newsfirstkannada.com

ಕೋಲಾರದಲ್ಲಿ ಕ್ರಾಂತಿಕಾರಿ ಕೃಷಿಗೆ ದಿಟ್ಟ ಹೆಜ್ಜೆ; ಲಕ್ಷ ಲಕ್ಷ ಬೆಲೆಬಾಳುವ ‘ಕೆಂಪು ಚಿನ್ನ’ ಬೆಳೆದು ತೋರಿಸಿದ ರೈತ..!

Share :

Published February 3, 2024 at 7:02am

Update February 3, 2024 at 7:19am

    ಚಿನ್ನದ ನಾಡು ಕೋಲಾರದಲ್ಲಿ ಕೇಸರಿ ಚಿನ್ನದ ಕಂಪು

    ಹವಾನಿಂತ್ರಿತ ಕೊಠಡಿಯಲ್ಲೇ ಕೇಸರಿ ಬೆಳೆದ ಕೃಷಿಕ

    ಕಾಶ್ಮೀರ, ಇರಾನ್​ ಮಾತ್ರವಲ್ಲ ನೀವು ಬೆಳೆಯಬಹುದು

ಕೇಸರಿಯ ಬೆಲೆ ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಅದನ್ನು ಎಲ್ಲಾ ಕಡೆ ಬೆಳೆಯೋಕೆ ಆಗಲ್ಲ, ಎಲ್ಲೆಂದರೆ ಅಲ್ಲಿ ಸಿಗೋದಿಲ್ಲ. ಅದಕ್ಕೆ ಮಿತಿಮೀರಿದ ಬೇಡಿಕೆ ಇರೋದರಿಂದ ಅದನ್ನ ಕೆಂಪು ಚಿನ್ನ ಎಂದೇ ಕರೆಯುತ್ತಾರೆ. ಅಂತ ಕೆಂಪು ಚಿನ್ನವನ್ನು, ಕೋಲಾರದಲ್ಲೂ ಬೆಳೆಯಬಹುದು ಅನ್ನೋದನ್ನು ಪ್ರಗತಿಪರ ರೈತ ಸಾಧಿಸಿ ತೋರಿಸಿದ್ದಾರೆ.

ಕೇಸರಿ ಅಂದಾಕ್ಷಣ ಅದು ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಾರೆ ಅನ್ನೋ ಮಾತಿದೆ. ಯಾಕಂದ್ರೆ ಕೇಸರಿ ಬೆಳೆಯಲು ಸೂಕ್ತ ವಾತಾವರಣ ಇರೋದು ಕಾಶ್ಮೀರ ಹಾಗೂ ಇರಾನ್​ನಲ್ಲಿ ಮಾತ್ರ ಹಾಗಾಗಿ ಮಾರುಕಟ್ಟೆಯಲ್ಲಿ ಕಾಶ್ಮೀರ ಮತ್ತು ಇರಾನ್​ ಕೇಸರಿ ಮಾತ್ರವೇ ಲಭ್ಯವಾಗುತ್ತಿದೆ. ಕೇಸರಿ ಚಿನ್ನವನ್ನು ಚಿನ್ನದ ನಾಡು ಕೋಲಾರದಲ್ಲೂ ಮಾಡಬಹುದು ಅನ್ನೋದನ್ನು ಇವರು ಸಾಧಿಸಿ ತೋರಿಸಿದ್ದಾರೆ.

ಕೋಲಾರದ ಸಾವಯವ ಕೃಷಿಕ.. ಲೋಕೇಶ್​ ಬಯಲು ಸೀಮೆ ಕೋಲಾರದ ಮಾಲೂರಿನಲ್ಲಿ ಚಿನ್ನದ ಬೆಲೆ ಇರುವ ಕೇಸರಿ ಬೆಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷಿ ವಿಜ್ಞಾನಿ ಲೋಕೇಶ್, ತಮ್ಮ ಮನೆಯ ಒಂದು ಕೊಠಡಿಯಲ್ಲಿ ಕಾಶ್ಮೀರದ ರೀತಿಯಲ್ಲಿರುವ ಹವಾನಿಯಂತ್ರಿತ ಕೊಠಡಿ ಸೃಷ್ಟಿಮಾಡಿಕೊಂಡಿದ್ದಾರೆ. ಅದರಲ್ಲಿ ಕಾಶ್ಮೀರದಿಂದ ಹತ್ತು ಸಾವಿರ ರೂಪಾಯಿಗೆ ಕೇಸರಿ ಗಡ್ಡೆಗಳನ್ನು ತರಿಸಿಕೊಂಡು, ಪ್ರಾಯೋಗಿಕವಾಗಿ ಇಂಡೋರ್​ ಫಾರ್ಮಿಂಗ್ ಮಾಡಿದ್ದಾರೆ. ಕೇಸರಿ ಗಡ್ಡೆಗಳು ಒಮ್ಮೆ ಬಿತ್ತನೆಮಾಡಿದ್ರೆ.. ಅದು ಜೀವನ ಪರ್ಯಂತ ಹೂ ಬಿಡುತ್ತದೆ. ಮೊದಲ ಬಿತ್ತನೆಯಲ್ಲೇ ಸುಮಾರು 20 ಗ್ರಾಂ ಕೇಸರಿ ಸಿಕ್ಕಿದ್ದು, ಭರ್ಜರಿ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ. ಸದ್ಯ 1 ಗ್ರಾಂ ಕೇಸರಿಗೆ ಮಾರುಕಟ್ಟೆಯಲ್ಲಿ 100ರಿಂದ 150 ರೂಪಾಯಿ ಇದೆ.

ಕೇವಲ ಕೇಸರಿ ಒಂದೇ ಅಲ್ಲ.. ಪ್ರಗತಿ ಪರ ರೈತನಾಗಿರುವ ಲೋಕೇಶ್​ ತಮ್ಮ ಪ್ರಯೋಗಾಲಯದಲ್ಲಿ ಅತ್ಯಂತ ದುಬಾರಿ ಬೆಲೆಯ ಬ್ರೆಜಿಲ್​ ಆಲೂಗಡ್ಡೆ ಕೂಡಾ ಬೆಳೆದಿದ್ದಾರೆ. ಬ್ರೆಜಿಲ್​ ಬ್ಲೂ ಆಲೂಗಡ್ಡೆ ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 800 ರೂಪಾಯಿ ಬೆಲೆ ಇದೆ. ಅದನ್ನು ಬಿತ್ತನೆ ಬೀಜ ಮಾಡುವ ಹಂತದಲ್ಲಿದ್ದಾರೆ. ಕಾರ್ಡಿಸೆಪ್ಸ್ ಅನ್ನೋ ಮಶ್ರೂಮ್​ ಅನ್ನ ಲೋಕೇಶ್ ಬೆಳೆದು ಯಶಸ್ವಿಯಾಗಿದ್ದಾರೆ. ಕಾರ್ಡಿಸೆಪ್ಸ್​ ಮಶ್ರೂಮ್​ ಒಂದು ಕೆಜಿಗೆ 3.5 ಲಕ್ಷ ರೂಪಾಯಿ ಇದೆ. ಇದನ್ನು ನ್ಯಾಚುರಲ್ ವಯಾಗ್ರ ಎಂದು ಕರೆಯುತ್ತಾರೆ. ಹೀಗೆ ತಮ್ಮ ಪ್ರಯೋಗಾಲಯದಲ್ಲಿ ವಿವಿಧ ಲಾಭದಾಯಕ ಬೆಳೆ ಬೆಳೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಕೃಷಿಯಲ್ಲಿ ಸದಾ ಒಂದಿಲ್ಲೊಂದು ಪ್ರಯೋಗದ ಮೂಲಕ ಲೋಕೇಶ್​ ಚಿನ್ನದ ಬೆಳೆ ಬೆಳುತ್ತಿದ್ದಾರೆ.. ಮುಂದೊಂದು ದಿನ ಇದು ಹೊಸ ಕ್ರಾಂತಿಕಾರಿ ಕೃಷಿಗೆ ನಾಂದಿಯಾಗೋದರಲ್ಲಿ ಅನುಮಾನವಿಲ್ಲ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರದಲ್ಲಿ ಕ್ರಾಂತಿಕಾರಿ ಕೃಷಿಗೆ ದಿಟ್ಟ ಹೆಜ್ಜೆ; ಲಕ್ಷ ಲಕ್ಷ ಬೆಲೆಬಾಳುವ ‘ಕೆಂಪು ಚಿನ್ನ’ ಬೆಳೆದು ತೋರಿಸಿದ ರೈತ..!

https://newsfirstlive.com/wp-content/uploads/2024/02/KESARI.jpg

Load More