/newsfirstlive-kannada/media/post_attachments/wp-content/uploads/2025/04/JET.jpg)
ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಜೆಟ್ ವಿಮಾನವೊಂದು ಗುಜರಾತ್ ನ ಜಾಮ್ ನಗರದ ಬಳಿಯ ಸುವರ್ಧಾ ಎಂಬ ಹಳ್ಳಿಯ ಹೊರವಲಯದಲ್ಲಿ ಅಪಘಾತಕ್ಕೀಡಾಗಿದೆ. ಒಬ್ಬ ಪೈಲಟ್ ಎಸ್ಕೇಪ್, ಮತ್ತೊಬ್ಬ ಪೈಲಟ್‌ಗಾಗಿ ಹುಡುಕಾಟ ನಡೆದಿದೆ.
ವಿಮಾನವನ್ನ ತರಬೇತಿಗಾಗಿ ಕೊಂಡೊಯ್ದಿದ್ದರು. ಆದರೆ, ಆಕಾಶದಲ್ಲಿ ಹಾರಾಡುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ವಿಮಾನವು ರಾತ್ರಿ ಗುಜರಾತ್ನ ಜಾಮ್ ನಗರದಿಂದ 12 ಕಿಮೀ ದೂರದಲ್ಲಿರು ಸುವರ್ಧಾ ಎಂಬ ಹಳ್ಳಿಯ ಹೊರವಲಯದಲ್ಲಿ ನೆಲಕ್ಕೆ ಅಪ್ಪಳಿಸಿದೆ. ಅಪಘಾತದ ವೇಳೆ ಅದರಲ್ಲಿ ಇಬ್ಬರು ಪೈಲಟ್ಗಳು ಇದ್ದರೆಂಬುದು ಖಾತ್ರಿಯಾಗಿದೆ.
ಇದನ್ನೂ ಓದಿ: ಸರ್ಕಾರಿ ಕೆಲಸಕ್ಕೆ ಕಾಯುತ್ತಿರೋರಿಗೆ ಗುಡ್ನ್ಯೂಸ್; ಶೀಘ್ರದಲ್ಲೇ 2 ಸಾವಿರ ಹುದ್ದೆಗಳಿಗೆ ನೇಮಕಾತಿ
Saddened to know about Indian Air Force #Jaguar fighter aircraft crashes in Jamnagar, Gujarat. One pilot is rescued as per media reports. Hoping for safety of pilot and locals. #Jamnagar#PlaneCrashpic.twitter.com/kuNKXhg8pR
— Dhanraj Nathwani (@DhanrajNathwani) April 2, 2025
ಒಬ್ಬ ಪೈಲಟ್, ಅಪಘಾತಕ್ಕೀಡಾಗುವ ಮುನ್ನವೇ ಸೇಫ್ಟಿ ಎಜೆಕ್ಟ್ ಮೂಲಕ ಜೆಟ್ನಿಂದ ಆಚೆ ನೆಗೆದಿರುವುದು ಸ್ಪಷ್ಟವಾಗಿದೆ. ಆದರೆ, ಮತ್ತೊಬ್ಬ ಪೈಲಟ್ನ ಸುಳಿವು ಸಿಗುತ್ತಿಲ್ಲ. ಆತನೂ ಸೇಫ್ಟಿ ಎಜೆಕ್ಟ್ ವ್ಯವಸ್ಥೆಯ ಮೂಲಕ ವಿಮಾನದಿಂದ ಆಚೆ ನೆಗೆದಿದ್ದನೇ ಅಥವಾ ವಿಮಾನ ನೆಲಕ್ಕಪ್ಪಳಿಸುವ ಸಂದರ್ಭದಲ್ಲಿ ವಿಮಾನದಿಂದ ಜಿಗಿದು ಪರಾರಿಯಾದನೇ ಎಂಬುದು ಸ್ಪಷ್ಟವಾಗಿಲ್ಲ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಜೆಟ್ ವಿಮಾನ ಪತನಗೊಂಡಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಜಾಮ್ ನಗರದ ಅಗ್ನಿಶಾಮಕ ದಳದ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ರೆ. ಇತ್ತ ನಾಪತ್ತೆಯಾಗಿರುವ ಪೈಲಟ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ರು.
ಅಪಘಾತದ ರಭಸಕ್ಕೆ ಜೆಟ್ ವಿಮಾನದ ಒಂದೊಂದು ಭಾಗವೂ ತುಂಡು ತುಂಡಾಗಿ ದೂರದೂರಕ್ಕೆ ಸಿಡಿದು ಹೋಗಿ ಬಿದ್ದಿವೆ. ಈ ವಿಮಾನ ಗಸ್ತು ತರಬೇತಿಗಾಗಿ ಆಕಾಶಕ್ಕೆ ಹಾರಿತ್ತೆಂದು ಭಾರತೀಯ ವಾಯು ಸೇನೆ ತಿಳಿಸಿದೆ. ಒಟ್ಟಾರೆ, ವಿಮಾನ ಪತನದ ಕಾರಣವೇನೆಂಬುದು ತನಿಖೆ ಬಳಿಕವಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: ಸಿರಾಜ್ಗೆ ಅತ್ಯಂತ ಬಿಗ್ ಸಿಕ್ಸರ್ ಸಿಡಿಸಿದ RCB ಸ್ಫೋಟಕ ಬ್ಯಾಟರ್ ಸಾಲ್ಟ್.. ಎಷ್ಟು ಮೀಟರ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ