಡೆ ಇರಾನ್​ ವಶಪಡಿಸಿಕೊಂಡ ಇಸ್ರೇಲಿ ಹಡಗಿನಲ್ಲಿ 25 ಮಂದಿಯಲ್ಲಿ 17 ಮಂದಿ ಭಾರತೀಯರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರನ್ನು ಯುದ್ಧ ಸಂದಿಗ್ಧ ಸ್ಥಿತಿಯಿಂದ ಹೊರ ತರುವುದು ಸವಾಲಿನ ಕೆಲಸವಾಗಿದೆ. ಅವರೆಲ್ಲರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್ ಸರ್ಕಾರದ ಸಂಪರ್ಕದಲ್ಲಿದೆ. ಈ ಕುರಿತು ಇರಾನ್ ಜೊತೆ ಮಾತುಕತೆ ನಡೆಸಿದ್ದೇವೆ ಅಂತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಇಸ್ರೇಲ್ ಮೇಲಿನ ಇರಾನ್ ದಾಳಿಗೆ ಭಾರತ ಸೇರಿ ಹಲವು ದೇಶಗಳು ಖಂಡಿಸಿದ್ದು ಯುದ್ಧದ ಭೀಕರತೆಗೆ ಕಳವಳ ವ್ಯಕ್ತಪಡಿಸಿವೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment