newsfirstkannada.com

×

Sabarimala; ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

Share :

Published October 28, 2024 at 9:44am

    2025ರ ಜನವರಿ ಅಂತ್ಯದವರೆಗೆ ಶಬರಿಮಲೆಯ ತೀರ್ಥಯಾತ್ರೆ ಇರುತ್ತೆ

    ದಕ್ಷಿಣ ಭಾರತದಿಂದ ಹೆಚ್ಚು ಭಕ್ತರು ಶಬರಿಮಲೆಗೆ ಪ್ರಯಾಣ ಮಾಡುತ್ತಾರೆ

    ಅಯ್ಯಪ್ಪಸ್ವಾಮಿ ಭಕ್ತರಿಗೆ ಎಲ್ಲಿಂದ ಎಲ್ಲಿವರೆಗೆ ಈ ಅನುಮತಿ ಇರುತ್ತೆ?

ನವದೆಹಲಿ: ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು ವಿಮಾನದ ಮೂಲಕ ಇರುಮುಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ. ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.

ಅಯ್ಯಪ್ಪ ಭಕ್ತರು ಇರುಮುಡಿ ತೆಗೆದುಕೊಂಡು ವಿಮಾನದಲ್ಲಿ ಹೋಗಲು ಈ ಮೊದಲು ಅವಕಾಶ ಇರಲಿಲ್ಲ. ಆದರೆ ಈಗ ಇದಕ್ಕೆ ಅನುಮತಿ ನೀಡಲಾಗಿದೆ. ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳಲ್ಲಿ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಒಯ್ಯಲು ಅವಕಾಶ ನೀಡಲಾಗಿದೆ. ಅಯ್ಯಪ್ಪ ಭಕ್ತರು ಇರುಮುಡಿ ತೆಗೆದುಕೊಂಡು ಹೋಗುವಾಗ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಮಾಡಲಾಗುತ್ತದೆ.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ದೋಸ್ತಿ ದರ್ಬಾರ್‌.. ನಿಖಿಲ್ ಪರ ಹೆಚ್​.ಡಿ ಕುಮಾರಸ್ವಾಮಿ, ಯದುವೀರ್ ಕ್ಯಾಂಪೇನ್

ಎಕ್ಸ್-ರೇ, ಸ್ಕ್ಯಾನಿಂಗ್, ಇಟಿಡಿ ಹಾಗೂ ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳನ್ನ ಮಾಡಿದ ನಂತರ ಇರುಮುಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ. 2025ರ ಜನವರಿ ಅಂತ್ಯದವರೆಗೆ ತೀರ್ಥಯಾತ್ರೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವು ತೆರೆದಿರುತ್ತದೆ. ಈವರೆಗೆ ಮಾತ್ರ ಭಕ್ತರಿಗೆ ಅವಕಾಶ ಇರುತ್ತದೆ ಎಂದು ತಿಳಿಸಲಾಗಿದೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು, ವಿಮಾನ ಮೂಲಕ ಅಯ್ಯಪ್ಪ ಸ್ವಾಮಿ ಭಕ್ತರು ಪ್ರಯಾಣ ಮಾಡುವಾಗ ನಿಯಮದಂತೆ ಇರುಮುಡಿಯನ್ನು ಕೈಯಿಂದ ತೆಗೆದುಕೊಂಡು ಹೋಗಲು ಅನುಮತಿ ಇರಲಿಲ್ಲ. ಆದರೆ ಈಗ ಇರುಮುಡಿಯನ್ನು ಭಕ್ತರು ಕೈಯಲ್ಲೇ ಹಿಡಿದುಕೊಂಡು ವಿಮಾನದಲ್ಲಿ ಪ್ರಯಾಣಿಸಬಹುದು. ಈ ಅನುಮತಿಯು ಇಂದಿನಿಂದ 2025ರ ಜನವರಿವರೆಗೆ ಇರುತ್ತದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ಇರುಮುಡಿಯಲ್ಲಿ ತೆಂಗಿನಕಾಯಿ ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ದಕ್ಷಿಣ ಭಾರತದ ಹಲವಾರು ಭಕ್ತಾದಿಗಳು ದೇವರಿಗೆ ಸಮರ್ಪಿಸಲು ತಮ್ಮ ಜೊತೆಗೆ ಇರುಮುಡಿ ಕಟ್ಟನ್ನು ತೆಗೆದುಕೊಂಡು ಬರುತ್ತಾರೆ. ಹಾಗಾಗಿ ಭಕ್ತಾದಿಗಳ ಅನುಕೂಲಕ್ಕೆಂದು ನಿಗದಿತ ಅವಧಿಯವರೆಗೆ ಮಾತ್ರ ಈ ವಿಶೇಷವಾದ ಅನುಮತಿ ಕೇಂದ್ರ ಸರ್ಕಾರ ನೀಡಿದೆ ಎಂದು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sabarimala; ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

https://newsfirstlive.com/wp-content/uploads/2024/10/AYYAPPA.jpg

Load More