‘ಇಷ್ಟು ದಿನ ಸಹಿಸಿಕೊಂಡೆ, ಇನ್ಮೇಲೆ ಸಹಿಸಲ್ಲ’- ಸಾಯಿ ಪಲ್ಲವಿ ಎಚ್ಚರಿಕೆ

author-image
Bheemappa
Updated On
‘ಇಷ್ಟು ದಿನ ಸಹಿಸಿಕೊಂಡೆ, ಇನ್ಮೇಲೆ ಸಹಿಸಲ್ಲ’- ಸಾಯಿ ಪಲ್ಲವಿ ಎಚ್ಚರಿಕೆ
Advertisment
  • ಸೌತ್ ಇಂಡಿಯಾದ ಮೋಸ್ಟ್ ಬ್ಯೂಟಿಫುಲ್ ನಟಿ ಸಾಯಿ ಪಲ್ಲವಿ
  • ನಾನ್​ವೆಜ್ ತಿನ್ನುವುದು ಬಿಟ್ರಾ ಸೌತ್ ಬ್ಯೂಟಿ ಹೀರೋಯಿನ್.?
  • ಯಾರೇ ಆದ್ರು ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ.!

ಸೌತ್ ಇಂಡಿಯಾದ ಮೋಸ್ಟ್ ಬ್ಯೂಟಿಫುಲ್ ಹೀರೋಯಿನ್ ಅಂದರೆ ಅದು ಸಾಯಿ ಪಲ್ಲವಿ. ಸಾಲು ಸಾಲು ಸಿನಿಮಾಗಳಲ್ಲಿ ಸದ್ಯ ಇವರು ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಇವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿರುತ್ತವೆ. ಈ ಬಗ್ಗೆ ಇಷ್ಟು ದಿನ ಸಹಿಸಿಕೊಂಡೆ, ಇನ್ಮುಂದೆ ಸಹಿಸಿಕೊಳ್ಳಲ್ಲ ಎಂದು ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಎಲ್ಲ ಕೋಪ ತಾಪ ಯಾಕೆ ಎನ್ನುವುದು ಇಲ್ಲಿ ಇದೆ.

ಹಿಂದಿಯ ಬಿಗ್ ಬಜೆಟ್​ ಸಿನಿಮಾವಾದ ರಾಮಾಯಣದಲ್ಲಿ ರಣಬೀರ್​ ಶ್ರೀರಾಮನಾಗಿ ಅಭಿಯಿಸುತ್ತಿದ್ದರೇ, ಸಾಯಿ ಪಲ್ಲವಿ ಸೀತೆಯಾಗಿ ನಟನೆ ಮಾಡುತ್ತಿದ್ದಾರೆ. ಮೂವಿಯಲ್ಲಿ ಸೀತೆ ಪಾತ್ರ ಮಾಡುತ್ತಿದ್ದರಿಂದ ಸಾಯಿ ಪಲ್ಲವಿ ತನ್ನ ದಿನಚರಿ ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆಯಲ್ಲಿ ನಾನ್​ವೆಜ್ ತಿನ್ನುವುದನ್ನೂ ಬಿಟ್ಟಿದ್ದಾರೆ ಎನ್ನಲಾಗಿದೆ. ಹೋಟೆಲ್​ನಲ್ಲೂ ನಾನ್​ವೆಜ್ ತಿನ್ನುವುದಿಲ್ಲ. ಅಷ್ಟೇ ಯಾಕೆ, ವಿದೇಶಕ್ಕೆ ಹೋದರೂ ಜೊತೆಯಲ್ಲಿ ಅಡುಗೆ ಭಟ್ಟರನ್ನ ಕರೆದುಕೊಂಡು ಹೋಗುತ್ತಿದ್ದಾರೆ. ರಾಮಾಯಣ ಸಿನಿಮಾ ಮುಗಿಯುವವರೆಗೆ ನಾನ್​ವೆಜ್ ತಿನ್ನುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾದ ಡ್ರೋನ್ ಪ್ರತಾಪ್.. ಕಾರಣವೇನು?

publive-image

ಆದರೆ ಇದು ಸತ್ಯವೋ, ಸುಳ್ಳೋ ಎಂಬುದು ನಿಖರವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರಿಂದ ಬೇಸರ ವ್ಯಕ್ತಪಡಿಸಿದ ನಟಿ ಸಾಯಿ ಪಲ್ಲವಿ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಾಯಿ ಪಲ್ಲವಿಯವರು, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದರೇ ಎಂತಹ ದೊಡ್ಡ ಸಂಸ್ಥೆಯಾದರೂ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ.

‘ನನ್ನ ಬಗ್ಗೆ ಎಷ್ಟೋ ಸುಳ್ಳು ಸುದ್ದಿ, ಕಟ್ಟು ಕಥೆಗಳನ್ನು ಹಬ್ಬಿಸುವಾಗ ಬಹುತೇಕವಾಗಿ ನಾನು ಮೌನವಾಗಿರಲು ಬಯಸುತ್ತೇನೆ. ನಿಜ ಏನು ಅನ್ನೋದು ದೇವರಿಗೆ ಗೊತ್ತಿದೆ. ಮೌನವಾಗಿ ಇದ್ದಿದ್ದಕ್ಕೇನೋ ಇದು ನಿರಂತರವಾಗಿ ನಡೆಯುತ್ತಿದೆ. ಈಗ ಅದಕ್ಕೆ ಉತ್ತರಿಸುವ ಸಮಯ ಬಂದಿದೆ. ನನ್ನ ಸಿನಿಮಾ ರಿಲೀಸ್, ಪ್ರಕಟಣೆ, ನನ್ನ ಲೈಫ್ ಕುರಿತು ಯಾವುದೇ ಆಧಾರ ಇಲ್ಲದೇ ಪ್ರಕಟಿಸಿದರೆ, ಅದು ಎಂತಹ ದೊಡ್ಡ ಸಂಸ್ಥೆ ಆದ್ರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇದುವರೆಗೆ ಸಹಿಸಿದ್ದೇನೆ. ಇನ್ಮೇಲೆ ಇಂತಹ ಕೆಟ್ಟ ಕಥೆಗಳನ್ನ ಸಹಿಸಲ್ಲ’ ಎಂದು ಬರೆದು ತಮ್ಮ ಅಧಿಕೃತ ಟ್ವೀಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.​


">December 11, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment