/newsfirstlive-kannada/media/post_attachments/wp-content/uploads/2024/10/AYYAPPA.jpg)
ನವದೆಹಲಿ: ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ವಿಮಾನದ ಮೂಲಕ ಇರುಮುಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ. ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಅಯ್ಯಪ್ಪ ಭಕ್ತರು ಇರುಮುಡಿ ತೆಗೆದುಕೊಂಡು ವಿಮಾನದಲ್ಲಿ ಹೋಗಲು ಈ ಮೊದಲು ಅವಕಾಶ ಇರಲಿಲ್ಲ. ಆದರೆ ಈಗ ಇದಕ್ಕೆ ಅನುಮತಿ ನೀಡಲಾಗಿದೆ. ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳಲ್ಲಿ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಲು ಅವಕಾಶ ನೀಡಲಾಗಿದೆ. ಅಯ್ಯಪ್ಪ ಭಕ್ತರು ಇರುಮುಡಿ ತೆಗೆದುಕೊಂಡು ಹೋಗುವಾಗ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಮಾಡಲಾಗುತ್ತದೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ದೋಸ್ತಿ ದರ್ಬಾರ್.. ನಿಖಿಲ್ ಪರ ಹೆಚ್​.ಡಿ ಕುಮಾರಸ್ವಾಮಿ, ಯದುವೀರ್ ಕ್ಯಾಂಪೇನ್
/newsfirstlive-kannada/media/post_attachments/wp-content/uploads/2024/10/Sabarimala_pilgrims.jpg)
ಎಕ್ಸ್-ರೇ, ಸ್ಕ್ಯಾನಿಂಗ್, ಇಟಿಡಿ ಹಾಗೂ ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳನ್ನ ಮಾಡಿದ ನಂತರ ಇರುಮುಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ. 2025ರ ಜನವರಿ ಅಂತ್ಯದವರೆಗೆ ತೀರ್ಥಯಾತ್ರೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವು ತೆರೆದಿರುತ್ತದೆ. ಈವರೆಗೆ ಮಾತ್ರ ಭಕ್ತರಿಗೆ ಅವಕಾಶ ಇರುತ್ತದೆ ಎಂದು ತಿಳಿಸಲಾಗಿದೆ.
ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು, ವಿಮಾನ ಮೂಲಕ ಅಯ್ಯಪ್ಪ ಸ್ವಾಮಿ ಭಕ್ತರು ಪ್ರಯಾಣ ಮಾಡುವಾಗ ನಿಯಮದಂತೆ ಇರುಮುಡಿಯನ್ನು ಕೈಯಿಂದ ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಆದರೆ ಈಗ ಇರುಮುಡಿಯನ್ನು ಭಕ್ತರು ಕೈಯಲ್ಲೇ ಹಿಡಿದುಕೊಂಡು ವಿಮಾನದಲ್ಲಿ ಪ್ರಯಾಣಿಸಬಹುದು. ಈ ಅನುಮತಿಯು ಇಂದಿನಿಂದ 2025ರ ಜನವರಿವರೆಗೆ ಇರುತ್ತದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ಇರುಮುಡಿಯಲ್ಲಿ ತೆಂಗಿನಕಾಯಿ ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
In a move to facilitate the ease of travel for Sabarimala pilgrims, we have issued a special exemption allowing the carrying of coconuts in 'Irumudi' as cabin baggage during the Mandalam-Makaravilakku pilgrimage period. This order will be in effect until January 20, 2025, with… pic.twitter.com/OZcmSMhXa4
— Ram Mohan Naidu Kinjarapu (@RamMNK)
In a move to facilitate the ease of travel for Sabarimala pilgrims, we have issued a special exemption allowing the carrying of coconuts in 'Irumudi' as cabin baggage during the Mandalam-Makaravilakku pilgrimage period. This order will be in effect until January 20, 2025, with… pic.twitter.com/OZcmSMhXa4
— Ram Mohan Naidu Kinjarapu (@RamMNK) October 26, 2024
">October 26, 2024
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ದಕ್ಷಿಣ ಭಾರತದ ಹಲವಾರು ಭಕ್ತಾದಿಗಳು ದೇವರಿಗೆ ಸಮರ್ಪಿಸಲು ತಮ್ಮ ಜೊತೆಗೆ ಇರುಮುಡಿ ಕಟ್ಟನ್ನು ತೆಗೆದುಕೊಂಡು ಬರುತ್ತಾರೆ. ಹಾಗಾಗಿ ಭಕ್ತಾದಿಗಳ ಅನುಕೂಲಕ್ಕೆಂದು ನಿಗದಿತ ಅವಧಿಯವರೆಗೆ ಮಾತ್ರ ಈ ವಿಶೇಷವಾದ ಅನುಮತಿ ಕೇಂದ್ರ ಸರ್ಕಾರ ನೀಡಿದೆ ಎಂದು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us