Advertisment

ಸದ್ಗುರು ಜಗ್ಗಿ ವಾಸುದೇವ್‌ಗೆ ಬಿಗ್ ರಿಲೀಫ್‌.. ಗಂಭೀರ ಆರೋಪದಿಂದ ಮುಕ್ತಗೊಳಿಸಿದ ಸುಪ್ರೀಂಕೋರ್ಟ್!

author-image
admin
Updated On
ಸದ್ಗುರು ಜಗ್ಗಿ ವಾಸುದೇವ್‌ಗೆ ಬಿಗ್ ರಿಲೀಫ್‌.. ಗಂಭೀರ ಆರೋಪದಿಂದ ಮುಕ್ತಗೊಳಿಸಿದ ಸುಪ್ರೀಂಕೋರ್ಟ್!
Advertisment
  • ಕೊಯಮತ್ತೂರಿನಲ್ಲಿರುವ ಸದ್ಗುರು ಅವರ ಇಶಾ ಯೋಗ ಸೆಂಟರ್‌
  • ಇಬ್ಬರು ಮಕ್ಕಳನ್ನು ಆಶ್ರಮದಲ್ಲಿ ಇಟ್ಟುಕೊಳ್ಳಲಾಗಿದೆ ಎಂಬ ಆರೋಪ
  • ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ತಮಿಳುನಾಡು ಕೊಯಮತ್ತೂರಿನ ಇಶಾ ಫೌಂಡೇಶನ್‌ ಆಶ್ರಮ ಹಾಗೂ ಸದ್ಗುರು ಜಗ್ಗಿ ವಾಸುದೇವ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

Advertisment

ಅಕ್ರಮವಾಗಿ ತಮ್ಮ ಇಬ್ಬರು ಮಕ್ಕಳನ್ನು ಆಶ್ರಮದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ.

publive-image

ಇದನ್ನೂ ಓದಿ: 2ನೇ ಪತ್ನಿ, ಮಕ್ಕಳಿಗೆ ₹100 ಕೋಟಿ.. ಮುತ್ತಪ್ಪ ರೈ ಮನೆ, ಜಮೀನು, ಆಸ್ತಿ ಹಂಚಿಕೆ; ಯಾರಿಗೆ ಎಷ್ಟು ಕೋಟಿ? 

ಏನಿದು ಪ್ರಕರಣ? 
ಇತ್ತೀಚೆಗೆ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಯೋಗ ಸೆಂಟರ್ ವಿವಾದಕ್ಕೆ ಗುರಿಯಾಗಿತ್ತು. ತಮಿಳುನಾಡಿನ ನಿವೃತ್ತ ಪ್ರೊಫೆಸರ್ ಒಬ್ಬರು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಇಶಾ ಯೋಗ ಸೆಂಟರ್‌ನಲ್ಲಿ ಬಲವಂತವಾಗಿ ಬಂಧನದಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.

Advertisment

ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು. ಇದಾದ ಮೇಲೆ ಕೊಯಮತ್ತೂರು ಪೊಲೀಸರು ಆಶ್ರಮದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ.. ಬಿಗ್ ಬಾಸ್ ರಿಯಾಲಿಟಿ ಶೋಗೆ ಹೊಸ ಟ್ವಿಸ್ಟ್; ಮುಂದೇನು? 

ಮದ್ರಾಸ್ ಹೈಕೋರ್ಟ್‌ನ ಈ ಆದೇಶ ಮತ್ತು ಪೊಲೀಸರ ಕ್ರಮದ ವಿರುದ್ಧ ಇಶಾ ಫೌಂಡೇಶನ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕೊಯಮತ್ತೂರಿನ ಆಶ್ರಮದಲ್ಲಿದ್ದ ಇಬ್ಬರು ಮಹಿಳೆಯರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸುಪ್ರೀಂಕೋರ್ಟ್ ಮುಂದೆ ತಮ್ಮ ಹೇಳಿಕೆ ನೀಡಿದ್ದರು. ನಾವು ಸ್ವಇಚ್ಛೆಯಿಂದ ಆಶ್ರಮದಲ್ಲಿ ಇದ್ದೇವೆ. ತಮ್ಮನ್ನೂ ಯಾರು ಬಲವಂತವಾಗಿ ಬಂಧಿಸಿಲ್ಲ ಎಂಬ ಹೇಳಿಕೆ ನೀಡಿದ್ದರು.

Advertisment

ಸುಪ್ರೀಂಕೋರ್ಟ್ ಆಶ್ರಮದಲ್ಲಿರುವ ಮಹಿಳೆಯರ ಹೇಳಿಕೆಯನ್ನು ಪರಿಗಣಿಸಿದೆ. ಸಿಜೆಐ ಡಿ.ವೈ ಚಂದ್ರಚೂಡ್ ಅವರ ನ್ಯಾಯ ಪೀಠ, ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿ ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನ 42 ಮತ್ತು 39 ವರ್ಷದ ಇಬ್ಬರು ಮಹಿಳೆಯರು ನಿರಾಕರಿಸಿದ್ದಾರೆ. ನಾವು ನಮ್ಮ ಇಚ್ಚೆಯಂತೆ ಆಶ್ರಮದಲ್ಲಿ ನೆಲೆಸಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ತಂದೆಯ ವಾದವನ್ನು ತಳ್ಳಿ ಹಾಕಿದ್ದು, ಮದ್ರಾಸ್ ಹೈಕೋರ್ಟ್‌ನ ಹೇಬಿಯಸ್ ಕಾರ್ಪಸ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment