/newsfirstlive-kannada/media/post_attachments/wp-content/uploads/2025/04/SACHIN.jpg)
ಪಹಲ್ಗಾಮ್ ಭಯೋತ್ಪಾದಕ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಗಡಿಗಳಲ್ಲಿ ಮಿಲಿಟರಿ ಚಟುವಟಿಕೆಗಳು ಜೋರಾಗಿವೆ. ಇದು ಯುದ್ಧದ ಸಾಧ್ಯತೆಯನ್ನು ಸೂಚಿಸುತ್ತಿದೆ. ಆದರೆ ಇದುವರೆಗೂ ಯಾವುದೇ ದೇಶ, ಮಿಲಿಟರಿ ಆಪರೇಷನ್ ಬಗ್ಗೆ ಘೋಷಣೆ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕ್ ಮಧ್ಯೆ ಯುದ್ಧ ನಡೆದರೆ ಮಹೇಂದ್ರ ಸಿಂಗ್ ಧೋನಿ ಮತ್ತು ತೆಂಡೂಲ್ಕರ್ ಅವರಂತಹ ಕ್ರಿಕೆಟಿಗರು ಗಡಿಯಲ್ಲಿ ನಿಂತು ಹೋರಾಟ ಮಾಡ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
ಧೋನಿ, ಸಚಿನ್ ಯಾಕೆ..?
ಭಾರತೀಯ ಸೇನೆಯಲ್ಲಿ ಸಚಿನ್, ಧೋನಿ ಅಧಿಕಾರಿ ಶ್ರೇಣಿಯಲ್ಲಿದ್ದಾರೆ. ಭಾರತೀಯ ಸೇನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಸಚಿನ್ ತೆಂಡೂಲ್ಕರ್, ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. ಇವರಿಬ್ಬರು ಮಾತ್ರವಲ್ಲ, ಅನೇಕ ಕ್ರೀಡಾ ತಾರೆಯರು, ರಾಜಕೀಯ ನಾಯಕರು ಭಾರತೀಯ ಸೇನೆಯಲ್ಲಿದ್ದಾರೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳಿಗೆ ಮೂರು ಗುಡ್ನ್ಯೂಸ್..!
ಟೆರಿಟೋರಿಯಲ್ ಆರ್ಮಿಯಲ್ಲಿ ಆಟಗಾರರು..
ಭಾರತೀಯ ಸೇನೆಯು ಅನೇಕ ಆಟಗಾರರಿಗೆ ಗೌರವ ಬಿರುದು (Honorary rank) ನೀಡಿದೆ. ಇದರಲ್ಲಿ ಧೋನಿ, ಸಚಿನ್ ಮಾತ್ರ ಸೇರಿಲ್ಲ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಶೂಟರ್ ಅಭಿನವ್ ಬಿಂದ್ರಾ, ರಾಜಕಾರಣಿ ಅನುರಾಗ್ ಠಾಕೂರ್, ಸಚಿನ್ ಪೈಲಟ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ನಾನಾ ಪಾಟೇಕರ್ ಸೇರಿದಂತೆ ಅನೇಕರಿದ್ದಾರೆ. ಇವರೆಲ್ಲರೂ ಪ್ರಾದೇಶಿಕ ಸೈನ್ಯದಲ್ಲಿ ಱಂಕ್ (Territorial army) ಪಡೆದುಕೊಂಡಿದ್ದಾರೆ. ತೆಂಡುಲ್ಕರ್, ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಅವರು ಪ್ಯಾರಾಚೂಟ್ ರೆಜಿಮೆಂಟ್‌ನಿಂದ ಬಂದು ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ.
ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರ ಜೊತೆ ಮೀಟಿಂಗ್.. ಕುತೂಹಲ ಮೂಡಿಸಿದ ರಾಜನಾಥ್ ಸಿಂಗ್- ಮೋದಿ ಭೇಟಿ
ಟೆರಿಟೋರಿಯಲ್ ಸೈನ್ಯವು ಸಾಮಾನ್ಯ ಸೇನೆಗಿಂತ ಎಷ್ಟು ಭಿನ್ನ?
Territorial army ಸಾಮಾನ್ಯ ಸೈನ್ಯಕ್ಕಿಂತ ಭಿನ್ನವಾಗಿದೆ. ಇದು ಸ್ವಯಂ-ಸೇವಕ ಸೇವೆಯಾಗಿದೆ. ಇದರಲ್ಲಿ 18 ರಿಂದ 42 ವರ್ಷದೊಳಗಿನ ಯಾವುದೇ ನಾಗರಿಕರು ಭಾಗವಹಿಸಬಹುದು. ಪ್ರಾದೇಶಿಕ ಸೇನೆಗೆ ನೇಮಕಾತಿಯನ್ನು ಸೇನೆಯೇ ಮಾಡಲಿದೆ. ಇದಕ್ಕಾಗಿ ಅಭ್ಯರ್ಥಿಗಳು ವೈದ್ಯಕೀಯವಾಗಿ ಸದೃಢರಾಗಿರಬೇಕು. ಯಾವುದೋ ಕಾರಣಗಳಿಂದ ಸೈನ್ಯ ಸೇರಲು ಸಾಧ್ಯವಾಗದ ಯುವಕರಿಗೆ ದೇಶ ಸೇವೆ ಮಾಡುವ ಅವಕಾಶವನ್ನು ಪ್ರಾದೇಶಿಕ ಸೇನೆ ನೀಡುತ್ತದೆ. ಆದರೆ ಪ್ರಾದೇಶಿಕ ಸೇನೆ ಯಾವುದೇ ರೀತಿಯ ಉದ್ಯೋಗ ಖಾತರಿಪಡಿಸಲ್ಲ.
ಕ್ರಿಕೆಟಿಗರು ಯುದ್ಧಕ್ಕೆ ಬರ್ತಾರಾ?
ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯು ಮೊದಲು ಮುಂದೆ ಬರುತ್ತದೆ. ನಮ್ಮ ಸೈನಿಕರು ಗಡಿಗಳಲ್ಲಿ ನಿಂತು ಎದೆಯೊಡ್ಡಿ ಶತ್ರುಗಳನ್ನು ನಾಶ ಮಾಡ್ತಾರೆ. ಪರಿಸ್ಥಿತಿ ಹದಗೆಟ್ಟಾಗ, ಅರೆಸೈನಿಕ ಪಡೆಗಳ ಸಹಾಯ ಪಡೆಯುತ್ತಾರೆ. ಯುದ್ಧದ ಸಂದರ್ಭದಲ್ಲಿ ಸೈನ್ಯಕ್ಕೆ ಅಗತ್ಯವಿದ್ದರೆ ಮಾತ್ರ ಪ್ರಾದೇಶಿಕ ಸೈನ್ಯವನ್ನು ಕರೆಯಬಹುದು. ಹೀಗಾಗಿ ಟೆರಿಟೋರಿಯಲ್ ಸೈನ್ಯವನ್ನು ಎರಡನೇ ಸಾಲಿನ ರಕ್ಷಣಾ ಪಡೆ ಅಂತಲೂ ಕರೆಯಲಾಗುತ್ತದೆ. ಟೆರಿಟೋರಿಯಲ್ ಸೇನೆಯು 1962, 1965, 1971 ಮತ್ತು 1999 ರಲ್ಲಿ ಕಾರ್ಗಿಲ್ ಯುದ್ಧಗಳಲ್ಲಿ ಭಾಗವಹಿಸಿವೆ. ಅಂತೆಯೇ ಈಗ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆದರೆ, ಸೇನೆಗೆ ಪ್ರಾದೇಶಿ ಸೇನೆಯ ಅಗತ್ಯವಿದ್ದರೆ ಧೋನಿ, ತೆಂಡುಲ್ಕರ್ ಅವರಿಗೂ ಯುದ್ಧಕ್ಕೆ ಬರುವಂತೆ ಆಹ್ವಾನ ನೀಡಬಹುದು.
ಇದನ್ನೂ ಓದಿ: ಭಾರತದ ಮೇಲೆ ಗೂಬೆ ಕೂರಿಸಿದ ಶಾಹಿದ್ ಅಫ್ರಿದಿ.. ಮಾಜಿ ಕ್ರಿಕೆಟರ್ ಲೂಸ್ ಟಾಕ್! ವಿಡಿಯೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ