Advertisment

ಭದ್ರ ಹುಲಿ ಸಂರಕ್ಷಿತ ಅರಣ್ಯದಿಂದ ಗ್ರಾಮಗಳಿಗೆ ನುಗ್ಗುತ್ತಿವೆ ವನ್ಯಮೃಗಗಳು! ಸಫಾರಿ ವಿರುದ್ಧ ಸಿಡಿದೆದ್ದ ಸ್ಥಳೀಯರು!

author-image
Gopal Kulkarni
Updated On
ಭದ್ರ ಹುಲಿ ಸಂರಕ್ಷಿತ ಅರಣ್ಯದಿಂದ ಗ್ರಾಮಗಳಿಗೆ ನುಗ್ಗುತ್ತಿವೆ ವನ್ಯಮೃಗಗಳು! ಸಫಾರಿ ವಿರುದ್ಧ ಸಿಡಿದೆದ್ದ ಸ್ಥಳೀಯರು!
Advertisment
  • ಭದ್ರ ಹುಲಿ ಸುರಕ್ಷಿತ ಅರಣ್ಯದಲ್ಲಿ ಸಫಾರಿ ಸೌಲಭ್ಯ
  • ಸಫಾರಿ ವಿರುದ್ಧ ಸಿಡಿದೆದ್ದ ಸ್ಥಳೀಯರು ಹೇಳಿದ್ದೇನು?
  • ಗ್ರಾಮಗಳಿಗೆ ವನ್ಯಜೀವಿಗಳು ನುಗ್ಗುತ್ತಿರುವುದು ಏಕೆ?

ಅದು ಅಭಯಾರಣ್ಯ, ಅದು ವನ್ಯಮೃಗಳ ನೆಲ, ಕಾಡು ಪ್ರಾಣಿಗಳ ವಾಸ ತಾಣ. ಹೀಗೆ ಗುರುತಿಸಿಕೊಂಡಿರೋ ಅಭಯಾರಣ್ಯದಿಂದ ವನ್ಯಮೃಗಗಳು ಕಾಡಂಚಿನ ಗ್ರಾಮದತ್ತ ಬರ್ತಿವೆ. ವನ್ಯಮೃಗಗಳು ನೆಲೆಸೋ ಕಾಡಲ್ಲಿ ಸಫಾರಿಗೆ ಈಗ ವಿರೋಧ ವ್ಯಕ್ತವಾಗ್ತಿದೆ. ಶ್ರೀಮಂತ ಮೋಜುಮಸ್ತಿಗಾಗಿಯೇ ಸಫಾರಿ ಅನ್ನೋ ಅರೋಪ ಕೇಳಿಬಂದಿದೆ.
ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಹುಲಿ ಅಭಯಾರಣ್ಯ ಅಂದ್ರೆ ಅದು ಭದ್ರ ಹುಲಿಸಂರಕ್ಷಿತ ಅರಣ್ಯ. ಚಿಕ್ಕಮಗಳೂರಿನ ಮುತ್ತೋಡಿ, ಹೆಬ್ಬೆ, ತಣಿಗೆಬೈಲು, ಲಕ್ಕವಳ್ಳಿ ನಾಲ್ಕು ವಲಯವಿರೋ ಅರಣ್ಯ. ಸುಮಾರು 472 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿರೋ ಈ ಅಭಯಾರಣ್ಯಕ್ಕೆ ಹುಲಿ, ಆನೆ, ಚಿರತೆ, ಕಾಡುಕೋಣಗಳಿಗೆ ಮರುಜನ್ಮ ನೀಡಿದೆ ಅನ್ನೋ ಹೆಗ್ಗಳಿಕೆ ಇದೆ.

Advertisment

ಈ ಅಭಯಾರಣ್ಯದ ಅಂಚಿನಲ್ಲಿ ಹಲವು ಗ್ರಾಮಗಳಿವೆ. ಹಿಂದೇ ಕಾಡಿನೊಳಗೆ ವನ್ಯಮೃಗಗಳು ಇದ್ರೂ ಕಾಡಂಚಿನ ಗ್ರಾಮದ ಜನರಿಗೆ ಯಾವುದೇ ಭಯ ಇರಲಿಲ್ಲ. ಆದ್ರೆ ಇತ್ತೀಚಿನ ದಿನದಲ್ಲಿ ಕಾಡು ಪ್ರಾಣಿಗಳು ಗ್ರಾಮಗಳ ಸಮೀಪದ ತೋಟಕ್ಕೆ ಬರ್ತಿವೆ. ಇದಕ್ಕೆ ಪೂರಕವಂತೆ ಇಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿತ್ತು. ಹೀಗೆ ಈ ಪ್ರಾಣಿಗಳು ಕಾಡಿಂದ ಹೊರಬರಲು ಸಫಾರಿಯೇ ಕಾರಣವಂತೆ.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ; ಮನೆಯಿಂದ ಹೊರಬರೋ ಮುನ್ನ ಎಚ್ಚರ!

ಮುತ್ತೋಡಿ ಹಾಗೂ ಲಕ್ಕವಳ್ಳಿಯಿಂದ ಪ್ರವಾಸೋದ್ಯಮಕ್ಕಂತಾನೇ ಸಫಾರಿ ಮಾಡಲಾಗಿದೆ. ಈ ಸಪಾರಿಯಿಂದ ಕಾಡಿನೊಳಗೆ ಕರೆದೊಯ್ದು ಅಲ್ಲಿನ ಪ್ರಾಣಿಗಳನ್ನ, ಕಾಡನ್ನ ನೋಡೋಕೆ ಅವಕಾಶ ಮಾಡಲಾಗಿದೆ. ಕೆಲವೊಮ್ಮೆ ಹುಲಿಯೂ ಸಿಕ್ಕಿದೆ. ಉಳಿದಂತೆ ಕಾಡುಕೋಣ, ಊಡ ಸೇರಿ ಬೇರೆ ಪ್ರಾಣಿಗಳು ಕಾಣಿಸುತ್ತೇ. ಇದರ ದರ ಕೂಡ ದುಬಾರಿಯಾಗಿದೆ.ಇದಕ್ಕೆ ಕಾರಣ ಇದೇ ಸಫಾರಿ ಅಂತಿದ್ದಾರೆ ಸ್ಥಳೀಯರಾದ ವಿಜಯ್ ಕುಮಾರ್ ಅವರು.

Advertisment

ಇದನ್ನೂ ಓದಿ:ಬೆಚ್ಚಿಬಿದ್ದ ಕಾರವಾರ! ಗೂಢಚಾರಿಕೆ ಅನುಮಾನ.. ಕಾಲಿನಲ್ಲಿ ಡಿವೈಸ್ ಹೊಂದಿದ್ದ ರಣಹದ್ದಿನ ಜಾತಕ ಬಯಲು..!

publive-image

ವಿಯ್​ಕುಮಾರ್ ಹೇಳುವ ಪ್ರಕಾರ ದಟ್ಟವಾದ ಕಾಡನ್ನು ಸಫಾರಿಗೆ ಬಳಸುವ ಕಾರಣದಿಂದಾಗಿ ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಸಂಬಂಧ ಬೆಳೆದಿದೆ. ಮೊದಲು ಮನುಷ್ಯರನ್ನು ನೋಡಿದ್ರೆ ಕಾಡು ಪ್ರಾಣಿಗಳು ಹೆದರಿ ಓಡುತ್ತಿದ್ದವು. ಈಗ ಹಾಗೆ ಆಗುತ್ತಿಲ್ಲ, ಸಫಾರಿ ಹೆಸರಿನಲ್ಲಿ ಮನುಷ್ಯರನ್ನು ನೋಡಿ ನೋಡಿ ಅವುಗಳಿಗೆ ಮನುಷ್ಯನ ರೂಢಿಯಾಗಿಬಿಟ್ಟಿದೆ. ಹೀಗಾಗಿಯೇ ಈಗ ಸರಳವಾಗಿ ಗ್ರಾಮಗಳಿಗೆ ಕಾಡು ಪ್ರಾಣಿಗಳು ನುಗ್ಗುತ್ತಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಕಾಡು ಪ್ರಾಣಿಗಳ ಉಪಟಳಕ್ಕೆ ಜನ ಬೇಸತ್ತು ಹೋಗಿದ್ದಾರೆ.. ಅಭಯಾರಣ್ಯದ ಅಂಚಿನಲ್ಲಿರೋ ಜನ್ರಿಗೂ ಈ ಭಯ ಕಾಡ್ತಿದೆ. ಸಮೃದ್ದ ಕಾಡಿದ್ರೂ ವನ್ಯಮೃಗಗಳು ನಾಡಿನತ್ತ ಬರ್ತಿದೆ. ಇದಕ್ಕೆ ಸಫಾರಿಯೂ ಒಂದು ಕಾರಣ ಅನ್ನೋ ಅರೋಪ ಕೇಳಿಬಂದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment