/newsfirstlive-kannada/media/post_attachments/wp-content/uploads/2025/01/SAIF-ALI-KHAN-1.jpg)
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಹಲವು ಬಾರಿ ಚಾಕುವಿನಿಂದ ಇರಿತವಾಗಿದೆ. ಅವರ ಬಾಂದ್ರಾ ಮನೆಯಲ್ಲಿಯೇ ಜನವರಿ 16 ರಂದು ಮಧ್ಯರಾತ್ರಿ 2.30ರ ಸುಮಾರಿಗೆ ಈ ಒಂದು ಘಟನೆ ನಡೆದಿದೆ. ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ನಟ ಸೈಫ್ ಅಲಿಖಾನ್ಗೆ ಈಗಾಗಲೇ ಎರಡು ಸರ್ಜರಿ ಆಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದೆಲ್ಲದರ ಮಧ್ಯೆ ಜನರ ನಡುವೆ ಹಲವು ಅನುಮಾನಗಳು ಪ್ರಶ್ನೆಗಳು ಎದ್ದು ನಿಂತಿವೆ. ಅದರಲ್ಲೂ ಪ್ರಮುಖ 10 ಅನುಮಾನಗಳನ್ನು ಜನರು ಹಾಗೂ ಸೈಫ್ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
1 ಸೈಫ್ ಅಲಿಖಾನ್ ಮೇಲೆ ದಾಳಿಯಾಗಿದ್ದು ಯಾವಾಗ?
ಸೈಫ್ ಅಲಿಖಾನ್ ಬಾಲಿವುಡ್ ಕಂಡ ಅತ್ಯಂತ ಪ್ರಮುಖ ನಟರಲ್ಲಿ ಒಬ್ಬರು. ಇಂತಹ ಒಬ್ಬ ನಟನ ಮೇಲೆ ಆರು ಬಾರಿ ಚಾಕುವಿನಿಂದ ದಾಳಿ ಆಗುವುದು ಅಂದ್ರೆ ಅದು ಸಾಮಾನ್ಯದ ವಿಷಯವಲ್ಲ. ತುಂಬಾ ಗಂಭೀರವಾದ ವಿಷಯ. ಇದು ಯಾವಾಗ ಆಯಿತು. ಕುಟುಂಬದವರು ಹೇಳುವ ಪ್ರಕಾರ ನಡುರಾತ್ರಿ 2.30ಕ್ಕೆ ನಡೆದಿದೆ ಎನ್ನಲಾಗುತ್ತಿದೆ. ಪೊಲೀಸರು 3.30 ಎನ್ನುತ್ತಿದ್ದಾರೆ. ಅಸಲಿಗೆ ಅಟ್ಯಾಕ್ ಆಗಿದ್ದು ಯಾವಾಗ ಎಂಬುದು ಇನ್ನೂ ಸ್ಪಷ್ಟನೆ ಬಂದಿಲ್ಲ
2 ದಾಳಿಗೆ ಅಸಲಿ ಕಾರಣವೇನು?
ಪ್ರಮುಖವಾಗಿ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆಯಿದು. ಸೈಫ್ ಅಲಿಖಾನ್ ಯಾವುದೇ ವಿವಾದಗಳಿಲ್ಲದೇ, ತಕರಾರು ತಂಟೆಗಳಿಲ್ಲದೇ ತಮ್ಮ ಪಾಡಿಗೆ ತಾವು ಸಿನಿಮಾ ಮಾಡಿಕೊಂಡು ಬಂದಿರುವ ನಟ. ಇಂತಹ ಸಭ್ಯ ನಟನ ಮೇಲೆ ಈ ರೀತಿಯಾಗಿ ದಾಳಿಯಾಗಲು ಕಾರಣವೇನು ಎಂಬುದು ಅಭಿಮಾನಿಗಳಲ್ಲಿ ಪ್ರಶ್ನೆ ಎದ್ದಿದೆ. ಸದ್ಯ ಇದೇ ವಿಚಾರದ ಬಗ್ಗೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
3. ಸೈಫ್ ಅಲಿಖಾನ್ ಮೇಲೆ ದಾಳಿ ಹೇಗೆ ನಡೆಯಿತು
ಇನ್ನು ಸೈಫ್ ಅಲಿಖಾನ್ ಮೇಲೆ ದಾಳಿ ಹೇಗೆ ನಡೆಯಿತು. ಅಷ್ಟು ದೊಡ್ಡ ಅರಮನೆಯಂತ ಮನೆ. ಹಲವಾರು ಟೈಟ್ ಸೆಕ್ಯೂರಿಟಿ. ಎಲ್ಲೆಯೂ ಕಣ್ಗಾವಲಿನಂತೆ ಇರುವ ಸಿಸಿ ಕ್ಯಾಮರಾಗಳು. ಇವುಗಳ ಮಧ್ಯೆಯೂ ಕೂಡ ಸೈಫ್ ಮೇಲೆ ಅಟ್ಯಾಕ್ ಹೇಗೆ ನಡೆಯಿತು ಎಂಬ ಪ್ರಶ್ನೆಗಳು ಎದ್ದಿವೆ. ಕರೀನಾ ಕಪೂರ್ ಹೇಳುವ ಪ್ರಕಾರ ಕಳ್ಳತನಕ್ಕೆ ಅಂತ ಬಂದವನು ಸೈಫ್ ಮೇಲೆ ಹಲವು ಬಾರಿ ದಾಳಿ ಮಾಡಿದ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಕರೀನಾ ಹೇಳಿದ್ದಾರೆ.
4. ಸೈಫ್ ಮೇಲೆ ದಾಳಿ ನಡೆದಾಗ ಕರೀನಾ ಎಲ್ಲಿದ್ದರು?
ಇನ್ನೂ ಸೈಫ್ ಮೇಲೆ ನಿರಂತರವಾಗಿ ಆರು ಬಾರಿ ಚಾಕುವಿನಿಂದ ದಾಳಿ ನಡೆದಾಗ ಕರೀನಾ ಹಾಗೂ ಮಕ್ಕಳು ಎಲ್ಲಿದ್ದರು ಎಂಬ ಪ್ರಶ್ನೆಗಳು ಕೂಡ ಎದ್ದಿವೆ. ಘಟನೆ ನಡೆದ ಸಮಯದಲ್ಲಿ ಕರೀನಾ, ತೈಮೂರ್ ಮತ್ತು ಜೆಹ್ ಅಲ್ಲಿಯೇ ಇದ್ದರು. ಆದರೆ ಯಾವುದೇ ರೀತಿಯ ಅಪಾಯವಾಗದಂತೆ ಅವರು ಪಾರಾದರು ಎಂಬ ಮಾಹಿತಿ ದೊರಕಿದೆ. ಬುಧವಾರ ಕರೀನಾ ತಮ್ಮ ಸಹೋದರಿ ಕರಿಷ್ಮಾ ಕಪೂರ್, ಪ್ರೊಡ್ಯೂಸರ್ ರಿಯಾ ಕಪೂರ್ ಹಾಗೂ ನಟಿ ಸೋನಮ್ ಕಪೂರ್ ಜೊತೆ ಇದ್ದರು. ಆದ್ರೆ ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ.. ಕರೀನಾ ಕಪೂರ್ ತಪ್ಪಿಸಿಕೊಂಡಿದ್ದು ಹೇಗೆ?
5 ಸೈಫ್ ಬಿಟ್ಟು ಮತ್ಯಾರಿಗಾದರೂ ಗಾಯಗಳಾಗಿವೆಯಾ?
ಸೈಫ್ ಬಿಟ್ಟು ಕುಟುಂಬದ ಯಾವ ಸದಸ್ಯರಿಗೂ ಕೂಡ ಗಾಯಗಳು ಆಗಿಲ್ಲ. ಆದ್ರೆ ಸೈಫ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆಯ ಮೇಲೆಯೂ ನೀಚ ಚಾಕುವಿನಿಂದ ಇರಿದಿದ್ದಾನೆ. ಆಕೆಯನ್ನು ಕೂಡ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು. ಮಹಿಳೆಯ ಆರೋಗ್ಯ ಸ್ಥಿರವಾಗಿದೆ.
6. ಸೈಫ್ ಫ್ಯಾಮಿಲಿ ಈಗ ಎಷ್ಟು ಸೇಫ್
ಸದ್ಯ ಸೈಫ್ ಅಲಿಖಾನ್ ಕುಟುಂಬ ಎಷ್ಟು ಸೇಫ್ ಎಂಬ ಪ್ರಶ್ನೆಗಳು ಎದ್ದಿವೆ. ಇಷ್ಟೆಲ್ಲಾ ಸುರುಕ್ಷತಾ ವ್ಯವಸ್ಥೆಗಳು ಇದ್ದರೂ ಕೂಡ ಈ ಒಂದು ಘಟನೆ ನಡೆದಿದ್ದು ಕುಟುಂಬದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸದ್ಯ ಈ ಬಗ್ಗೆ ಮಾತನಾಡಿರುವ ಕರೀನಾ ಕಪೂರ್. ಇದೊಂದು ನಡೆಯಬಾರದ ಘಟನೆ ನಡೆದಿದೆ. ಮಾಧ್ಯಮಗಳು ಹಾಗೂ ಅಭಿಮಾನಿಗಳು ಸ್ವಲ್ಪ ತಾಳ್ಮೆಯಿಂದ ಇರಬೇಕು. ಪೊಲೀಸರು ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ನಿಮ್ಮ ಕಾಳಜಿಗೆ ನಾವು ಋಣಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸೈಫ್ ಅಲಿ ಖಾನ್ ಮನೆ ಕೆಲಸದವಳ ಮೇಲೆ ಪೊಲೀಸರಿಗೆ ಅನುಮಾನ; ಕಾರಣ ಏನು ಗೊತ್ತಾ..?
7. ಪೊಲೀಸರು ಏನು ಹೇಳುತ್ತಿದ್ದಾರೆ. ?
ಪೊಲೀಸರು ಮೀಡಿಯಾಗಳಿಗೆ ಹೇಳಿರುವ ಪ್ರಕಾರ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಯಾವುದೇ ವ್ಯಕ್ತಿ ಅನುಮಾನಾಸ್ಪದವಾಗಿ ನುಸುಳಿರುವ ಸಾಕ್ಷಿ ಸಿಕ್ಕಿಲ್ಲ. ಹೊರಗಿನವರು ಯಾರು ಕೂಡ ಒಳಗೆ ಬಂದಿಲ್ಲ. ನಮ್ಮ ಆರಂಭಿಕ ತನಿಖೆಯಿಂದ ಬಂದ ವಿಚಾರ ಅಂದ್ರೆ ದಾಳಿಕೋರ ಈ ಮೊದಲೆ ಮನೆಯೊಳಗಿದ್ದ. ನಂತರ ಕಳ್ಳತನ ಮಾಡಲು ಹೋಗಿ ನಟನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ಹೇಳಿದ್ದಾರೆ.
8. ನಟ ಸೈಫ್ ಅಲಿಖಾನ್ ಈಗ ಹೇಗಿದ್ದಾರೆ?
ಸದ್ಯ ಎಲ್ಲರಲ್ಲೂ ಮನೆ ಮಾಡಿರುವ ಆತಂಕ ಹಾಗೂ ಪ್ರಶ್ನೆ ಅಂದ್ರೆ ಸೈಫ್ ಅಲಿಖಾನ್ ಆರೋಗ್ಯ ಈಗ ಹೇಗಿದೆ ಅನ್ನೋದು. 6 ಬಾರಿ ಭೀಕರವಾಗಿ ನಟನ ಮೇಲೆ ಚಾಕುವಿನಿಂದ ದಾಳಿಯಾಗಿದೆ. ದೇಶದಲ್ಲಿ ಒಟ್ಟು 6 ಗಂಭೀರ ಗಾಯಗಳಾಗಿವೆ. ಅದರಲ್ಲೂ ಬೆನ್ನಿಗೆ ಚುಚ್ಚಿದ ಚಾಕು ಸ್ಪೈನಲ್ಗೆ ತಾಗುವುದರಿಂದ ಕೊಂಚದರಲ್ಲಿಯೇ ತಪ್ಪಿದೆ ಎಂದು ಹೇಳಲಾಗಿದೆ. ಸದ್ಯ ಡಾ.ನಿತಿನ್ ಡಂಗೆ ಅವರ ನೇತೃತ್ವದಲ್ಲಿ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು. ಸೈಫ್ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ.
ಸೈಫ್ರನ್ನು ಯಾರೆಲ್ಲಾ ಭೇಟಿಯಾಗಿ ಬಂದಿದ್ದಾರೆ?
ಇನ್ನೂ ಸೈಫ್ ಮೇಲೆ ನಡೆದ ಈ ಒಂದು ದಾಳಿಯಿಂದ ಇಡೀ ಬಾಲಿವುಡ್ ಜಗತ್ತು ಬೆಚ್ಚಿ ಬಿದ್ದಿದೆ. ಇಂಡಸ್ಟ್ರೀ ಫ್ರೆಂಡ್ಸ್ ಸೈಫ್ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ಮುಂದಾಗಿದ್ದಾರೆ. ಆದ್ರೆ ಸದ್ಯ ಸೈಫ್ಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು. ಕರೀನಾ ಕಪೂರ್ ಆಸ್ಪತ್ರೆಯಲ್ಲಿಯೇ ಇದ್ದಾರೆ. ಇನ್ನು ನಿರ್ದೇಶಕ ಸಿದ್ಧಾರ್ಥ ಆನಂದ, ಅವರ ಪತ್ನಿ ಕುನಾಲ್ ಕೊಹ್ಲಿ ಸೇರಿ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸಿಸಿಟಿವಿಯಲ್ಲಿ ಏನೆಲ್ಲಾ ಕಂಡು ಬಂದಿದೆ?
ಇನ್ನು ಸೈಫ್ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪೊಲೀಸರು ಜಾಲಾಡಿದ್ದಾರೆ. ಘಟನೆ ನಡೆಯುವ ಮುನ್ನದ ಎರಡು ಗಂಟೆಗಳ ಅವಧಿಯ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆದರೆ ಅಲ್ಲಿ ಯಾವುದೇ ಹೊಸಬರು ವ್ಯಕ್ತಿಗಳು ಮನೆಯೊಳಗೆ ನುಸುಳಿದ ದೃಶ್ಯಗಳು ಕಂಡು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ