newsfirstkannada.com

ರಸ್ತೆಯಲ್ಲಿ ಹೋಗ್ತಿದ್ದ ಅಭಿಮಾನಿಗೆ ಬಿಗ್​ ಸರ್ಪ್ರೈಸ್​ ಕೊಟ್ಟ ಕ್ರಿಕೆಟ್ ದೇವರು; ಭಾವನಾತ್ಮಕ ಕ್ಷಣದ ವಿಡಿಯೋ..!

Share :

Published February 2, 2024 at 8:16am

    ಅಭಿಮಾನಿಯನ್ನು ಚೇಸ್​ ಮಾಡಿ ಭೇಟಿ ಮಾಡಿದ ಸಚಿನ್

    ಸಚಿನ್ ತೆಂಡುಲ್ಕರ್​ ಸಿಂಪ್ಲಿಸಿಟಿಗೆ ಅಭಿಮಾನಿಗಳು ಫಿದಾ

    ರಸ್ತೆಯಲ್ಲಿ ಹೋಗ್ತಿದ್ದ ಅಭಿಮಾನಿಗೆ ಆದ ಸರ್ಪ್ರೈಸ್ ಹೇಗಿತ್ತು?

ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್​ ಅಭಿಮಾನಿಯೊಬ್ಬರಿಗೆ ಬಿಗ್​ ಸರ್ಪ್ರೈಸ್ ನೀಡಿದ್ದಾರೆ. ಮುಂಬೈನ ರಸ್ತೆ ಒಂದರಲ್ಲಿ ತೆಂಡುಲ್ಕರ್ ಅಭಿಮಾನಿಯೊಬ್ಬ ಬೈಕ್ ಮೇಲೆ ಹೋಗುತ್ತಿದ್ದ.

ಈ ಅಭಿಮಾನಿ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಜರ್ಸಿ ತೊಟ್ಟಿದ್ದ. ಅದರ ಹಿಂದೆ 10, I miss you ಎಂದು ಬರೆಯಲಾಗಿತ್ತು. ಹಿಂಬದಿಯಿಂದ ಜರ್ಸಿ ನೋಡ್ತಿದ್ದಂತೆಯೇ ಆತ ತೆಂಡುಲ್ಕರ್ ಅಭಿಮಾನಿ ಅನ್ನೋದು ದೃಢವಾಗುತ್ತಿತ್ತು. ಅದೇ ಮಾರ್ಗವಾಗಿ ತೆಂಡುಲ್ಕರ್ ಕೂಡ ಹೋಗುತ್ತಿದ್ದರು. ಅಭಿಮಾನಿ ಧರಿಸಿದ್ದ ಜರ್ಸಿ ತೆಂಡುಲ್ಕರ್ ಕಣ್ಣಿಗೆ ಬಿದ್ದಿದೆ. ಆಗ ಸಚಿನ್​​ಗೆ ಆತನನ್ನು ಮಾತನಾಡಿಸುವ ಬಯಕೆ ಆಗಿದೆ. ಕೂಡಲೇ ಕಾರಿನ ಮೂಲಕ ಬೈಕ್ ಚೇಸ್ ಮಾಡುತ್ತಾರೆ. ಆತ ಬೈಕ್ ನಿಲ್ಲಿಸುತ್ತಿದ್ದಂತೆಯೇ, ಕಾರಿನ ವಿಂಡೋ ಓಪನ್ ಮಾಡಿದ ಕ್ರಿಕೆಟ್​ ದೇವರು, ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಬಗ್ಗೆ ಕೇಳಬೇಕಿತ್ತು ಎಂದು ಕೇಳುತ್ತಾರೆ.

ಆಗ ಸಚಿನ್​​ರನ್ನು ನೋಡ್ತಿದ್ದಂತೆ ಅಭಿಮಾನಿ ಬಿಗ್​ಸರ್ಪ್ರೈಸ್​ ಆಗ್ತಾರೆ. ಸರ್.. ಸರ್.. ಎಂದು ಕೈಮುಗಿಯುತ್ತಾರೆ. ಕೊನೆಗೆ ಅಭಿಮಾನಿ ಜೊತೆ ತೆಂಡುಲ್ಕರ್ ಮಾತುಕತೆ ನಡೆಸ್ತಾರೆ..ಕೊನೆಗೆ ಸಚಿನ್ ಪ್ರೀತಿಯ ಅಭಿಮಾನಿಗೆ ಆಟೋಗ್ರಾಫ್ ನೀಡಿದ್ದಾರೆ. ಈ ಅಭಿಮಾನಿಯನ್ನು ಭೇಟಿಯಾದ ಅನುಭವವನ್ನ ತೆಂಡುಲ್ಕರ್ ಟ್ಚಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಸ್ತೆಯಲ್ಲಿ ಹೋಗ್ತಿದ್ದ ಅಭಿಮಾನಿಗೆ ಬಿಗ್​ ಸರ್ಪ್ರೈಸ್​ ಕೊಟ್ಟ ಕ್ರಿಕೆಟ್ ದೇವರು; ಭಾವನಾತ್ಮಕ ಕ್ಷಣದ ವಿಡಿಯೋ..!

https://newsfirstlive.com/wp-content/uploads/2024/02/SACHIN-2.jpg

Load More