/newsfirstlive-kannada/media/post_attachments/wp-content/uploads/2025/06/SALUMARAD_TIMMAKKA_NEW.jpg)
ಬೆಂಗಳೂರು: ಸಾಲುಮರದ ತಿಮ್ಮಕ್ಕ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಇವತ್ತು ಫಿಲಂ ಚೇಂಬರ್ಗೆ ಬಂದು ತಮ್ಮ ಕುರಿತು ಸಿನಿಮಾ ಮಾಡದಂತೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಹಾಗೂ ತಂಡ ದೂರು ನೀಡಿದೆ.
ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ನೀನಾಸಂ ಅಶ್ವತ್, ಎಂ.ಕೆ ಮಠ ಸೇರಿಂತೆ ಹಲವು ಕಲಾವಿದರು ಅಭಿನಯ ಮಾಡುತ್ತಿದ್ದಾರೆ. ಸಾಲು ಮರದ ತಿಮ್ಮಕ್ಕನ ಕಥೆ ಆಧಾರಿತ ಸಿನಿಮಾ ಮಾಡ್ತಿದ್ದ ತಂಡಕ್ಕೆ ಸದ್ಯ ಸಂಕಷ್ಟ ಶುರುವಾಗಿದೆ. ಸಿನಿಮಾ ಮಾಡದಂತೆ ಸಾಲು ಮರದ ತಿಮ್ಮಕ್ಕನ ಸಾಕು ಮಗ ಉಮೇಶ್ ಅವರಿಂದ ಒತ್ತಡ ಇದೆ ಎಂದು ಚಿತ್ರತಂಡ ಹೇಳಿತ್ತು. ಹೀಗಾಗಿ 2 ದಿನಗಳ ಹಿಂದೆ ಮಾಗಡಿ ಬಳಿಯ ಕುದೂರ್ ಠಾಣೆಯಲ್ಲಿ ಸಿನಿಮಾ ತಂಡವನ್ನು ಕರೆದುಕೊಂಡು ಹೋಗಿ ಪೊಲೀಸರು ಮಾತುಕತೆ ನಡೆಸಿದ್ದರು.
ವೃಕ್ಷ ಮಾತೆ ಸಿನಿಮಾಗೆ ಸಾಕುಮಗ ಉಮೇಶ್ ಅವರ ಅನುಮತಿ ಪಡೆದಿಲ್ಲ ಅನ್ನೋ ಕಾರಣ ನೀಡಲಾಗಿದೆಯಂತೆ. ರಾಮನಗರದ ಮಾಗಡಿ ತಾಲೂಕಿನ ಕುದೂರಿನಲ್ಲಿ ಘಟನೆ ನಡೆದಿತ್ತು. ಚಿತ್ರತಂಡದ ಜೊತೆ ಜಟಾಪಟಿಗೆ ಉಮೇಶ್ ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಫಿಲಂ ಚೇಂಬರ್ಗೆ ಆಗಮಿಸಿ ಸಾಲು ಮರದ ತಿಮ್ಮಕ್ಕ ಹಾಗೂ ತಂಡ ದೂರು ನೀಡಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಅವರು ಮಾತನಾಡಿ, ಸಾಲು ಮರದ ತಿಮ್ಮಕ್ಕ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಸಿನಿಮಾ ಮಾಡುತ್ತೇನೆ ಎಂದು ಸಾಕಷ್ಟು ನಿರ್ದೇಶಕರು ಬಂದಿದ್ದರು. ನಾವು ಎಲ್ಲರಿಗೂ ಬೇಡ ಎಂದು ಹೇಳಿದ್ದೇವೆ. ದಿಲೀಪ್ ಅವರು ಬಂದು ಸಿನಿಮಾ ಮಾಡುತ್ತೇನೆ ಎಂದಿದ್ದರು. ಅದಕ್ಕೆ ಬೇಡ ಅಂತ ಹೇಳಿದ್ವಿ. ಸಾಲು ಮರದ ತಿಮ್ಮಕ್ಕ ಅವರ ಕೃತಿಯಾಧಾರಿತವಾಗಿ ಸಿನಿಮಾ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆ ಕೃತಿ ಕೂಡ ಸರಿಯಾಗಿಲ್ಲ ಎಂದು ಹೇಳಿದ್ದಾರೆ.
ಶೂಟಿಂಗ್ ಮಾಡುತ್ತೇವೆ ಎಂದು ಹೇಳಿ ಮರಗಳಿಗೆ ಕೊಡಲಿ ಪೆಟ್ಟು ಹಾಕಿದ್ದಾರೆ. ಮರಗಳನ್ನ ಮಕ್ಕಳ ಹಾಗೆ ಬೆಳೆಸಿದವರು ತಿಮ್ಮಕ್ಕ. ಶೂಟಿಂಗ್ ಮಾಡದಂತೆ ಕುದೂರಿನ ಠಾಣೆಯಲ್ಲಿ ದೂರು ನೀಡಲಾಗಿತ್ತು. ಚಿತ್ರೀಕರಣ ಮಾಡೋಕೆ ನಾವು ಅನುಮತಿ ಕೊಟ್ಟಿಲ್ಲ. ಈ ತಂಡಕ್ಕೆ ನಾವು ಸಿನಿಮಾ ಮಾಡೋಕೆ ಬಿಡಲ್ಲ. 25 ಲಕ್ಷ ಹಣ ಹಾಗೂ ಇನ್ನೋವಾ ಕಾರು ಕೇಳಿರುವ ಆರೋಪವಿದೆ. ಆದರೆ ನಾವು ಯಾರ ಬಳಿಯೂ ಹಣ, ಕಾರು ಕೇಳಿಲ್ಲ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ