/newsfirstlive-kannada/media/post_attachments/wp-content/uploads/2025/04/RCB_Orange_Purple_Cap.jpg)
ಗ್ರ್ಯಾಂಡ್ ಐಪಿಎಲ್ ಸೀಸನ್- 18 ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ಕೆಲವು ಲೀಗ್ ಪಂದ್ಯಗಳಿದ್ದು, ಬಳಿಕ ಫೈನಲ್ಗಾಗಿ ಪೈಪೋಟಿ ನಡೆಯಲಿದೆ. ಇದರ ನಡುವೆ ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್ಗಾಗಿ ಫೈಟ್ ಕೂಡ ಸಖತ್ ಆಗೇ ನಡೆಯುತ್ತಿದೆ. ಈ ಎರಡಕ್ಕಾಗಿ ಆಟಗಾರರ ನಡುವಿನ ಜಿದ್ದಾಜಿದ್ದಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಸದ್ಯ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ಯಾರ ಬಳಿ ಇವೆ ಎಂದರೆ..?
ಆರೆಂಜ್ ಕ್ಯಾಪ್ ರೇಸ್ನಲ್ಲಿ ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇದ್ದು ಬರೋಬ್ಬರಿ 112 ರನ್ಗಳ ಹಿನ್ನಡೆಯಲ್ಲಿದ್ದಾರೆ. ಅಂದರೆ ಆರೆಂಜ್ ಕ್ಯಾಪ್ ಸದ್ಯ ಗುಜರಾತ್ ಟೈಟನ್ಸ್ ತಂಡದ ಓಪನರ್ ಆದ ಸಾಯಿ ಸುದರ್ಶನ ಬಳಿ ಇದೆ. ಸಾಯಿ ಸುದರ್ಶನ್ ಒಟ್ಟು 12 ಪಂದ್ಯಗಳಿಂದ 617 ರನ್ಗಳಿಂದ ಅಗ್ರ ಸ್ಥಾನಿಯಾಗಿದ್ದಾರೆ. ವಿಶೇಷ ಎಂದರೆ ಎರಡನೇ ಸ್ಥಾನದಲ್ಲೂ ಗುಜರಾತ್ ನಾಯಕ ಶುಭ್ಮನ್ ಗಿಲ್ ಇದ್ದು 601 ರನ್ ಗಳಿಸಿದ್ದಾರೆ.
ಇದನ್ನೂ ಓದಿ:RCB ಪಂದ್ಯದಂತೆ ನಮ್ಮ ತಂಡದ ಮ್ಯಾಚ್ ಸ್ಥಳಾಂತರ ಮಾಡಿ.. ಹೀಗೆ ಕೇಳಿದ್ದು ಯಾಕೆ?
ಆರೆಂಜ್ ಕ್ಯಾಪ್ನ 3ನೇ ಸ್ಥಾನದಲ್ಲಿ ಜೈಸ್ವಾಲ್ ಇದ್ದು ಇವರ ಪಂದ್ಯಗಳ ಮುಗಿದ ಕಾರಣ ಮೊದಲ ಸ್ಥಾನಕ್ಕೆ ಹೋಗಲ್ಲ. ಸೂರ್ಯಕುಮಾರ್ 510 ರನ್ಗಳಿಂದ 4ನೇ ಸ್ಥಾನದಲ್ಲಿದ್ದು ಇಂದಿನ ಪಂದ್ಯ ಸೇರಿ 2 ಮ್ಯಾಚ್ ಇರುವುದರಿಂದ ಇವರಿಗೆ ಅವಕಾಶ ಇದೆ. ಆರ್ಸಿಬಿಯ ವಿರಾಟ್ ಕೊಹ್ಲಿ 505 ರನ್ಗಳಿಂದ 5ನೇ ಸ್ಥಾನದಲ್ಲಿದ್ದು ಉಳಿದ ಎರಡು ಪಂದ್ಯದಲ್ಲಿ ದೊಡ್ಡ ಮಟ್ಟದಲ್ಲಿ ರನ್ ಬಾರಿಸಿದರೆ ಆರೆಂಜ್ ಕ್ಯಾಪ್ ಪಡೆಯಬಹುದು. 493 ರನ್ಗಳಿದ ಕೆ.ಎಲ್ ರಾಹುಲ್ ಅವರಿಗೆ ಅವಕಾಶ ಇದೆ ಎನ್ನಬಹುದು.
ಇನ್ನುಳಿದಂತೆ ಪರ್ಪಲ್ ಕ್ಯಾಪ್ ಕೂಡ ಗುಜರಾತ್ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬಳಿ ಇದೆ. ಪ್ರಸಿದ್ಧ್ ಕೃಷ್ಣ 12 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. 2ನೇ ಸ್ಥಾನದಲ್ಲಿ ಚೆನ್ನೈನ ನೂರ್ ಅಹ್ಮದ್ ಇದ್ದು 13 ಮ್ಯಾಚ್ಗಳಿಂದ 21 ವಿಕೆಟ್ ಪಡೆದಿದ್ದಾರೆ. ಈ ರೇಸ್ನಲ್ಲಿ ಆರ್ಸಿಬಿ ಪೇಸ್ ಬೌಲರ್ ಜೋಶ್ ಹ್ಯಾಜಲ್ವುಡ್ ಕೂಡ ಇದ್ದಾರೆ. ಕೇವಲ 10 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಮುಂದಿನ ಎರಡು ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ರೆ ಪರ್ಪಲ್ ಕ್ಯಾಪ್ ಪಡೆಯುವ ಅವಕಾಶ ಜೋಶ್ ಹ್ಯಾಜಲ್ವುಡ್ಗೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ