/newsfirstlive-kannada/media/post_attachments/wp-content/uploads/2025/07/SACHIN_YUVI.jpg)
ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್.. ಈ ದಿಗ್ಗಜರ ನಡುವೆ ವಯಸ್ಸಿನ ಅಂತರವಿದೆ ನಿಜ. ಆದ್ರೆ, ಇವರಿಬ್ಬರೂ ಅತ್ಯಾಪ್ತರು. ಸಚಿನ್ಗೆ ಯುವಿ ಅಂದ್ರೆ ಪ್ರೀತಿ. ಯುವಿಗೆ ಸಚಿನ್ ಅಂದ್ರೆ ದೇವರು. ಇಷ್ಟೆಲ್ಲಾ ಅತ್ಯಾಪ್ತರಾಗಿದ್ರೂ, ಯುವರಾಜ್ ಸಿಂಗ್ ಪಾಲಿಗೆ ಸಚಿನ್ ಒಂದು ರೀತಿಯಲ್ಲಿ ವಿಲನ್. ಸಚಿನ್ ಮೇಲೆ ಯುವಿಗೆ ಕೋಪ ಯಾಕೆ?.
ಸಚಿನ್ ತೆಂಡುಲ್ಕರ್ ಮತ್ತು ಯುವರಾಜ್ ಸಿಂಗ್. ಚಾಂಪಿಯನ್ ಪ್ಲೇಯರ್ಸ್. ಒಬ್ಬರು ವಿಶ್ವ ಕ್ರಿಕೆಟ್ ಲೋಕದ ದೇವರಾಗಿದ್ರೆ, ಮತ್ತೊಬ್ಬರು ವಿಶ್ವ ಕ್ರಿಕೆಟ್ ಲೋಕದ ಸಿಕ್ಸರ್ ಕಿಂಗ್. ದಶಕದ ತನಕ ಒಂದಾಗಿ ಟೀಮ್ ಇಂಡಿಯಾ ಪರ ಆಡಿರುವ ಇವರು, ವಯಸ್ಸಿನ ಅಂತರಕ್ಕೂ 10 ವರ್ಷ. ಆದ್ರೆ, ಇವರಿಬ್ಬರ ನಡುವಿನ ಸ್ನೇಹಕ್ಕೆ ವಯಸ್ಸು ಎಂದಿಗೂ ಅಡ್ಡಿಯಾಗಿಲ್ಲ.
ಸಚಿನ್, ಯುವಿಗೆ ಸಹ ಆಟಗಾರನಾಗಿದ್ದಕ್ಕಿಂತ ಕೋಚ್, ಮೆಂಟರ್, ಗುರುವೇ ಆಗಿದ್ದರು. ಅದು ಜಸ್ಟ್ ಆನ್ಫೀಲ್ಡ್ನಲ್ಲಿ ಮಾತ್ರವಲ್ಲ. ಆಫ್ ದಿ ಫೀಲ್ಡ್ನಲ್ಲೂ ಯುವರಾಜ್ ಸಿಂಗ್ಗೆ ಸಚಿನ್ ಸ್ಪೂರ್ತಿಯ ಚಿಲುಮೆ. ಆರಾಧ್ಯ ದೈವವೇ.. ಆದ್ರೆ, ಇದೇ ಆರಾಧ್ಯ ದೈವ, ಯುವರಾಜ್ ಸಿಂಗ್ ಪಾಲಿಗೆ ವಿಲನ್ ಕೂಡ ಹೌದು.
ಯುವರಾಜ್ಗೆ ವಿಲನ್ ಆಗಿದ್ದೇಗೆ ಸಚಿನ್ ತೆಂಡುಲ್ಕರ್..?
ಅದು 2007.. ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ನಾಯಕರಾಗಿದ್ದರು. ಇದೇ ವೇಳೆ ಯುವರಾಜ್ ಸಿಂಗ್, ಉಪ ನಾಯಕರಾಗಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಇಂಗ್ಲೆಂಡ್ ಪ್ರವಾಸದ ನಂತರ ರಾಹುಲ್ ದ್ರಾವಿಡ್, ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಈ ವೇಳೆ ಸಹಜವಾಗೇ ಉಪ ನಾಯಕರಾಗಿದ್ದ ಯುವರಾಜ್ ಸಿಂಗ್, ಟೀಮ್ ಇಂಡಿಯಾ ನಾಯಕನಾಗುವ ಕನಸು ಕಂಡಿದ್ದರು. ಆದ್ರೆ, ಅಂದು ಪಟ್ಟಾಭಿಷೇಕದ ನಿರೀಕ್ಷೆಯಲ್ಲಿದ್ದ ಯುವರಾಜ್ ಸಿಂಗ್ಗೆ ಶಾಕ್ ಎದುರಾಯ್ತು. ಇದಕ್ಕೆ ಕಾರಣ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್.
ಯುವಿಯ ಆ ಒಂದು ಕನಸು ಈಡೇರಲಿಲ್ಲ ಯಾಕೆ..?
ರಾಹುಲ್ ದ್ರಾವಿಡ್ ಬಳಿಕ ನಾಯಕನಾಗುವ ನಿರೀಕ್ಷೆಯಲ್ಲಿದ್ದ ಯುವರಾಜ್ಗೆ, ಅವತ್ತು ನಾಯಕತ್ವ ಇರಲಿ, ವೈಸ್ ಕ್ಯಾಪ್ಟನ್ ಪಟ್ಟವೂ ಸಿಗಲಿಲ್ಲ. ಯುವಿ ಬದಲಿಗೆ ಎಮ್.ಎಸ್.ಧೋನಿಗೆ ಟಿ20 ತಂಡದ ನಾಯಕತ್ವ ಪಟ್ಟ ಸಿಗ್ತು. 2007ರ ಟಿ20 ವಿಶ್ವಕಪ್ ಗೆದ್ದ ಮಹೇಂದ್ರ ಸಿಂಗ್ ಧೋನಿ, ನಂತರ ಆಲ್ ಫಾರ್ಮೆಟ್ ಕ್ಯಾಪ್ಟನ್ ಆಗಿ, ವಿಶ್ವ ಕ್ರಿಕೆಟ್ ಲೋಕವನ್ನಾಳಿದ್ದು ಇತಿಹಾಸ. ಇದ್ರ ನಡುವೆ ಯುವರಾಜ್ ಸಿಂಗ್, ಟೀಮ್ ಇಂಡಿಯಾ ನಾಯಕರಾಗುವ ಕನಸು ಈಡೇರಲೇ ಇಲ್ಲ. ಟೀಮ್ ಇಂಡಿಯಾ ನಾಯಕನಾಗಲಿಲ್ಲ ಎಂಬ ನೋವು, ಕೊರಗು ಯುವರಾಜ್ ಸಿಂಗ್ನ ಇವತ್ತಿಗೂ ಕಾಡ್ತಾನೇ ಇದೆ.
ಧೋನಿ ಹೆಸರು ಶಿಫಾರಸು ಮಾಡಿದ್ದ ಸಚಿನ್.!
ಯುವರಾಜ್ ಸಿಂಗ್ಗೆ ಸಚಿನ್ ಆಪ್ತರು ನಿಜ. ಆದ್ರೆ, 2007ರಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಚರ್ಚೆ ಶುರುವಾಗಿತ್ತು. ಮತ್ತೆ ನೀವೇ ನಾಯಕತ್ವ ವಹಿಸಿಕೊಳ್ಳುವಂತೆಯೂ ಬಿಸಿಸಿಐ ಆಫರ್ ನೀಡಿತ್ತು. ಆದ್ರೆ, ಅಂದು ಸಚಿನ್ ಆಫರ್ನ ತಿರಸ್ಕರಿಸಿದರು. ಅಷ್ಟೇ ಅಲ್ಲ, ನಮ್ಮ ತಂಡದಲ್ಲಿ ನಾಯಕನಾಗಬಲ್ಲ ಆಟಗಾರ ಇದ್ದಾನೆ ಎಂದು ಧೋನಿ ಹೆಸರನ್ನ ಸೂಚಿಸಿದ್ದರು.
ಇದನ್ನೂ ಓದಿ:ಚೊಚ್ಚಲ ದ್ವಿಶತಕ ಬಾರಿಸಿದ ಶುಭ್ಮನ್ ಗಿಲ್.. ಆಂಗ್ಲರ ನೆಲದಲ್ಲಿ ಭಾರತದ ನಾಯಕನಿಂದ ಮಹತ್ವದ ಸಾಧನೆ!
ಮೈದಾನದಲ್ಲಿ ಧೋನಿಯ ಚಾಕಚಕ್ಯತೆ, ಆತನ ಮನಸ್ಥಿತಿ.. ವಿಕೆಟ್ ಕೀಪರ್ ಆಗಿ ಗೇಮ್ ರೀಡ್ ಮಾಡ್ತಿದ್ದ ರೀತಿ ಸಚಿನ್ಗೆ ಇಷ್ಟವಾಗಿತ್ತು. ಇದೇ ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿ, ನಾಯಕತ್ವಕ್ಕೆ ಬೆಸ್ಟ್ ಚಾಯ್ಸ್ ಎಂದು ಸಚಿನ್, ಧೋನಿಯ ಹೆಸರು ಶಿಫಾರಸು ಮಾಡಿದರು. ಬಿಸಿಸಿಐ ಸಚಿನ್ ಸಲಹೆಯನ್ನ ತಿರಸ್ಕರಿಸೋಕಾಗುತ್ತಾ.? ಒಪ್ಪಿ ನಾಯಕತ್ವ ನೀಡ್ತು. ಇದೇ ವೇಳೆ ಸಚಿನ್ ಏನಾದರೂ ಯುವರಾಜನ ಹೆಸರೇಳಿದ್ರೆ, ಯುವಿ ಟೀಮ್ ಇಂಡಿಯಾದ ರಾಜನಾಗ್ತಿದ್ರು. ಆದ್ರೆ, ಸಚಿನ್ ಧೋನಿಯನ್ನ ಬೆಂಬಲಿಸಿದರು.
ಸಚಿನ್, ಧೋನಿ ಹೆಸರು ಸೂಚಿಸುವುದರೊಂದಿಗೆ ಯುವರಾಜ್ಗೆ ನಾಯಕತ್ವದ ಪಟ್ಟ ಕೈತಪ್ಪಿತ್ತು. ಇದ್ರೊಂದಿಗೆ ವೈಯಕ್ತಿಕವಾಗಿ ಯುವರಾಜ್ ಸಿಂಗ್ಗೆ ವಿಲನ್ ಕೂಡ ಆದ್ರು. ಆದ್ರೆ, ಅಂದು ಸಚಿನ್ ತೆಗೆದುಕೊಂಡು ಆ ಒಂದು ನಿರ್ಧಾರ, ಟೀಮ್ ಇಂಡಿಯಾದ ಭವಿಷ್ಯವನ್ನೇ ಬದಲಿಸಿದ್ದು ಸುಳ್ಳಲ್ಲ. ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿತು. ಮೂರು ಐಸಿಸಿ ಟ್ರೋಫಿಯನ್ನೂ ಗೆಲ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ