/newsfirstlive-kannada/media/post_attachments/wp-content/uploads/2025/01/SAIFE.jpg)
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದು ಒಂದು ವಾರ ಕಳೆದಿದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆ ವ್ಯಕ್ತಿ ಸೈಫ್ ಅಲಿಖಾನ್​​ಗೆ ಬರೋಬ್ಬರಿ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವುದು ತನಿಖೆಯಿಂದ ಬಯಲಾಗಿದೆ.
ಚೂರಿ ಚುಚ್ಚಿದ ನಂತರ ಆಟೋ ಚಾಲಕನೊಬ್ಬ ಸೈಫ್ ಅಲಿಖಾನ್​​​ನ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ದ. ಸಕಾಲದಲ್ಲಿ ಸೈಫ್‌ನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆತಂದು ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಆಟೋ ಚಾಲಕನಿಗೆ ಬಹುಮಾನ ಸಿಕ್ಕಿದೆ.
ಆ ಸಂದರ್ಭದಲ್ಲಿ ಸೈಫ್ ಕುಟುಂಬಸ್ಥರು ಆಟಚಾಲಕನ ಸಹಾಯ ಕೇಳಿದ್ದರು. ಕೂಡಲೇ ಒಪ್ಪಿಕೊಂಡು ಬಂದಿದ್ದ ಆಟೋ ಚಾಲಕ, ತನಗೆ ತಿಳಿದಿರುವ ಶಾರ್ಟ್​​​ಕಟ್​ಗಳ ಮೂಲಕ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೊಗಿದ್ದ. ಇದರಿಂದ ನಟನಿಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿತು. ಅಂದ್ಹಾಗ ಸೈಫ್ ಜೀವ ಉಳಿಸಿದ ಆಟೋ ಚಾಲಕನ ಹೆಸರು, ಭಜನ್ ಸಿಂಗ್. ಆಟೋ ಚಾಲಕನ ಸಹಾಯಕ್ಕೆ ಫಿದಾ ಆಗಿರುವ ಮುಂಬೈನ ಕಂಪನಿಯೊಂದು 11 ಸಾವಿರ ರೂಪಾಯಿ ಬಹುಮಾನ ನೀಡಿದೆ.
ಇದನ್ನೂ ಓದಿ: ಸೈಫ್ ಮೇಲೆ ದಾಳಿ ಮಾಡಿದವ ಅಂತಿಂಥ ಕಿಲಾಡಿ ಅಲ್ಲ.. ಈತ ಭಾರತದವ ಅಲ್ಲವೇ ಅಲ್ಲ..!
ಆಟೋ ಚಾಲಕ ಹೇಳಿದ್ದೇನು?
ದಾಳಿ ಪ್ರಕರಣ ಸಂಬಂದ ಪೊಲೀಸರು ಆಟೋ ಚಾಲಕನ ವಿಚಾರಣೆ ಒಳಪಡಿಸಿದ್ದರು. ‘ಮನುಷ್ಯನ ಬೆನ್ನಿನಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ಆತ ಸೈಫ್ ಅಲಿ ಖಾನ್ ಎಂದು ಗೊತ್ತಿರಲಿಲ್ಲ. ಯಾರೋ ಗಂಭೀರವಾಗಿ ಗಾಯಗೊಂಡಿದ್ದಾರೆ ಅಂದ್ಕೊಂಡೆ. ರಿಕ್ಷಾದಿಂದ ಇಳಿದು ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮುಖ ನೋಡಿದೆ. ಆಗ ಸೈಫ್ ಎಂದು ಗೊತ್ತಾಯ್ತು ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಭಜನ್ ಸಿಂಗ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಫ್ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us