newsfirstkannada.com

VIDEO: ಪ್ರೇಮಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್‌ ಮೇಲೆ ಹಲ್ಲೆ ಮಾಡಿದ್ರಾ ಸಚಿನ್‌? ಏನಿದು ಟ್ವಿಸ್ಟ್‌!

Share :

Published April 12, 2024 at 8:23pm

  ಸೀಮಾ ಹೈದರ್‌ಗೆ ಗಂಡ ಸಚಿನ್‌ ಹಲ್ಲೆ ಮಾಡಿರುವ ವಿಡಿಯೋ ವೈರಲ್‌!

  ಪಬ್​ಜೀ ಪ್ರಿಯಕರನಿಗಾಗಿ ಪಾಕ್‌ ಬಿಟ್ಟು ಬಂದ ಸೀಮಾ ಹೈದರ್‌ ಹೇಗಿದ್ದಾರೆ?

  ಉತ್ತರಪ್ರದೇಶದ ನೆಲೆಸಿರುವ ಸೀಮಾ ಹೈದರ್, ಸಚಿನ್ ಮಧ್ಯೆ ಜಗಳ ಆಯ್ತಾ?

ಪಬ್​ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಪ್ರೀತಿಯಲ್ಲಿ ಬಿರುಗಾಳಿ ಬೀಸಿ ಸಚಿನ್‌, ಸೀಮಾ ಹೈದರ್ ಮೇಲೆ ಹಲ್ಲೆ ಮಾಡಿದ್ದಾನೆ ಅನ್ನೋ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ಪ್ರಿಯಕರನ ನಂಬಿ ಭಾರತಕ್ಕೆ ಬಂದಿದ್ದ ಸೀಮಾಗೆ ಗಂಭೀರ ಗಾಯಗಳಾಗಿವೆ.

ಸೋಷಿಯಲ್ ಮೀಡಿಯಾದಲ್ಲಿ ಸೀಮಾ ಹೈದರ್‌ ಮುಖಕ್ಕೆ ಸಚಿನ್‌ ಪಂಚ್‌ ಕೊಟ್ಟಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಸೀಮಾ ಹಾಗೂ ಆಕೆಯ ಗಂಡ ಸಚಿನ್ ಮೀನಾ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಸಚಿನ್ ಸೀಮಾ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸೀಮಾ ಮುಖದಲ್ಲಿ ಗಾಯದ ಗುರುತುಗಳಿರೋ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.

ಸೀಮಾ ಹೈದರ್ ಮೇಲೆ ಸಚಿನ್ ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಖುದ್ದು ಸೀಮಾ ಹೈದರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ವೈರಲ್ ವಿಡಿಯೋ ನೋಡಿ ಪ್ರತಿಕ್ರಿಯಿಸಿರುವ ಸೀಮಾ ಹೈದರ್, ಈ ಸುದ್ದಿಯನ್ನ ತಳ್ಳಿ ಹಾಕಿದ್ದಾರೆ.

ಸಚಿನ್ ಮೀನಾ ಜೊತೆ ಸೇರಿ ವಿಡಿಯೋ ಮಾಡಿರೋ ಸೀಮಾ ಹೈದರ್‌, ನಾನು ಭಾರತದಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ಗಂಡನಿಂದ ನನಗೆ ಯಾವುದೇ ಹಲ್ಲೆಯಾಗಿಲ್ಲ. ರಂಜಾನ್‌ ಪವಿತ್ರ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನದ ನ್ಯೂಸ್ ಚಾನೆಲ್‌ಗಳು ಸುಳ್ಳು ಸುದ್ದಿ ಹಬ್ಬಿಸಿದೆ. ನಾನು ನನ್ನ ಪತಿ ಜೊತೆ ಆನಂದವಾಗಿದ್ದೇನೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆ. ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹರಿದಾಡುತ್ತಿರುವ ವಿಡಿಯೋ ಸುಳ್ಳು ಎಂದು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ಪಬ್​ಜೀ ಪ್ರಿಯಕರ ಸಚಿನ್‌ಗೆ ಗುಡ್‌ನ್ಯೂಸ್‌ ಕೊಟ್ಟ ಸೀಮಾ ಹೈದರ್.. ಈ ಸುದ್ದಿ ನಿಜಾನಾ?

2020ರಲ್ಲಿ ಪಬ್‌ಜೀ ಗೇಮ್ ಮೂಲಕ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಮಧ್ಯೆ ಪ್ರೇಮಾಂಕುರವಾಗಿತ್ತು. ಸಚಿನ್‌ಗಾಗಿ ಸೀಮಾ ಪಾಕಿಸ್ತಾನ ಬಿಟ್ಟು ನೇಪಾಳದ ಮೂಲಕ ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದರು. ಸೀಮಾ ಹೈದರ್‌ ಮೇಲೆ ಬಹಳಷ್ಟು ತನಿಖೆ, ವಿಚಾರಣೆ ನಡೆದ ಬಳಿಕ ಭಾರತದಲ್ಲಿ ನೆಲೆಸಲು ಅವಕಾಶ ನೀಡಲಾಗಿದೆ. ಕಳೆದ 4 ವರ್ಷಗಳಿಂದ ಉತ್ತರಪ್ರದೇಶದ ನೋಯ್ಡಾದಲ್ಲಿ ನೆಲೆಸಿರುವ ಸೀಮಾ ಹೈದರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪ್ರೇಮಿಗಾಗಿ ಪಾಕ್ ಬಿಟ್ಟು ಬಂದ ಸೀಮಾ ಹೈದರ್‌ ಮೇಲೆ ಹಲ್ಲೆ ಮಾಡಿದ್ರಾ ಸಚಿನ್‌? ಏನಿದು ಟ್ವಿಸ್ಟ್‌!

https://newsfirstlive.com/wp-content/uploads/2024/04/Seema-Haider-1.jpg

Load More