/newsfirstlive-kannada/media/post_attachments/wp-content/uploads/2025/01/DAYANAYAK.jpg)
ಸೈಫ್​​ ಅಲಿ ಖಾನ್.. (Saif Ali Khan) ನವಾಬ್​ ಆಫ್​​ ಪಟೌಡಿ.. ಬಾಲಿವುಡ್​​ನ ದಿಗ್ಗಜ ನಟರಲ್ಲೊಬ್ಬರು.. ಸುಮಾರು ಮೂರು ದಶಕಗಳಿಂದ ಬಾಲಿವುಡ್​​ನಲ್ಲಿ ಹಿಟ್​​ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗವನ್ನ ಹೊಂದಿದ್ದಾರೆ.. ಆದ್ರೀಗ ಸೈಫ್​​ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಇಡೀ ಬಾಲಿವುಡ್ ಬೆಚ್ಚಿ ಬೀದ್ದಿದೆ.
ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿಯಲ್ಲಿ ಸಿಕ್ಕಿರುವ ಆರೋಪಿಯ ಜಾಡು ಹಿಡಿದು ತನಿಖಾಧಿಕಾರಿಗಳು ಹೊರಟಿದ್ದಾರೆ. ವಿಶೇಷ ಅಂದ್ರೆ ಸೈಫ್ ಅಲಿ ಖಾನ್ ನಿವಾಸಕ್ಕೆ ಎನ್​ಕೌಂಟರ್​ ಸ್ಪೆಷಲಿಸ್ಟ್, ಕರ್ನಾಟಕ ಮೂಲದ ದಯಾ ನಾಯಕ್ (Daya Nayak) ಎಂಟ್ರಿಯಾಗಿದ್ದಾರೆ.
ಇದನ್ನೂ ಓದಿ: ಬಿಜಾಪುರ ಜಿಲ್ಲೆಯಲ್ಲಿ 17 ಕೆಂಪು ಉಗ್ರರು ಫಿನಿಶ್.. ಹೇಗಿತ್ತು ರೋಚಕ ಕಾರ್ಯಾಚರಣೆ..?
/newsfirstlive-kannada/media/post_attachments/wp-content/uploads/2025/01/DAYANAYAK-1.jpg)
ಯಾರು ಈ ದಯಾ ನಾಯಕ್..?
ದಯಾ ನಾಯಕ್​ ಕರ್ನಾಟಕದ ಉಡುಪಿಯವರು. ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಅಂತಲೇ ಜನಪ್ರಿಯರಾಗಿದ್ದಾರೆ. ಕೊಂಕಣಿ ಕುಟುಂಬದಲ್ಲಿ ಜನಿಸಿದ ದಯಾ ನಾಯಕ್, ಬಡ್ಡ ಮತ್ತು ರಾಧಾ ನಾಯಕ್ ದಂಪತಿಯ ಕಿರಿಯ ಪುತ್ರ. ಉಡುಪಿಯಲ್ಲಿ ಪ್ರಥಮಿ ಶಿಕ್ಷಣವನ್ನು ಮುಗಿಸಿದರು. ನಂತರ ಕುಟುಂಬಕ್ಕೆ ಆಧಾರವಾಗಲು ಉದ್ಯೋಗ ಹುಡುಕಿಕೊಂಡು 1979ರಲ್ಲಿ ಮುಂಬೈ ಬಂದರು. ಅಲ್ಲಿ ಹೋಟೆಲ್​ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರದ ದಿನಗಳಲ್ಲಿ ಹೋಟೆಲ್ ಕಾರಿಡಾರ್​​​​ನಲ್ಲೇ ಕೂತು ಓದಿ 12ನೇ ಕ್ಲಾಸ್ ಪಾಸ್ ಮಾಡಿದರು. ಮತ್ತೆ ಓದು ಆಸೆಯನ್ನು ಚಿಗುರಿಸಿಕೊಂಡ ದಯಾ ನಾಯಕ್, ಕೆಲಸ ಮಾಡುತ್ತಲೇ ಅಂಧೇರಿಯ ಸಿಇಎಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡರು. ಪದವಿ ನಂತರ ಪೊಲೀಸ್ ಅಧಿಕಾರಿ ಆಗಬೇಕೆಂಬ ಹಠಕ್ಕೆ ಬಿದ್ದು, ಅದನ್ನು ಸಾಧಿಸಿದ್ದಾರೆ.
ಭೂಗತ ಜಗತ್ತನ್ನೇ ನಡುಗಿಸಿದ ದಯಾ ನಾಯಕ್
1995ರಲ್ಲಿ ಪೊಲೀಸ್ ಅಕಾಡೆಮಿಯಿಂದ ಪದವಿ ಪಡೆದ ನಂತರ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಆಗಿ ನೇಮಕಗೊಂಡರು. ಆ ಸಮಯದಲ್ಲಿ ಮುಂಬೈನಲ್ಲಿ ಭೂಗತ ಜಗತ್ತು ಉತ್ತುಂಗದಲ್ಲಿತ್ತು. 1996 ರಲ್ಲಿ ಮುಂಬೈನ ಜುಹುದಲ್ಲಿ ಇಬ್ಬರು ಛೋಟಾ ರಾಜನ್​ ಸಹಚರರನ್ನು ಎನ್​ಕೌಂಟರ್ ಮಾಡುವ ಮೂಲಕ ದಯಾ ನಾಯಕ್ ಮುನ್ನಲೆಗೆ ಬಂದರು. ಮುಂದಿನ ದಿನಗಳಲ್ಲಿ ದರೋಡೆಕೋರರಿಗೆ, ರೌಡಿಗಳಿಗೆ ದುಸ್ವಪ್ನವಾಗಿ ಕಾಡಿದರು.
ಇದನ್ನೂ ಓದಿ: ಸೈಫ್ ಅಲಿಖಾನ್​ ಮೇಲೆ ದಾಳಿ ಪ್ರಕರಣ.. ಕೊನೆಗೂ ಆರೋಪಿ ಸುಳಿವು ಪತ್ತೆ; ಅಸಲಿ ಕಾರಣ ಬಹಿರಂಗ!
/newsfirstlive-kannada/media/post_attachments/wp-content/uploads/2025/01/Saif-Ali-Khan4.jpg)
ಸಿನಿಮಾ ಆಗಿವೆ ರಿಯಲ್ ಎನ್​ಕೌಂಟರ್ ಸ್ಟೋರಿಗಳು..
ಮಹಾರಾಷ್ಟ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿರುವ ದಯಾ ನಾಯಕ್ ಅವರ ರಿಯಲ್​ ಎನ್‌ಕೌಂಟರ್ ಕಥೆಗಳು ಸಿನಿಮಾ ಆಗಿ ತೆರೆ ಮೇಲೆ ಬಂದಿದೆ. ಮುಂಬೈ ದರೋಡೆಕೋರರ ಹುಟ್ಟಡಗಿಸಿದ ಖ್ಯಾತಿ ಇವರದ್ದು. 1990ರ ದಶಕದಲ್ಲಿ 80ಕ್ಕೂ ಹೆಚ್ಚು ಭೂಗತ ದರೋಡೆಕೋರರ ಫಿನಿಶ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us