BREAKING: ಸದ್ಗುರು ಜಗ್ಗಿ ವಾಸುದೇವ್‌ಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು

author-image
Bheemappa
Updated On
BREAKING: ಸದ್ಗುರು ಜಗ್ಗಿ ವಾಸುದೇವ್‌ಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು
Advertisment
  • ಮಾರ್ಚ್ 17 ರಂದು ಅವರ ಬ್ರೇನ್​ನಲ್ಲಿ ಸಮಸ್ಯೆ ಪತ್ತೆ
  • ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್
  • ಸದ್ಗುರು ಜಗ್ಗಿ ವಾಸುದೇವ್‌ಗೆ ಎಮರ್ಜೆನ್ಸಿ ಬ್ರೇನ್ ಸರ್ಜರಿ

ನವದೆಹಲಿ: ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಬ್ರೇನ್ ಸರ್ಜರಿ ಮಾಡಲಾಗಿದ್ದು ಯಶಸ್ವಿಯಾಗಿದೆ.

ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್‌ಗೆ ಎಮರ್ಜೆನ್ಸಿ ಬ್ರೇನ್ ಸರ್ಜರಿ ಮಾಡಲಾಗಿದೆ. ಮಾರ್ಚ್ 17 ರಂದು ಅವರ ಬ್ರೇನ್​ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ವಾಂತಿ, ತಲೆನೋವಿನಿಂದ ಬಳಲುತ್ತಿದ್ದ ಅವರಿಗೆ ಎಂಆರ್‌ಐ ಸ್ಕ್ಯಾನ್ ಮೂಲಕ ಪರೀಕ್ಷೆ ಮಾಡಿದಾಗ ಬ್ರೇನ್ ಸಮಸ್ಯೆ ವೈದ್ಯರು ದೃಢ ಪಡಿಸಿದ್ದರು. ಬಳಿಕ ಅಪೋಲೋ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಸರ್ಜರಿಯನ್ನು ವೈದ್ಯರ ತಂಡ ಮಾಡಿದ್ದಾರೆ.

ಜಗ್ಗಿ ವಾಸುದೇವ್ ಅವರು ಕಳೆದ 4 ವಾರಗಳಿಂದ ತೀವ್ರ ತಲೆ ನೋವಿನಿಂದ ಬಳಲುತ್ತಿದ್ದರು. ಈ ನೋವು ಇದ್ದರು ತಮ್ಮ ಎಂದಿನಂತೆ ಕಾರ್ಯಕ್ರಮಗಳನ್ನು ಮುಂದುವರೆಸಿದ್ದರು. ಅಲ್ಲದೇ ಶಿವರಾತ್ರಿ ಹಬ್ಬದಂದು ಅದ್ಧೂರಿ ಸಮಾರಂಭವನ್ನು ನಡೆಸಿಕೊಟ್ಟಿದ್ದರು. ಆದರೆ ಮಾರ್ಚ್ 15ರ ಹೊತ್ತಿಗೆ ತಲೆ ನೋವು ತೀವ್ರಗೊಂಡಿತ್ತು. ಹೀಗಾಗಿ ವೈದ್ಯರು ಎಂಆರ್​ಐ ಸ್ಕ್ಯಾನ್​ಗೆ ಒಳಗಾಗುವಂತೆ ಸೂಚಿಸಿದ್ದರು.

ಬಳಿಕ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ಸದ್ಗುರುಗಳು ದಾಖಲಾಗಿದ್ದರು. ಆಗ ವೈದ್ಯರು ಅವರ ಬ್ರೇನ್​ನಲ್ಲಿ ರಕ್ತಸ್ರಾವ ಆಗುತ್ತಿರುವುದನ್ನ ಕಂಡುಕೊಂಡರು. ವೈದ್ಯರ ತಂಡ ಈಗಾಗಲೇ ಸರ್ಜರಿಯನ್ನು ಮಾಡಲಾಗಿದ್ದು ಸದ್ಗುರುಗಳು ಆರೋಗ್ಯವಾಗಿದ್ದಾರೆ. ಸದ್ಗುರುಗಳು ವಿಡಿಯೋವೊಂದರಲ್ಲಿ ಮಾತನಾಡಿ ನನಗೆ ಏನು ಆಗಿಲ್ಲ, ಸರ್ಜರಿ ಯಶಸ್ವಿಯಾಗಿದೆ. ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment