newsfirstkannada.com

Share :

Published June 7, 2023 at 10:29am

    ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಶುರು

    ಆಸೀಸ್​​, ಟೀಂ ಇಂಡಿಯಾ ಆಟಗಾರರನ್ನು ಹೊಗಳಿದ ಸಚಿನ್​​

    ಈ ಆಟಗಾರ​​ ಟೀಂ ಇಂಡಿಯಾದ ಪ್ರಮುಖ ಆಸ್ತಿ ಎಂದ ಮಾಸ್ಟರ್​!

ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಶುರುವಾಗಿದೆ. ಈ ಹೈವೋಲ್ಟೇಜ್​​ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಟ್ಟಕ್ಕಾಗಿ ಸೆಣೆಸಾಟ ನಡೆಸುತ್ತಿವೆ. ಈಗಾಗಲೇ ಟೀಂ ಇಂಡಿಯಾ ಟಾಸ್​ ಗೆದ್ದಿದ್ದು, ಆಸ್ಟ್ರೇಲಿಯಾ ತಂಡ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ. ಹೀಗಿರುವಾಗ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಸಚಿನ್​​​, ಇಂಗ್ಲೆಂಡ್‌ನಲ್ಲಿ ಕೌಂಟಿ ಚಾಂಫಿಯನ್‌ಶಿಪ್‌ನಲ್ಲಿ ಭಾಗಿಯಾಗಿದ್ದ ಚೇತೇಶ್ವರ್ ಪೂಜಾರ ಅನುಭವ ಈ ಪಂದ್ಯದಲ್ಲಿ ಮಹತ್ವದ ಪಡೆದುಕೊಳ್ಳಲಿದೆ. ಆಸ್ಟ್ರೇಲಿಯಾ ತಂಡದ ಮಾರ್ನಸ್ ಲ್ಯಾಬುಶೈನ್ ಕೂಡ ಕೌಂಟಿ ಟೂರ್ನಿಯಲ್ಲಿ ಆಡಿದ್ದರು. ಹೀಗಾಗಿ ಎರಡು ತಂಡಗಳಿಗೂ ಈ ಇಬ್ಬರು ಆಟಗಾರರ ಅನುಭವ ಬಹಳ ಮುಖ್ಯ ಎಂದರು.

ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದು ಅಷ್ಟು ಸುಲಭದ ಮಾತಲ್ಲ. ಚೇತೇಶ್ವರ್ ಪೂಜಾರ, ಮಾರ್ನಸ್ ಲ್ಯಾಬುಶೈನ್ ಇಬ್ಬರು ಕೌಂಟಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸ್ಟೀವ್ ಸ್ಮಿತ್ ಆಡಿದ್ರೂ ಅಂಥಹ ಹೇಳಿಕೊಳ್ಳುವ ಪ್ರದರ್ಶನವೇನು ಬರಲಿಲ್ಲ. ಆದರೆ, ಈ ಪಂದ್ಯದಲ್ಲಿ ಪೂಜಾರ, ಲ್ಯಾಬುಶೈನ್ ಇಬ್ಬರು ಅದ್ಭುತ ಪ್ರದರ್ಶನ ನೀಡುವುದರಲ್ಲಿ ಡೌಟೇ ಇಲ್ಲ ಎಂದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

https://newsfirstlive.com/wp-content/uploads/2023/06/Test-Team-India-1.jpg

Load More