/newsfirstlive-kannada/media/post_attachments/wp-content/uploads/2025/07/Shubhanshu_Shukla.jpg)
ಬಾಹ್ಯಾಕಾಶಕ್ಕೆ ಹಾರಿರುವ ಭಾರತದ ಶುಭಾಂಶು ಶುಕ್ಲಾ (Shubhanshu Shukla) ಅವರು ಭಾರತವನ್ನು ಭಾವನಾತ್ಮಕವಾಗಿ ಹೊಗಳಿದ್ದು ಸಾರೇ ಜಹಾಂ ಸೇ ಅಚ್ಚಾ ಎಂದು ಬಣ್ಣಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆಕ್ಸಿಯಂ-4 ಬಾಹ್ಯಾಕಾಶ ಕಾರ್ಯಕ್ರಮದ ಗಗನಯಾನಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಮಾರಂಭದಲ್ಲಿ ಮಾತನಾಡಿದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಹಾಗೂ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಒಂದು ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿ ಆಗಿದೆ.
ಇಂದು ಭಾರತವು ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷೆಯ, ನಿರ್ಭೀತ, ಆತ್ಮವಿಶ್ವಾಸ ಮತ್ತು ಹೆಮ್ಮೆಯಂತೆ ಕಾಣುತ್ತದೆ. ಆತ್ಮವಿಶ್ವಾಸ ಹಾಗೂ ಹೆಮ್ಮೆಯಿಂದ ಬೀಗುವ ದೇಶವಾಗಿ ಭಾರತ ಗಮನ ಸೆಳೆಯುತ್ತಿದೆ. ಈಗಲೂ ಭಾರತವು ಸಾರೇ ಜಹಾನ್ ಸೆ ಅಚ್ಚಾ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಸುಂದರ್, ಬುಮ್ರಾ, ಸಿರಾಜ್ ಅಬ್ಬರಕ್ಕೆ ಇಂಗ್ಲೆಂಡ್ ಬ್ಯಾಟರ್ಗಳ ಪೆವಿಲಿಯನ್ ಪರೇಡ್.. 193 ಟಾರ್ಗೆಟ್!
ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯ ಎಂಬ ಇತಿಹಾಸವನ್ನು ಶುಭಾಂಶು ಶುಕ್ಲಾ ನಿರ್ಮಿಸಿದ್ದಾರೆ. ಆಕ್ಸಿಯಂ-4ರಲ್ಲಿ ಇನ್ನುಳಿದ ಗಗನ ಯಾತ್ರಿಗಳಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಅವರೊಂದಿಗೆ ಶುಭಾಂಶು ಶುಕ್ಲಾ ಭೂಮಿಗೆ ಮರಳಲಿದ್ದಾರೆ.
ಭಾರತದ ಶುಭಾಂಶು ಶುಕ್ಲಾ ಸೇರಿ ಒಟ್ಟು ನಾಲ್ವರು ಗಗನಯಾತ್ರಿಗಳು (Astronaut) ಜೂನ್ 25 ರಂದು ಅಮೆರಿಕಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದರು. ನಿಗದಿಯಂತೆ ಅವರು, ಜುಲೈ 10 ರಂದು ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ ಆಗಲಿಲ್ಲ. ಜುಲೈ 14 ರಂದು ಕ್ಯಾಲಿಫೋರ್ನಿಯಾ ಕರಾವಳಿಗೆ ಬಂದಿಳಿಯುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ