Advertisment

Photo: ಎಸ್​ ಜೈಶಂಕರ್​​ಗೆ ಟ್ರಂಪ್ ವಿಶೇಷ ಗೌರವ.. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಲ್ಲಿ ಕೂತಿದ್ದರು..?

author-image
Ganesh
Updated On
Photo: ಎಸ್​ ಜೈಶಂಕರ್​​ಗೆ ಟ್ರಂಪ್ ವಿಶೇಷ ಗೌರವ.. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಲ್ಲಿ ಕೂತಿದ್ದರು..?
Advertisment
  • ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಪ್ರತಿಜ್ಞಾವಿಧಿ
  • ಮೊದಲ ಸಾಲಿನ ಆಸನ ಅಲಂಕರಿಸಿದ್ದ ಜೈಶಂಕರ್
  • ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್, ಪ್ರಮಾಣ ವಚನ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

Advertisment

ವೇದಿಕೆಯ ಮುಂದಿನ ಸಾಲಿನಲ್ಲೇ ಜೈಶಂಕರ್

ಪ್ರಮಾಣವಚನ ಕಾರ್ಯಕ್ರಮಕ್ಕೆ ವಿವಿಧ ವಿದೇಶಗಳ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ವಿಶೇಷ ಅಂದರೆ ಟ್ರಂಪ್ ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ, ಗಣ್ಯರಿಗೆ ಮೀಸಲಿದ್ದ ಆಸನಗಳ ಸಾಲಿನಲ್ಲಿ ಜೈಂಕರ್ ಮೊದಲ ಸಾಲಿನಲ್ಲೇ ಕೂತಿದ್ದರು. ಇನ್ನು ಟ್ರಂಪ್ ಪ್ರಮಾಣಚನದ ಬಳಿಕ ಮಾತನಾಡಿರುವ ಜೈಶಂಕರ್, ಭಾರತವನ್ನು ಪ್ರತಿನಿಧಿಸುತ್ತಿರುವುದು ದೊಡ್ಡ ಗೌರವ ಎಂದಿದ್ದಾರೆ.

ಇದನ್ನೂ ಓದಿ: ಅಧ್ಯಕ್ಷರಾದ ಮೇಲೆ ಮೊದಲ ಭೇಟಿಯೇ ಭಾರತ, ಚೀನಾ.. ಟ್ರಂಪ್ ನಿರ್ಧಾರದ ಹಿಂದಿದೆ ರಹಸ್ಯ ಕಾರಣ..

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪ್ರಧಾನಿ ಮೋದಿ ಬರೆದ ಪತ್ರದೊಂದಿಗೆ ನಾನು ಆಗಮಿಸಿದ್ದೇನೆ. ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ ಎಂದು ಜೈಶಂಕರ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisment

publive-image

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ.. ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿದರು. ಎರಡೂ ದೇಶಗಳಿಗೆ ಅನುಕೂಲ ಮತ್ತು ಜಗತ್ತಿಗೆ ಉತ್ತಮ ಭವಿಷ್ಯ ಸೃಷ್ಟಿಸಲು ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

publive-image

ಟ್ರಂಪ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ ಕೂಡ ಭಾಗಿಯಾಗಿದ್ದರು. ವಿಶೇಷ ಅಂದ್ರೆ ವಿವಿಧ ದೇಶಗಳ ಗಣ್ಯ ಉದ್ಯಮಿಗಳಿಗೂ ಟ್ರಂಪ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು.

ಇದನ್ನೂ ಓದಿ: ಟ್ರೋಫಿ ಮುಂದೆ ಕೂತು ಹನುಮಂತು ಬೇಡಿಕೊಂಡಿದ್ದೇನು? ಕನಸು ಬಿಚ್ಚಿಟ್ಟ ತ್ರಿವಿಕ್ರಮ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment