BREAKING ಸೈಫ್ ಅಲಿ ಖಾನ್ ಮೇಲೆ ಮಧ್ಯರಾತ್ರಿ ಚಾಕುವಿನಿಂದ ಅಟ್ಯಾಕ್

author-image
Veena Gangani
Updated On
BREAKING ಸೈಫ್ ಅಲಿ ಖಾನ್ ಮೇಲೆ ಮಧ್ಯರಾತ್ರಿ ಚಾಕುವಿನಿಂದ ಅಟ್ಯಾಕ್
Advertisment
  • ಬಾಲಿವುಡ್ ಸ್ಟಾರ್ ನಟನ ಮೇಲೆ ಮಾರಣಾಂತಿಕ ದಾಳಿ
  • ಮಧ್ಯರಾತ್ರಿ 2.30 ಕ್ಕೆ ಎಂಟ್ರಿಯಾಗಿ ದಾಳಿ ಮಾಡಲಾಗಿದೆ
  • ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು, ಮುಂದುವರಿದ ಚಿಕಿತ್ಸೆ

ಬಾಲಿವುಡ್​ ಖ್ಯಾತ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತವಾಗಿದೆ. ಮಹಾರಾಷ್ಟ್ರದ ಬಾಂದ್ರಾದಲ್ಲಿರೋ ನಿವಾಸಕ್ಕೆ ನುಗ್ಗಿದ ಅಪರಿಚಿತ ರಾಬರಿಕೋರ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ್ದಾನೆ. ವರದಿಗಳ ಪ್ರಕಾರ, ಎರಡರಿಂದ ಮೂರು ಬಾರಿ ನಟನ ಮೇಲೆ ಚಾಕುವಿನಿಂದ ಚುಚ್ಚಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಗವಿಸಿದ್ದೇಶ್ವರ ಜಾತ್ರೆಯ ಸ್ಪೆಷಲ್‌ ಮಿರ್ಚಿ ಬಜ್ಜಿ.. ಇದರ ವಿಶೇಷತೆ ಏನು ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ!

ಚಾಕು ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ, ತಡರಾತ್ರಿ 2.30ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಸೈಫ್ ಮನೆಗೆ ನುಗ್ಗಿದ್ದಾನೆ. ನಟನ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಸೈಫ್ ಅಲಿ ಖಾನ್ ಗಂಭೀರ ಗಾಯಗೊಂಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ನಟ ನಿವಾಸಕ್ಕೆ ಪೋಲಿಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment