ಐಪಿಎಲ್​ ಸೆನ್ಸೇಷನಲ್.. ಈ ಸ್ಟಾರ್​ ಮೇಲೆ ಕ್ಯಾಪ್ಟನ್, ಕೋಚ್​ ಕೃಪೆ ಬೇಕೇಬೇಕು..

author-image
Ganesh
Updated On
ಐಪಿಎಲ್​ ಸೆನ್ಸೇಷನಲ್.. ಈ ಸ್ಟಾರ್​ ಮೇಲೆ ಕ್ಯಾಪ್ಟನ್, ಕೋಚ್​ ಕೃಪೆ ಬೇಕೇಬೇಕು..
Advertisment
  • ಟೆಸ್ಟ್​ ಕ್ರಿಕೆಟ್​ನತ್ತ ಸೆನ್ಸೇಷನಲ್​ ಸಾಯಿ ಚಿತ್ತ..!
  • ಡೆಬ್ಯೂ ಮಾಡಲು ಯಂಗ್​ ಬ್ಯಾಟರ್​ ಕಾತರ
  • ಆಂಗ್ಲರ ನಾಡಲ್ಲಿ ಭಾಗ್ಯದ ಬಾಗಿಲು ತೆರೆಯುತ್ತಾ..?

ಇಂಡಿಯನ್​​ ಪ್ರೀಮಿಯರ್​ ಲೀಸ್​ ಸೀಸನ್​ 18ರಲ್ಲಿ ಬೊಂಬಾಟ್​ ನಡೆಸಿ ಮಿಂಚಿದ ಸಾಯಿ ಸುದರ್ಶನ್​ ಇದೀಗ ಟೆಸ್ಟ್​ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ರೆಡ್​​ ಬಾಲ್​​ ಫಾರ್ಮೆಟ್​ನಲ್ಲಿ ರಗಢ್​ ಪರ್ಫಾಮೆನ್ಸ್​ ನೀಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ತನ್ನ ಕ್ಲಾಸಿಕ್​ ಆಟದಿಂದಲೇ ಆಂಗ್ಲರನ್ನ ಕಾಡೋ ಲೆಕ್ಕಾಚಾರದಲ್ಲಿದ್ದಾರೆ.

ಈ ಬಾರಿಯ ಟೀಮ್​ ಇಂಡಿಯಾದ ಇಂಗ್ಲೆಂಡ್​​ ಪ್ರವಾಸದ ಹೊಸ ಪರ್ವಕ್ಕೆ ಸಾಕ್ಷಿಯಾಗಲಿದೆ. ಹೊಸ ನಾಯಕ, ಹೊಸ ಆಟಗಾರರು ಹೊಸ ಹುರುಪಿನಲ್ಲಿ ಕಣಕ್ಕಿಳಿಯಲು ಭಾರತೀಯ ಕ್ರಿಕೆಟ್​ ತಂಡ ಸಜ್ಜಾಗಿದೆ. ಸೀಸನ್​ 18ರ ಐಪಿಎಲ್​ನ ಸೆನ್ಸೇಷನ್​​ ಸಾಯಿ ಸುದರ್ಶನ್​​ ಕೂಡ ಹೊಸ ಜರ್ನಿ ಆರಂಭಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಟೆಸ್ಟ್​ ಕ್ರಿಕೆಟ್​ನತ್ತ ಸೆನ್ಸೇಷನಲ್​ ಸಾಯಿ ಸುದರ್ಶನ್​ ಚಿತ್ತ

ಈ ಸೀಸನ್​​ ಐಪಿಎಲ್​ನಲ್ಲಿ ಸಾಯಿ ಸುದರ್ಶನ್​ ಎಕ್ಸ್​​ಟ್ರಾಡಿನರಿ ಪರ್ಫಾಮೆನ್ಸ್​ ನೀಡಿದ್ರು. ಅದೇನು ಶಾಟ್​​ ಸೆಲೆಕ್ಷನ್​, ಅದೇನು ಟೈಮಿಂಗ್​​, ಅದೇನು ಎಕ್ಸಿಕ್ಯೂಷನ್​​, ನಿಜಕ್ಕೂ ಕ್ಲಾಸಿಕ್​ ಬ್ಯಾಟಿಂಗ್​. ಇಡೀ ಕ್ರಿಕೆಟ್​​ ಲೋಕವೇ ನಿಬ್ಬೆರಗಾಗಿ ಈ ಲೆಫ್ಟಿ ಬ್ಯಾಟ್ಸ್​​ಮನ್​ ಬೊಂಬಾಟ್​ ಬ್ಯಾಟಿಂಗ್​ ನೋಡ್ತು. ಮಿಲಿಯನ್​ ಡಾಲರ್​ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿದು ಹೈಯೆಸ್ಟ್​ ರನ್​ ಗೆಟರ್​ ಆಗಿ ಟೂರ್ನಿಗೆ ಗುಡ್​ ಬೈ ಹೇಳಿದ ಸಾಯಿ ಸುದರ್ಶನ್​ ಇದೀಗ ಟೆಸ್ಟ್​​ ಕ್ರಿಕೆಟ್​ನಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್​.. ಮಹತ್ವದ ಟೂರ್ನಿಯಲ್ಲಿ ರಿಷಭ್ ಪಂತ್ ಆಡೋದು ಡೌಟ್​!​

publive-image

ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರೋ ಸಾಯಿ ಸುದರ್ಶನ್​ ಕ್ರಿಕೆಟ್​ನ ಪ್ಯೂರೆಸ್ಟ್​ ಫಾರ್ಮೆಟ್​ಗೆ ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ಅಂದುಕೊಂಡಂತೆ ಎಲ್ಲಾ ಆದ್ರೆ, ಮೊದಲ ಟೆಸ್ಟ್​ನಲ್ಲೇ ಸಾಯಿ ಸುದರ್ಶನ್​ ಬ್ಯಾಟ್​ ಬೀಸಲಿದ್ದಾರೆ. ವೈಟ್​​ ಬಾಲ್​ ಫಾರ್ಮೆಟ್​ ಮಾತ್ರವಲ್ಲ.. ರೆಡ್​ ಬಾಲ್​​ ಫಾರ್ಮೆಟ್​​ನಲ್ಲೂ ಡೊಮೆಸ್ಟಿಕ್​​ ಸರ್ಕ್ಯೂಟ್​​ನಲ್ಲಿ ರನ್​ ಕೊಳ್ಳೆ ಹೊಡೆದಿರೋದ್ರಿಂದ ಸಾಯಿ ಸುದರ್ಶನ್​ಗೆ ಭಾಗ್ಯದ ಬಾಗಿಲು ತೆರೆಯೋ ಸಾಧ್ಯತೆ ದಟ್ಟವಾಗಿದೆ.

ಫಸ್ಟ್​ ಕ್ಲಾಸ್​ ಕ್ರಿಕೆಟ್​​ನ ಪರ್ಫಾಮೆನ್ಸ್​

ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ 49 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ಸಾಯಿ ಸುದರ್ಶನ್​​ 1957 ರನ್​ಗಳಿಸಿದ್ದಾರೆ. 39.93ರ ಸರಾಸರಿ ಹೊಂದಿರುವ ಎಡಗೈ ಬ್ಯಾಟರ್​ 7 ಸೆಂಚುರಿ, 5 ಹಾಫ್​ ಸೆಂಚುರಿ ಸಿಡಿಸಿದ್ದಾರೆ. ಭಾರತದ ನೆಲದಲ್ಲಿ ಮಾತ್ರವಲ್ಲ.. ಇಂಗ್ಲೆಂಡ್​ನಲ್ಲೂ ಸಾಯಿ ಸುದರ್ಶನ್​ ಸಾಲಿಡ್​ ರೆಕಾರ್ಡ್​ ಹೊಂದಿದ್ದಾರೆ. ಸರ್ರೆ ಪರ ಕೌಂಟಿ ಕ್ರಿಕೆಟ್​ ಆಡೋ ಸಾಯಿ ಸುದರ್ಶನ್​ ಅದ್ಭುತ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದಾರೆ. ಕೌಂಟಿ ಕ್ರಿಕೆಟ್​ನಲ್ಲಿ ಮಾಡಿರೋ ಸಾಧನೆಯೇ ಇಂಗ್ಲೆಂಡ್​ನ ಟಫ್​​​ ಕಂಡಿಷನ್ಸ್​​ನಲ್ಲಿ ಸಾಯಿ ಸುದರ್ಶನ್​​ ಹೇಗೆ ಮಾಡಬಲ್ಲ ಅನ್ನೋದಕ್ಕೆ ನಿದರ್ಶನವಾಗಿದೆ.

ಕೌಂಟಿ ಕ್ರಿಕೆಟ್​ನಲ್ಲಿ ಸಾಯಿ ಸುದರ್ಶನ್​

ಕೌಂಟಿ ಕ್ರಿಕೆಟ್​​ನಲ್ಲಿ 8 ಪಂದ್ಯಗಳಲ್ಲಿ ಬ್ಯಾಟ್​​ ಬೀಸಿರುವ ಸಾಯಿ ಸುದರ್ಶನ್​ 35.12ರ ಸರಾಸರಿಯಲ್ಲಿ 281 ರನ್​ಗಳಿಸಿದ್ದಾರೆ. 1 ಶತಕ, 1 ಅರ್ಧಶತಕ ಸಿಡಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​​ಗೆ ಡೆಬ್ಯೂ ಮಾಡಲು ಸಜ್ಜಾಗಿರೋ ಸಾಯಿ ಸುದರ್ಶನ್​, ಇಂಗ್ಲೆಂಡ್​ ಫ್ಲೈಟ್​ ಹತ್ತೋಕೂ ಮುನ್ನ ವಿರಾಟ್​​ ಕೊಹ್ಲಿಯಿಂದ ಟಿಪ್ಸ್​ ಪಡೆದಿದ್ದಾರೆ. ಟಫ್​ ಸಿಚ್ಯುವೇಶನ್​ನ ಹೇಗೆ ಹ್ಯಾಂಡಲ್​ ಮಾಡಬೇಕು ಅನ್ನೋ ಪ್ರಶ್ನೆಯನ್ನ ಕೊಹ್ಲಿಗೆ ಕೇಳಿ ಸಲಹೆ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್​ ಟೂರ್​ನಲ್ಲಿ ಆರಂಭಿಕ ಸೀಸನ್​ನಲ್ಲಿ ವೈಫಲ್ಯ ಕಂಡು ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿ ರನ್​ ಹೊಳೆ ಹರಿಸಿದ್ದ ಕೊಹ್ಲಿಯ ಸಲಹೆಗಳು ನನಗೆ ನೆರವಾಗುತ್ತವೆ ಅನ್ನೋದು ಸಾಯಿ ಸುದರ್ಶನ್​ ನಂಬಿಕೆ.

ಇದನ್ನೂ ಓದಿ: ಭಾರೀ ಒತ್ತಡದಲ್ಲಿ ಟೀಂ ಇಂಡಿಯಾ.. ತಂಡದ ಆತ್ಮವಿಶ್ವಾಸ ಕುಗ್ಗಲು ಐದು ಕಾರಣ..!

ಐಪಿಎಲ್​ ಅಖಾಡದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿ ರೆಡ್​​ ಹಾಟ್​​ ಫಾರ್ಮ್​ನಲ್ಲಿ ಮಿಂಚಿದ ಸಾಯಿ ಸುದರ್ಶನ್​ ಇದೀಗ ಟೆಸ್ಟ್​​ನಲ್ಲಿ ಮಿಂಚೋದಕ್ಕೆ ಸಜ್ಜಾಗ್ತಿದ್ದಾರೆ. ವೈಟ್​​ಬಾಲ್​ ಫಾರ್ಮೆಟ್​​ನಂತೆ ರೆಡ್​​ಬಾಲ್​​ ಫಾರ್ಮೆಟ್​​ನಲ್ಲೂ ರನ್​ ಹೊಳೆ ಹರಿಸೋ ಲೆಕ್ಕಾಚಾರದಲ್ಲಿದ್ದಾರೆ. ಸಾಯಿ ಸುದರ್ಶನ್​​ ಕನಸು ನನಸಾಗಲು ಮ್ಯಾನೇಜ್​​ಮೆಂಟ್​​ ಅವಕಾಶ ನೀಡುತ್ತಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಓಪನರ್​, 3ನೇ ಕ್ರಮಾಂಕ, 4ನೇ ಕ್ರಮಾಂಕ ಈ 3 ಸ್ಲಾಟ್​ಗಳಲ್ಲಿ ಅಡೋದ್ಯಾರು ಎಂಬ ಬಗ್ಗೆ ಸದ್ಯ ಗೊಂದಲವಿದೆ. ಈ ಸ್ಲಾಟ್​ಗಳ ಪೈಕಿ ಒಂದು ಸ್ಥಾನದಲ್ಲಿ ಕೋಚ್​ ಅಂಡ್ ಕ್ಯಾಪ್ಟನ್​ ಸಾಯಿ ಸುದರ್ಶನ್​ನ ಫಿಟ್​ ಮಾಡ್ತಾರಾ? ಇಲ್ಲಾ ಬೇರೆಯವರಿಗೆ ಅವಕಾಶ ನೀಡಿ ಬೆಂಚ್​ಗೆ ಸೀಮಿತಗೊಳಿಸ್ತಾರಾ? ಕಾದು ನೋಡೋಣ.

ಇದನ್ನೂ ಓದಿ: ಐಫೋನ್​ಗೆ ಈಗ iOS 26 ಸಪೋರ್ಟ್, ಲಿಕ್ವಿಡ್​​ ಗ್ಲಾಸ್​​ನಿಂದ ಇಂಟಲಿಜೆನ್ಸ್​ವರೆಗೆ.. ಅಪ್​​ಡೇಟ್ಸ್​ ಕೊಟ್ಟ ಆ್ಯಪಲ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment