/newsfirstlive-kannada/media/post_attachments/wp-content/uploads/2025/01/SAIF-ALI-KHAN-SUSPECT.jpg)
ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಶಂಕಿತ ಆರೋಪಿಯನ್ನು ಛತ್ತೀಸ್​ಗಢದಲ್ಲಿ ಬಂಧಿಸಲಾಗಿದೆ. ಛತ್ತೀಸ್​​ಗಢ ರೈಲ್ವೆ ಪ್ರೊಟೆಕ್ಷನ್ ಫೋರ್ಸ್​ನಿಂದ ಶಂಕಿತನ ಬಂಧಿನವಾಗಿದ್ದು ಮುಂಬೈ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಲು ಛತ್ತೀಸ್​ಗಢಕ್ಕೆ ಧಾವಿಸಿದ್ದಾರೆ.
ಶಂಕಿತ ಆರೋಪಿಯನ್ನು 31 ವಯಸ್ಸಿನ ಆಕಾಶ್ ಕೈಲಾಶ್ ಕೊನ್ನಾಜಿಯಾ ಎಂದು ಗುರುತಿಸಲಾಗಿದೆ. ಈಗಾಗಲೇ ಛತ್ತೀಸ್​ಗಢದ ರೇಲ್ವೆ ಪ್ರೊಟೆಕ್ಷನ್ ಫೋರ್ಸ್​ನಿಂದ ವಿಚಾರಣೆಯನ್ನು ನಡೆಸಲಾಗಿದೆ. ಶಂಕಿತ ವ್ಯಕ್ತಿ ಜ್ಞಾನೇಶ್ವರಿ ಎಕ್ಸ್​ಪ್ರೆಸ್​ ಟ್ರೇನ್ ಏರಿ ದುರ್ಗಾ ಜಿಲ್ಲೆಗೆ ಹೊರಟ ಮಾಹಿತಿಯನ್ನು ಮುಂಬೈ ಪೊಲೀಸರು ಛತ್ತೀಸ್​ಗಢ ರೈಲ್ವೆ ಪೊಲೀಸರಿಗೆ ಫೋಟೋ ಸಮೇತ ಮುಟ್ಟಿಸಿದ್ದರು
ಛತ್ತೀಸ್​ಗಢಧ ರೈಲ್ವೆ ಪೊಲೀಸರು ಹೇಳುವ ಪ್ರಕಾರ ಸೈಫ್ ಮೇಲೆ ದಾಳಿ ಮಾಡಿದ ವ್ಯಕ್ತಿಯ ಫೋಟೋವನ್ನು ಮುಂಬೈ ಪೊಲೀಸರು ಕಳುಹಿಸಿದ್ದರು ಆ ಫೋಟೋಗೂ ಈ ವ್ಯಕ್ತಿಗೂ ತುಂಬಾ ಸಾಮ್ಯತೆ ಇದ್ದು ಅವನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಆತನನ್ನು ಗುರುತಿಸಿ ಟ್ರೇನ್​ನಲ್ಲಿಯೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ನಮಗೆ ಮುಂಬೈ ಪೊಲೀಸರಿಂದ ಶಂಕಿತ ಆರೋಪಿಯು ಜ್ಞಾನೇಶ್ವರಿ ಎಕ್ಸ್​ಪ್ರೆಸ್ ಟ್ರೇನ್​ನಲ್ಲಿ ಪ್ರಯಾಣ ಮಾಡುತ್ತಿರುವುದಾಗಿ ಸಂದೇಶ ಬಂದಿತ್ತು. ಅವರು ಟವರ್ ಲೋಕೆಶನ್ ಜೊತೆ ಜೊತೆಗೆ ಆತನ ಫೋಟೋವನ್ನು ಕೂಡ ನಮಗೆ ರವಾನಿಸಿದ್ದರು. ನಾವು ಜನರಲ್ ಕೋಚ್​​ನಲ್ಲಿ ಚೆಕ್​ ಮಾಡುತ್ತಾ ಹೋದಾಗ ಆತ ನಮ್ಮ ಕೈಗೆ ಸಿಕ್ಕಾಕಿಕೊಂಡಿದ್ದಾನೆ. ಮುಂಬೈ ಪೊಲೀಸರೊಂದಿಗೆ ವಿಡಿಯೋ ಕಾಲ್ ಮಾಡಿ ಆರೋಪಿಯನ್ನು ತೋರಿಸಿದಾಗ ಅವರು ಇವನು ಅವನೇ ಎಂದು ಕನ್ಫರ್ಮ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಈಕೆ ಪಾಕಿಸ್ತಾನದ ಪ್ರಿಯಾಂಕ ಚೋಪ್ರಾ..! 5 ನಿಮಿಷದ ಜಾಹೀರಾತಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಇನ್ನು ರೈಲ್ವೆ ಪೊಲೀಸರು ವಿಚಾರಣೆ ಮಾಡಿದಾಗ ಶಂಕಿತ ಆರೋಪಿ, ನಾನು ಮುಂಬೈನಲ್ಲಿ ನೆಲೆಸುತ್ತಿದ್ದೇನೆ ನನ್ನ ಸಂಬಂಧಿಕರನ್ನು ನೋಡಲು ನಾನು ಬಿಲಸಾಪುರಕ್ಕೆ ಹೊರಟಿದ್ದೆ ಎಂದು ಹೇಳಿದ್ದಾನೆ. ರೈಲ್ವೆ ಪೊಲೀಸರು ಹೇಳುವ ಪ್ರಕಾರ ಶಂಕಿತ ಆರೋಪಿ ಮುಂಬೈನ ಕೊಲಾಬಾ ಏರಿಯಾದಲ್ಲಿ ವಾಸಿಸುತ್ತಿದ್ದು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು ಮುಂಬೈ ಪೊಲೀಸರು ಈಗಾಗಲೇ ಛತ್ತೀಸ್​ಗಢದತ್ತ ಪ್ರಯಾಣ ಬೆಳೆಸಿದ್ದು. ವಿಮಾನದ ಮೂಲಕ ರಾಯಪುರ್ ತಲುಪಿ ಅಲ್ಲಿಂದ ದುರ್ಗಾ ಜಿಲ್ಲೆಗೆ 8 ಗಂಟೆಯಷ್ಟೊತ್ತಿಗೆ ತಲುಪಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us