26ನೇ ವಯಸ್ಸಿಗೆ ಸಂಸತ್​ ಪ್ರವೇಶಿಸುತ್ತಿರುವ ದೇಶದ ಕಿರಿಯ ಸಂಸದ! ಯಾರು ಈತ?

author-image
AS Harshith
Updated On
26ನೇ ವಯಸ್ಸಿಗೆ ಸಂಸತ್​ ಪ್ರವೇಶಿಸುತ್ತಿರುವ ದೇಶದ ಕಿರಿಯ ಸಂಸದ! ಯಾರು ಈತ?
Advertisment
  • ಬಿಜೆಪಿಯಿಂದ ಸ್ಪರ್ಧಿಸಿದ ಭಗವಂತ ಖೂಬಾಗೆ ಸೋಲಿನ ರುಚಿ
  • 26 ವರ್ಷದ ಯುವಕನಿಂದ ಸೋಲುಂಡ ಭಗವಂತ ಖೂಬಾ
  • ದೇಶದ ಕಿರಿಯ ಸಂಸದನಾದ ಈಶ್ವರ್​ ಖಂಡ್ರೆ ಮಗ ಸಾಗರ್

ಸಚಿವ ಈಶ್ವರ್​ ಖಂಡ್ರೆ ಅವರ ಮಗ ಸಾಗರ್​ ಖಂಡ್ರೆ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅವರು ಬಿಜೆಪಿ ಹಾಲಿ ಸಂಸದ ಭಗವಂತ ಖೂಬಾಗೆ ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ದೇಶದ ಕಿರಿಯ ಸಂಸದ ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ. 26ನೇ ವಯಸ್ಸಿಗೆ ಸಾಗರ್​​ ಖಂಡ್ರೆ ಸಂಸತ್​ ಪ್ರವೇಶಿಸಿದ್ದಾರೆ.

ಬಿಜೆಪಿ ಭದ್ರಕೋಟೆಯಾದ ಬೀದರ್​ ಅನ್ನು ಲೋಕಸಭಾ ಚುನಾವಣೆಯ ಮೂಲಕ ಖಂಡ್ರೆ ಮಗ ಛಿದ್ರಗೊಳಿಸಿದ್ದಾರೆ. ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿ​ 665162 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಭಗವಂತ ಖೂಬಾ 129396 ಮತಗಳಿಂದ ಸೋಲುಂಡಿದ್ದಾರೆ.

ಇದನ್ನೂ ಓದಿ: ನೂತನ MP ಯದುವೀರ್ ಒಡೆಯರ್​ಗೆ ಅಭಿನಂದನೆ ಸಲ್ಲಿಸಿದ ಪ್ರತಾಪ್​ ಸಿಂಹ.. ಮೈಸೂರಲ್ಲಿ ಸಂಭ್ರಮ ಭಾರೀ ಜೋರು

ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ವಿಪಕ್ಷ ನಾಯಕ ಆರ್​ ಅಶೋಕ್​ ಅವರು ಸಾಗರ್​ ಖಂಡ್ರೆ ವಿರುದ್ಧ ವ್ಯಂಗ್ಯ ನುಡಿದಿದ್ದರು. ಆತ ಅನುಭವ ಇಲ್ಲದ ಹುಡುಗ. ಆತ ಗೆದ್ದರೆ ಸ್ಕೂಲ್​ ಬ್ಯಾಗ್​, ಬುಕ್​ ಹಿಡಿದುಕೊಂಡು ಕರೆದುಕೊಂಡು ಬರಲು ಒಬ್ಬರು ಬೇಕು ಎಂದು ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment