Advertisment

S.T ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ಗೆ BJP ಗೇಟ್‌ಪಾಸ್‌ ಯಾಕೆ? ಅಸಲಿ ಕಾರಣಗಳು ಇಲ್ಲಿದೆ!

author-image
admin
Updated On
S.T ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ಗೆ BJP ಗೇಟ್‌ಪಾಸ್‌ ಯಾಕೆ? ಅಸಲಿ ಕಾರಣಗಳು ಇಲ್ಲಿದೆ!
Advertisment
  • ಬಿಜೆಪಿಯಲ್ಲಿ ಸಂಘಟನೆ, ಶಿಸ್ತು ಪಾಲನೆ ಮಾಡೋರಿಗಷ್ಟೇ ಉಳಿಗಾಲ
  • ಕಾಂಗ್ರೆಸ್ ಪಕ್ಷದ ಜೊತೆಗೆ ಕಾಣಿಸಿಕೊಂಡವರಿಗೆ ಖಡಕ್ ಎಚ್ಚರಿಕೆ
  • 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದ ಶಿಸ್ತು ಸಮಿತಿ

ಬೆಂಗಳೂರು: ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರಿಗೆ ಬಿಜೆಪಿ ಪಕ್ಷ ಇಂದು ಗೇಟ್‌ಪಾಸ್ ಕೊಟ್ಟಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮಹತ್ವದ ಆದೇಶ ಹೊರಡಿಸಿದೆ.

Advertisment

ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ಉತ್ತರ ನೀಡಿರುವುದನ್ನು ಒಪ್ಪದ ಶಿಸ್ತು ಸಮಿತಿ ಪದೇ ಪದೇ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆ, ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಉಚ್ಛಾಟಿಸುವ ತೀರ್ಮಾನ ಕೈಗೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ ಸೋಮಶೇಖರ್ ಅವರ ವಿರುದ್ಧ ಕೋರ್ ಕಮಿಟಿಯಲ್ಲಿ ಚರ್ಚೆ ಆಗಿತ್ತು. ಇಬ್ಬರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಶಿಸ್ತು ಸಮಿತಿ ಉಚ್ಛಾಟನೆ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.

publive-image

ವಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಜೆಪಿ ಹೈಕಮಾಂಡ್ ಏನು ಕ್ರಮ ತೆಗೆದುಕೊಳ್ಳುತ್ತೋ ಅದಕ್ಕೆ ನಮ್ಮ ಸಹಮತವಿದೆ. ಪಕ್ಷಕ್ಕೆ ಯಾರು ದ್ರೋಹ ಬಗೆಯುತ್ತಾರೋ ಅವರ ವಿರುದ್ಧ ಕೇಂದ್ರ ನಾಯಕರು ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಪೂರ್ತಿಯಾಗಿ ನಾನು ಬೆಂಬಲವನ್ನ ಕೊಡುತ್ತೇನೆ. ಅವರ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿತ್ತು. ಆದ್ದರಿಂದಲೇ ಕೇಂದ್ರ ನಾಯಕರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

Advertisment

ರಾಜ್ಯ ಬಿಜೆಪಿಗೆ ಹೈಕಮಾಂಡ್ ಖಡಕ್‌ ಸಂದೇಶ
ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡೋ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೂ ಸಂದೇಶ ನೀಡಿದೆ. ರಾಜ್ಯ ಬಿಜೆಪಿಯಲ್ಲಿ ಅಶಿಸ್ತು, ಗುಂಪುಗಾರಿಕೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆ ಆಗಿತ್ತು. ಈ ಬಗ್ಗೆ ಗರಂ ಆಗಿದ್ದ ಹೈಕಮಾಂಡ್, ಅಶಿಸ್ತು‌ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಘಟನೆ, ಪಕ್ಷ ಬಲವರ್ಧನೆಗೆ ಮುಂದಾಗಿದೆ.

ಶಿಸ್ತು ಮೀರಿದರೆ ಶಿಕ್ಷೆ!
ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಕೈಗೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಅವರು ಖಡಕ್ ಸಂದೇಶ ನೀಡಿದ್ದಾರೆ. ಇನ್ಮುಂದೆ ಪಕ್ಷವೇ ಮುಖ್ಯ, ಶಿಸ್ತೇ ಮುಖ್ಯ. ಇನ್ಮುಂದೆ ಶಿಸ್ತು ಮೀರಿದರೆ ಶಿಕ್ಷೆ. ಪಕ್ಷ ವಿರೋಧಿ ಚಟುವಟಿಕೆ ಸಹಿಸಲ್ಲ. ಹೊಂದಾಣಿಕೆ ರಾಜಕಾರಣ ಮಾಡುವಂತಿಲ್ಲ. ಬಿಜೆಪಿಯಲ್ಲಿ ಪಕ್ಷ ಸಂಘಟನೆ, ಶಿಸ್ತು ಪಾಲನೆ ಮಾಡೋರಿಗಷ್ಟೇ ಉಳಿಗಾಲ. ಕಾಂಗ್ರೆಸ್ ಪಕ್ಷದ ಜೊತೆಗೆ ಕಾಣಿಸಿಕೊಂಡವರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ಬಿಜೆಪಿ ಪಕ್ಷದಿಂದ ಇಬ್ಬರು ಶಾಸಕರ ಉಚ್ಛಾಟನೆ ಏಕೆ?
2023ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಮೂವರು ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

Advertisment

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುವಂತೆ ಪಕ್ಷದ ವತಿಯಿಂದ ಎಲ್ಲಾ ಶಾಸಕರಿಗೆ ವಿಪ್‌ ಜಾರಿಗೊಳಿಸಲಾಗಿತ್ತು. ವಿಪ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಸ್ಪಷ್ಟವಾಗಿ ಸೂಚನೆ ನೀಡಲಾಗಿತ್ತು.
ಅಂದು ಮತದಾನ ನಡೆದಾಗ ಮತ ಚಲಾವಣೆಗೆ ಎಸ್.ಟಿ.ಸೋಮಶೇಖರ್ ಹಾಗೂ ಅರೆಬೈಲು ಶಿವರಾಂ ಹೆಬ್ಬಾರ್ ಬಂದಿರಲಿಲ್ಲ. ಬೆಂಗಳೂರಿನಲ್ಲೇ ಇದ್ದರೂ ಮತದಾನಕ್ಕೆ ಇಬ್ಬರು ಬಿಜೆಪಿಯ ಶಾಸಕರುಗಳು ಗೈರಾಗಿದ್ದರು.

ಅಂದೇ ಈ ಇಬ್ಬರ ವಿರುದ್ಧ ರಾಜ್ಯ ಬಿಜೆಪಿ ನಾಯಕರುಗಳು ಸಿಡಿಮಿಡಿಗೊಂಡಿದ್ದರು. ನಿಮಗೆ ಪಕ್ಷದ ಮೇಲೆ ಯಾವುದೇ ಅಸಮಾಧಾನವಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಿ. ಅದನ್ನು ಬಿಟ್ಟು ಹೀಗೆ ಮತದಾನಕ್ಕೆ ಬಾರದೇ ಇರುವುದು ಸರಿಯಲ್ಲ ಎಂದು ಮನವೊಲಿಸಲು ನಾಯಕರುಗಳು ಮುಂದಾಗಿದ್ದರು.

ಇದನ್ನೂ ಓದಿ: BIG BREAKING: ಬಿಜೆಪಿ ಪಕ್ಷದಿಂದ ಇಬ್ಬರು ಶಾಸಕರ ಉಚ್ಛಾಟನೆ; ಹೈಕಮಾಂಡ್ ಆದೇಶ 

Advertisment

ಅಂದು ಯಾವುದೇ ರಾಜ್ಯ ನಾಯಕರ ಮಾತಿಗೂ ಇಬ್ಬರು ಶಾಸಕರು ಮನ್ನಣೆ ನೀಡಿರಲಿಲ್ಲ. ಅಂದಿನಿಂದ ಇಬ್ಬರು ಶಾಸಕರು ಪಕ್ಷವೇ ನಮ್ಮನ್ನು ಉಚ್ಛಾಟನೆ ಮಾಡಲಿ, ನಾವು ಮಾತ್ರ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎನ್ನುವ ಧೋರಣೆ ತಾಳಿದ್ದರು.

ಪಕ್ಷದ ಕೇಂದ್ರ ಶಿಸ್ತು ಸಮಿತಿ 2-3 ಬಾರಿ ನೋಟಿಸ್ ನೀಡಿದ್ರೂ ಶಾಸಕರುಗಳು ಡೋಂಟ್ ಕೇರ್ ಮನೋಭಾವನೆ ತೋರಿದ್ದರು. ಇದನ್ನು ಸರಿಪಡಿಸಲು ನಾಲ್ಕೈದು ಬಾರಿ ರಾಜ್ಯ ನಾಯಕರು ಮುಂದಾದರೂ ಇಬ್ಬರು ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರು.

2024ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೂ ಇಬ್ಬರು ಶಾಸಕರು ಪಕ್ಷಕ್ಕೆ ಸ್ಪಂದಿಸಿರಲಿಲ್ಲ. ಈ ಎಲ್ಲಾ ಅಂಶಗಳನ್ನು‌ ಮುಂದಿಟ್ಟುಕೊಂಡು ಇಂದು ಅಧಿಕೃತವಾಗಿ ಪಕ್ಷದಿಂದ ಇಬ್ಬರು ಶಾಸಕರನ್ನು ಶಿಸ್ತು ಸಮಿತಿ ಉಚ್ಛಾಟನೆ ಮಾಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment