/newsfirstlive-kannada/media/post_attachments/wp-content/uploads/2024/11/JOBS_SPORTS.jpg)
ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯದಡಿ ಬರುವಂತ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ವಿರಳ ಸಂಖ್ಯೆಯಲ್ಲಿ ಖಾಲಿ ಉದ್ಯೋಗಗಳನ್ನ ಭರ್ತಿ ಮಾಡಲಾಗುತ್ತಿದೆ. ತಕ್ಷಣದಿಂದಲೇ ಆನ್ಲೈನ್ ಮೂಲಕ ಅರ್ಹರು ಅಪ್ಲೇ ಮಾಡಬಹುದು.
ಈ ಎಸ್ಎಐ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ. ಅಭ್ಯರ್ಥಿಗಳಿಗೆ ಅರ್ಜಿ ಪ್ರಕ್ರಿಯೆ ಹೇಗೆ ಇರುತ್ತದೆ. ಅರ್ಹತಾ ಮಾನದಂಡಗಳೇನು, ವಯಸ್ಸಿನ ಮಿತಿ, ವೇತನ ಶ್ರೇಣಿ ಸೇರಿದಂತೆ ಪ್ರಮುಖ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಎಲ್ಲವನ್ನು ಗಮನವಿಟ್ಟು ಪರಿಶೀಲಿಸಬೇಕು. ಇತರೆ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ.
ಮಾಸಿಕ ಸಂಬಳ- 50,000 ದಿಂದ 70,000 ರೂಪಾಯಿಗಳು
ಶೈಕ್ಷಣಿಕ ಅರ್ಹತೆಗಳು ಏನು?
- ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು
- ಪದವಿ ಜೊತೆಗೆ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರಮಾಣೀಕರಣ ಇರಬೇಕು
ಒಟ್ಟು ಪೋಸ್ಟ್ಗಳು- 50
ಹುದ್ದೆಯ ಹೆಸರು- ಯಂಗ್ ಪ್ರೊಫೆಷನಲ್ಸ್
ಇದನ್ನೂ ಓದಿ:SAAD ಮುಖ್ಯ ಪರೀಕ್ಷೆಗೆ ಅಧಿಸೂಚನೆ ರಿಲೀಸ್.. ಈ ಉದ್ಯೋಗಗಳಿಗೆ ಯಾರು ಅಪ್ಲೇ ಮಾಡಬಹುದು?
ಸಾಮಾನ್ಯ ಮಾರ್ಗಸೂಚಿ
ಗುತ್ತಿಗೆ ಆಧಾರದ ಮೇಲೆ ನೇಮಕ, 4 ವರ್ಷದ ಬಳಿಕ ಮತ್ತೆ ನೇಮಿಸಿಕೊಳ್ಳಬಹುದು
ಸಂದರ್ಶನದಲ್ಲಿ ನೀಡುವ ಪರ್ಫಾಮೆನ್ಸ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಇರುತ್ತೆ
ಅಭ್ಯರ್ಥಿಗಳು ಹುದ್ದೆಗೆ ನೇಮಕ ಆಗುವಾಗ ಎಲ್ಲ ಮೂಲ ದಾಖಲೆ ಇರಲೇಬೇಕು
32 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು
ಈ ನೇಮಕಾತಿಗೆ ಸಂಬಂಧಿಸಿದ ಯಾವುದೇ ಕಾನೂನು ವಿವಾದ ಇದ್ದಲ್ಲಿ ದೆಹಲಿ ಕೋರ್ಟ್ನಲ್ಲಿ ವಿಚಾರಿಸಲಾಗುತ್ತೆ
ನೆನಪಿಡಿ ಈ ದಿನಾಂಕ
30 ನವೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ