/newsfirstlive-kannada/media/post_attachments/wp-content/uploads/2025/06/SACHIN_KOHLI_GILL.jpg)
ನಾಯಕನಾಗಿ ಹೊಸ ಅಧ್ಯಾಯ ಆರಂಭಿಸೋಕೆ ಮುನ್ನವೇ ಶುಭ್ಮನ್ ಗಿಲ್ಗೆ ಶಾಕ್ ಎದುರಾಗಿದೆ. ನೂತನ ನಾಯಕನ ಮೇಲೆ ಅಭಿಮಾನಿಗಳು ಕೆಂಡ ಕಾರ್ತಿದ್ದಾರೆ. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಫ್ಯಾನ್ಸ್ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ಗಿಲ್ ಮೇಲೆ ಅಭಿಮಾನಿಗಳಿಗೆ ಈ ಪರಿ ಸಿಟ್ಟು ಯಾಕೆ?.
ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ ಕಾವು ಕ್ರಿಕೆಟ್ ಲೋಕವನ್ನ ಆವರಿಸ್ತಿದೆ. ಕೆಲವೇ ದಿನಗಳಲ್ಲಿ ಪ್ರತಿಷ್ಠೆ ಸರಣಿ ಆರಂಭವಾಗಲಿದ್ದು, ಹೊಸ ಅಧ್ಯಾಯ ಆರಂಭಿಸೋಕೆ ಕ್ಯಾಪ್ಟನ್ ಶುಭ್ಮನ್ ಗಿಲ್ ಸಜ್ಜಾಗಿದ್ದಾರೆ. ನಾಯಕನಾಗಿ ಶುಭಾರಂಭವನ್ನ ಎದುರು ನೋಡ್ತಿರೋ ಶುಭ್ಮನ್ ಗಿಲ್ ಸರಣಿಗೆ ಭರ್ಜರಿ ತಯಾರಿ ನಡೆಸಿ ಸಜ್ಜಾಗಿದ್ದಾರೆ.
ಆಳ್ವಿಕೆ ಆರಂಭಕ್ಕೂ ಮೊದಲೇ ಗಿಲ್ಗೆ ಶಾಕ್
ಟೀಮ್ ಇಂಡಿಯಾದಲ್ಲಿ ಶುಭ್ಮನ್ ಗಿಲ್ ಆಳ್ವಿಕೆ ಆರಂಭಕ್ಕೂ ಮುನ್ನವೇ ಶಾಕ್ ಎದುರಾಗಿದೆ. 18 ವರ್ಷಗಳ ಬಳಿಕ ಇಂಗ್ಲೆಂಡ್ನಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸೋ ಲೆಕ್ಕಾಚಾರದಲ್ಲಿದ್ದ ನಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಮೇಲೆ ಅಭಿಮಾನಿಗಳು ಕಿಡಿ ಕಾರ್ತಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಕಿಂಗ್ ವಿರಾಟ್ ಕೊಹ್ಲಿಯ ಫ್ಯಾನ್ಸ್ ಗಿಲ್ನ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ?.
ಶುಭ್ಮನ್ ಗಿಲ್ ಬ್ಯಾಟ್ನಲ್ಲಿ ಪ್ರಿನ್ಸ್ ಎಂಬ ಅಡಿಬರಹ.!
ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರ ಫೋಟೋಶೂಟ್ ನಡೆದಿದೆ. ನಾಯಕ ಶುಭ್ಮನ್ ಗಿಲ್ ಸ್ಪೆಷಲ್ ಶೂಟ್ ಕೂಡ ಇದೇ ವೇಳೆ ನಡೆದಿದೆ. ಈ ವೇಳೆ ಬ್ಯಾಟ್ ಹಿಡಿದು ಗಿಲ್ ಕೆಲ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಆ ಬ್ಯಾಟ್ನಲ್ಲಿ ಪ್ರಿನ್ಸ್ ಎಂಬ ಅಡಿ ಬರಹವಿದೆ. ಆ ಒಂದು ಟ್ಯಾಗ್ಲೈನ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಚಿನ್, ಕೊಹ್ಲಿ ಅಭಿಮಾನಿಗಳು ಗಿಲ್ ಮೇಲೆ ಕೆಂಡಕಾರ್ತಿದ್ದಾರೆ.
ಸಚಿನ್, ಕೊಹ್ಲಿಗಿಲ್ಲದ ಕಿರೀಟ ನಿನಗೆ ಬೇಕಾ.? ಫ್ಯಾನ್ಸ್ ಪ್ರಶ್ನೆ.!
ಗಿಲ್ಗೂ ಮುನ್ನ ಭಾರತೀಯ ಕ್ರಿಕೆಟಿಗರ ಪೈಕಿ MRF ಬ್ಯಾಟ್ ಬಳಸಿದ್ದು ಇಬ್ಬರು ದಿಗ್ಗಜರು ಮಾತ್ರ. ಮೊದಲು ಸಚಿನ್ ತೆಂಡುಲ್ಕರ್, ಆ ಬಳಿಕ ವಿರಾಟ್ ಕೊಹ್ಲಿ. ಇವರಿಬ್ಬರು ಬ್ಯಾಟ್ ಬಳಸಿದ್ದ ಬ್ಯಾಟ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಅಂತಾಗ್ಲಿ, ಕಿಂಗ್ ಅಂತಾಗ್ಲಿ ಯಾವುದೇ ಅಡಿಬರಹ ಇರಲಿಲ್ಲ. ಆದ್ರೆ, ಕಳೆದ ಕೆಲ ತಿಂಗಳಿನಿಂದ ಈ ಬ್ಯಾಟ್ ಸ್ಪಾನರ್ಶಿಪ್ ಪಡೆದಿರೋ ಗಿಲ್ ಬ್ಯಾಟ್ನಲ್ಲಿ ಪ್ರಿನ್ಸ್ ಅನ್ನೋ ಅಡಿಬರಹವಿದೆ. ವಿಶ್ವ ಕ್ರಿಕೆಟ್ ಲೋಕದಲ್ಲಿ ಎಲ್ಲವನ್ನೂ ಸಾಧಿಸಿದ್ದ ಸಚಿನ್, ಕೊಹ್ಲಿಗೆ ಇರದ ಟ್ಯಾಗ್ಲೈನ್, ಕೆಲ ವರ್ಷಗಳ ಹಿಂದಷ್ಟೇ ಕ್ರಿಕೆಟ್ ಆಡಲು ಆರಂಭಿಸಿರೋ ಗಿಲ್ ಬ್ಯಾಟ್ನಲ್ಲಿರೋದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಲೆಜೆಂಡ್ಗಳಿಗೆ ನೀಡೋ ಗೌರವ ಇದೇನಾ.?
ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕದ ದೇವರು. ವಿರಾಟ್ ಕೊಹ್ಲಿಯನ್ನೂ ವಿಶ್ವಾದ್ಯಂತ ಆರಾಧಿಸೋ ಅಭಿಮಾನಿಗಳಿದ್ದಾರೆ. ಇವರಿಬ್ಬರು ಕ್ರಿಕೆಟ್ನಲ್ಲಿ ಮಾಡಿದ ಸಾಧನೆ, ಕ್ರಿಕೆಟ್ಗೆ ನೀಡಿದ ಕೊಡುಗೆ ಅಪಾರ. ಕ್ರಿಕೆಟ್ ಜಗತ್ತು ಕಂಡ ದಂತಕಥೆಗಳು ಇವ್ರು. ನಮ್ಮ ಭಾರತ ಮಾತ್ರವಲ್ಲ.. ವಿದೇಶದ ಹಲವು ಯುವ ಕ್ರಿಕೆಟಿಗರ ಪಾಲಿಗೆ ಇವ್ರೆ ರೋಲ್ ಮಾಡೆಲ್. ಇವರನ್ನ ಅಪಾರವಾಗಿ ಗೌರವಿಸುವರು ಎಲ್ಲೆಡೆ ಸಿಗ್ತಾರೆ. ಆದ್ರೆ, ಗಿಲ್ ಲೆಜೆಂಡ್ಗಳನ್ನ ಗೌರವಿಸುವಲ್ಲಿ ಎಡವಿದ್ದಾರೆ. ಬ್ಯಾಟ್ ಸ್ಪಾನ್ಸರ್ ಮಾಡ್ತಿರೋ MRF ಕಂಪನಿಯವರು ಆ ಟ್ಯಾಗ್ ಲೈನ್ ಹಾಕಿರಬಹುದು. ಆದ್ರೆ, ಲೆಜೆಂಡ್ಗಳಿಗೆ ಸಿಗದ ವಿಶೇಷ ಗೌರವ ನನಗ್ಯಾಕೆ ಎಂದು ಗಿಲ್ ತಿರಸ್ಕರಿಸಬಹುದಿತ್ತು. ಆದ್ರೆ, ಗಿಲ್ ಆ ಕೆಲಸ ಮಾಡಿಲ್ಲ. ಫ್ಯಾನ್ಸ್ ಸಿಟ್ಟಿಗೆ ಇದೂ ಒಂದು ಕಾರಣವಾಗಿದೆ.
ಇದನ್ನೂ ಓದಿ:ಹಾಲಿಗಾಗಿ ಅಲ್ಲವೇ ಅಲ್ಲ, ಕತ್ತೆಗಳಿಗೆ ಭಾರೀ ಬೇಡಿಕೆ; ಡಾಂಕಿ ಲಕ್ಷ ಲಕ್ಷ ರೂಪಾಯಿಗೆ ಮಾರಾಟ!
ಸಾಧನೆಯನ್ನೇ ಮಾಡದೇ ಕಿರೀಟ ಯಾಕೆ.?
ಶುಭ್ಮನ್ ಗಿಲ್, ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಸಾಧಿಸೋದು ತುಂಬಾ ಇದೆ. ನೀವು ನಂಬ್ತಿರೋ ಇಲ್ವೋ.. ಟೆಸ್ಟ್ ಕ್ಯಾಪ್ಟನ್ ಪಟ್ಟವೇರಿರೋ ಶುಭ್ಮನ್ ಗಿಲ್, ಬಾಂಗ್ಲಾದೇಶವನ್ನ ಹೊರತುಪಡಿಸಿದ್ರೆ, ಬೇರಾವ ದೇಶದಲ್ಲೂ ಸೆಂಚುರಿಯನ್ನೇ ಸಿಡಿಸಿಲ್ಲ. ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಕಾಲಿಟ್ಟು 5 ವರ್ಷವಾದ್ರೂ ಎವರೇಜ್ ಸಾಧನೆ ಮಾಡಿದ್ದಾರೆ.
ಟಿ20 ಫಾರ್ಮೆಟ್ನಲ್ಲೂ ಅಷ್ಟೇ ಗಿಲ್ ಅಬ್ಬರ ನಡೆದಿಲ್ಲ. ಹೀಗಾಗಿ ಸಾಧನೆ ಮಾಡದೇ ತನ್ನ ಬೆನ್ನು ತಾನೇ ತಟ್ಟಿಕೊಂಡರೆ ಹೇಗೆ ಅನ್ನೋ ಚರ್ಚೆಯೂ ಸೋಷಿಯಲ್ ಮೀಡಿಯಾದಲ್ಲಿ ನಡೀತಿದೆ. ನಾಯಕನಾಗಿ ಕಾರ್ಯರಂಭ ಮಾಡೋದಕ್ಕೆ ಮುನ್ನ ಅಭಿಮಾನಿಗಳ ಆಕ್ರೋಶಕ್ಕೆ ಗಿಲ್ ತುತ್ತಾಗಿದ್ದಾರೆ. ಲೆಜೆಂಡಗಳನ್ನ ಗೌರವಿಸಲು ಮುಂದಾದ್ರೂ ತನ್ನ ಬ್ಯಾಟ್ ಮೇಲಿದ್ದ ಸ್ಟಿಕ್ಕರ್ನ ತೆಗೀತಾರಾ?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ