newsfirstkannada.com

ವೀಕೆಂಡ್ ಮಸ್ತಿ ಮಾಡಲು ಬರ್ತಿದೆ ಸರಿಗಮಪ ಸೀಸನ್-20; ಈ ಬಾರಿ ಸ್ಪೆಷಲ್ ಏನು ಗೊತ್ತಾ..?

Share :

Published July 12, 2023 at 10:30am

    ವಿಶ್ವದಲ್ಲಿನ ಕನ್ನಡ ಸಿಂಗರ್ಸ್​ ಕರೆತರಲು ಬಿಗ್ ಪ್ಲಾನ್​

    ವಿದೇಶದಲ್ಲಿರೋ ಕನ್ನಡಿಗರಿಗೆ ಸಿಗಲಿದೆ ಹೊಸ ಅವಕಾಶ

    ಈಗಾಗಲೇ ಆಡಿಷನ್ ಶುರು.. ಆದರೆ ಶೋ ಯಾವಾಗ..?

ಕಿರುತೆರೆಯಲ್ಲಿ ವೀಕೆಂಡ್ ಬಂತಂದ್ರೆ ಸಾಕು ರಿಯಾಲಿಟಿ ಶೋಗಳ ಹಬ್ಬರ ಜೋರು ಇರುತ್ತೆ. ಸಂಜೆ 6 ರಿಂದ ಹಿಡಿದು ರಾತ್ರಿ 11ರವರೆಗೆ ರಿಯಾಲಿಟಿ ಶೋಗಳು ಅಬ್ಬರಿಸುತ್ತಿರುತ್ತವೆ. ಗ್ಯಾಪ್ ಇಲ್ಲದೇ ನಮ್ಮನೆಲ್ಲ ರಂಜಿಸುತ್ತವೆ.

ವಿಷ್ಯ ಏನಪ್ಪ ಅಂದ್ರೆ ಹಾಡುಗಾರರಿಗೆ ಜೀ ವಾಹಿನಿ ಸಿಹಿ ಸುದ್ದಿ ನೀಡಿದೆ. ಹೌದು. ಮತ್ತೆ ನಿಮ್ಮ ಮುಂದೆ ಹೊಚ್ಚ ಹೊಸ ಹಾಗೂ ವಿಭಿನ್ನವಾಗಿ ಸರಿಗಮಪ ಸೀಸನ್- 20 ನಿಮ್ಮ ಮುಂದೆ ಬರಲಿದೆ. ಇದು ನಿಜಕ್ಕೂ ಸಿಂಗರ್ಸ್​ಗೆ ದೊಡ್ಡ ವಿಷಯವೇ ಸರಿ. ಅದ್ರಲ್ಲೂ ಸರಿಗಮಪ ಅಂದ್ಮೇಲೆ ಕೇಳ್ಬೇಕಾ.. ಇದರ ಸೌಂಡ್​ ತುಸು ಜಾಸ್ತಿನೇ ಇರುತ್ತೆ.

ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್- 19 ಮೊನ್ನೆ ಮೊನ್ನೆಯಷ್ಟೇ ಮುಗಿದಿರುವ ಹಾಗಿದೆ. ಆಗಲೇ ಮತ್ತೊಂದು ಹೊಸ ಸೀಸನ್ ನಿಮ್ಮೆದುರಿಗೆ ಬರಲಿದೆ. ಈ ಬಾರಿ ದೊಡ್ಡ ವಿಶೇಷತೆ ಏನು ಅಂದ್ರೆ ಸರಿಗಮಪ ಸೀಸನ್- 20ರ ಆಡಿಷನ್ ಈಗ ವಿಶ್ವದಾದ್ಯಂತ ಪಸರಿಸಿದೆ. ಈ ಬಾರಿಯ ಶೋನಲ್ಲಿ ವಿಶ್ವದಾದ್ಯಂತ ಹಾಡುಗಾರರನ್ನು ಕರೆತರಲಿದೆ ಸರಿಗಮಪ ಶೋ.

ಕನ್ನಡದ ಸರಿಗಮಪ ಕನ್ನಡ ಕಿರುತೆರೆಯಷ್ಟೇ ಅಲ್ಲದೆ ಜಗತ್ತಿನಾದ್ಯಂತ ಈ ಶೋ ಪ್ರಕಟಗೊಳ್ಳಲಿದೆ. ರಿಯಾಲಿಟಿ ಶೋಗೆ ಬೇರೆ ದೇಶ ವಿದೇಶಗಳಿಂದ ಅಭಿಮಾನಿಗಳು ಜೋರಿದ್ದಾರೆ. ಆ ಕಾರಣಕ್ಕೆ ಬೇರೆ ದೇಶದಲ್ಲಿರೋ ಕನ್ನಡಿಗರ ಹಾಡುಗಾರರನ್ನ ಕರೆತರುವ ಪ್ರಯತ್ನಕ್ಕೆ ಜೀ ವಾಹಿನಿ ತಂಡ ಇಳಿದಿದೆ. ಹಾಗಾಗಿನೇ ವಿದೇಶದಲ್ಲಿರುವ ಕನ್ನಡಿಗರಿಗೂ ಈ ಬಾರಿ ಸರಿಗಮ ಆಡಿಷನ್ ಇದೆ. ಈಗಾಗ್ಲೇ ಆಡಿಷನ್​ಗಳು ಶುರುವಾಗಿದ್ದು ಡಿಕೆಡಿ ಮುಗಿದ ನಂತರದಲ್ಲಿ ಸರಿಗಮ ಸೀಸನ್- 20 ನಿಮ್ಮ ಮನೆಗಳಿಗೆ ಬರಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ವೀಕೆಂಡ್ ಮಸ್ತಿ ಮಾಡಲು ಬರ್ತಿದೆ ಸರಿಗಮಪ ಸೀಸನ್-20; ಈ ಬಾರಿ ಸ್ಪೆಷಲ್ ಏನು ಗೊತ್ತಾ..?

https://newsfirstlive.com/wp-content/uploads/2023/07/SARIGAMAPA.jpg

Load More