/newsfirstlive-kannada/media/post_attachments/wp-content/uploads/2024/10/SAHARA-FLOOD.jpg)
ಸಹಾರಾ ಮರುಭೂಮಿ. ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡದಾದ. ಅತಿ ತಾಪಮಾನದ ಮರಳುಗಾಡು. ಉತ್ತರ ಆಫ್ರಿಕಾದ ಈ ಸಹಾರಾ ಮರುಭೂಮಿ ಇದೀಗ ತೀರಾ ಅಪರೂಪದ ಹಾಗೂ ಅಸಹಜ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸಹರಾ ಈ ಒಂದು ಮಳೆಯಿಂದ ಅಕ್ಷರಶಃ ನಲುಗಿ ಹೋಗಿದೆ. ಹಲವಾರು ಜನರು ಜೀವನ, ಜೀವವನ್ನು ಕಳೆದುಕೊಂಡಿದ್ದಾರೆ.
ಸಹಾರಾ ಮರುಭೂಮಿಯಲ್ಲಿ ಕಂಡು ಕೇಳರಿಯದ ಮಳೆ
ಉತ್ತರ ಆಫ್ರಿಕಾದಲ್ಲಿ ವಿಸ್ತಾರವಾಗಿ ಹರಡಿರುವ ಸಹರಾ ಮರಭೂಮಿ ಕಂಡು ಕೇಳರಿಯದ ಮಳೆಗೆ ಸುರಿದಿದೆ. ಇದರ ಪರಿಣಾಮ ಹಲವು ದಶಕಗಳಿಂದ ಒಣಗಿ ಹೋಗಿದ್ದ ಕೆರೆಗಳಿಗೆ ಮರು ಜೀವ ಬಂದಿದೆ. 50 ವರ್ಷದಲ್ಲಿಯೇ ಮೊದಲ ಬಾರಿ ಪ್ರವಾಹ ಉಂಟಾಗಿದೆ.
ಆಗ್ನೇಯ ಮೊರಾಕ್ಕೋದಲ್ಲಿ ಎರಡು ದಿನಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಸಹಾರಾ ಮರುಭೂಮಿಯ ಕೆಲವು ಭಾಗಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ರಾಜಧಾನಿ ರಾಬಾಟ್‌ನಿಂದ 450 ಕಿಮೀ ದೂರದಲ್ಲಿರುವ ಟ್ಯಾಗೌನೈಟ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿಮೀಗೂ ಅಧಿಕ ಮಳೆ ಸುರಿದಿದೆ ಎಂದು ಮೊರಾಕ್ಕೋದ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಅರ್ಧ ಶತಮಾನದಿಂದಲೂ ಒಣಗಿದ್ದ ಜಗೋರಾ ಮತ್ತು ಟಾಟಾ ನಡುವಿನ ಲೇಕ್ ಇರಿಕ್ವಿ ಸರೋವರವು ಪ್ರವಾಹದಿಂದ ತುಂಬಿಕೊಂಡಿರುವುದು ನಾಸಾ ಸೆರೆಹಿಡಿದಿರುವ ಉಪಗ್ರಹ ಚಿತ್ರಗಳಲ್ಲಿ ಕಾಣಿಸಿದೆ.
ಇದನ್ನೂ ಓದಿ:200 ರಹಸ್ಯ ಬ್ಯಾಂಕ್ ಅಕೌಂಟ್.. ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮುಚ್ಚಿಟ್ಟ ಸಂಪತ್ತು ಎಷ್ಟು ಗೊತ್ತಾ?
ಇನ್ನು ಅತಿ ಸಣ್ಣ ಅವಧಿಯಲ್ಲಿ ಇಷ್ಟು ಭಾರಿ ಪ್ರಮಾಣದಲ್ಲಿ ಮಳೆ ಸುರಿಯದೆ 30- 50 ವರ್ಷವಾಗಿತ್ತು ಎಂದು ಮೊರಾಕ್ಕೋದ ಹವಾಮಾನ ಸಂಸ್ಥೆ ಅಧಿಕಾರಿ ಹೂಸೇನ್ ಯೌಬೆಬ್ ತಿಳಿಸಿದ್ದಾರೆ. ಈ ಬಹಳ ಅಪರೂಪದ ವಿದ್ಯಮಾನವು ಉಷ್ಣವಲಯದ ಬಿರುಗಾಳಿಯಿಂದಾಗಿ ಉಂಟಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇದು ಈ ಪ್ರದೇಶದ ಹವಾಮಾನದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
?? Sahara desert is flooded!
“It’s been 30 to 50 years since we’ve had this much rain in such a short space of time,” said Houssine Youabeb of Morocco’s General Directorate of Meteorology.
Unfortunately this beautiful sight has also caused damage and left 20 people dead.
— Lord Bebo (@MyLordBebo) October 10, 2024
ಮೊರಾಕ್ಕೋದಲ್ಲಿನ ನೆರೆಯು ಕಳೆದ ತಿಂಗಳು 18 ಜನರ ಸಾವಿಗೆ ಕಾರಣವಾಗಿದೆ. ಕಳೆದ ವರ್ಷ ಸಂಭವಿಸಿದ್ದ ಮಾರಕ ಭೂಕಂಪನದಿಂದ ಈ ಪ್ರದೇಶಗಳು ಇನ್ನೂ ಚೇತರಿಸಿಕೊಂಡಿಲ್ಲ. ಅದರ ನಡುವೆಯೇ ಪ್ರವಾಹದ ಅನಿರೀಕ್ಷಿತ ಆಘಾತ ಎದುರಾಗಿದೆ.. ಇದಕ್ಕೆ ಕಾರಣ ಏನು ಅನ್ನೋದನ್ನ ನೋಡೋದಾದ್ರೆ.
ಇದನ್ನೂ ಓದಿ:ಇರಾನ್ನ ಟಾಪ್ ಕಮಾಂಡರ್ ಮೊಸಾದ್ ಏಜೆಂಟ್? ಇಂತಹದೊಂದು ಅನುಮಾನ ಬಂದಿದ್ದೇಕೆ?
ಹೆಚ್ಚುತ್ತಿರುವ ತಾಪಮಾನದ ಫಲಿತಾಂಶವಾಗಿ ಹೈಡ್ರಾಲಾಜಿಕಲ್ ವರ್ತುಲವು ವೇಗಗೊಂಡಿದೆ. ಬೆಚ್ಚಗಿನ ವಾತಾವರಣವು ಹೆಚ್ಚು ತೇವಾಂಶವನ್ನು ಹಿಡಿದುಕೊಳ್ಳುತ್ತದೆ. ಇದು ಭಾರಿ ಮಳೆಗೆ ಪೂರಕವಾಗಿರುತ್ತದೆ. ಅತಿಯಾದ ನೀರು, ಅತಿ ಕಡಿಮೆ ನೀರು ಎರಡರಿಂದಲೂ ಹೆಚ್ಚಿನ ಸಮಸ್ಯೆ. ಹೆಚ್ಚು ತ್ವರಿತ ಬಾಷ್ಪೀಕರಣ ಮತ್ತು ಮಣ್ಣಿನ ಒಣಗುವಿಕೆಯು ಬರ ಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಜಾಗತಿಕ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೊ ತಿಳಿಸಿದ್ದಾರೆ. ಸಹಾರಾ ಮರುಭೂಮಿಯಲ್ಲಿ ಪ್ರವಾಹ ಮಾತ್ರ. ಹಿಂದೊಮ್ಮೆ ಹಿಮಪಾತದಿಂದಲೂ ಸುದ್ದಿಯಾಗಿತ್ತು. ಆದ್ರೆ, ವಿಷಯ ಏನೆಂದ್ರೆ. ಜಾಗತಿಕ ತಾಪಮಾನ ಏರಿಕೆಯಿಂದ ಪ್ರಕೃತಿಯಲ್ಲಿ ಸಮತೋಲನ ಹೆಚ್ಚಾಗುತ್ತಿರುವುದು ಆತಂಕಾರಿ ವಿಷಯ. ಜಾಗತಿಕ ತಾಪಮಾನ ನಿಯಂತ್ರಿಸುವುದು ಅವಶ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ