ಆಸ್ಪತ್ರೆಯಿಂದ ಬರ್ತಿದ್ದಂತೆ ಬಿಗ್ ಶಾಕ್.. 15 ಸಾವಿರ ಕೋಟಿ ಆಸ್ತಿ ನಷ್ಟ..? ಸೈಫ್ ಬದುಕಲ್ಲಿ ಏನಾಗ್ತಿದೆ?

author-image
Bheemappa
Updated On
ಆಸ್ಪತ್ರೆಯಿಂದ ಬರ್ತಿದ್ದಂತೆ ಬಿಗ್ ಶಾಕ್.. 15 ಸಾವಿರ ಕೋಟಿ ಆಸ್ತಿ ನಷ್ಟ..? ಸೈಫ್ ಬದುಕಲ್ಲಿ ಏನಾಗ್ತಿದೆ?
Advertisment
  • ಚೇತರಿಸಿಕೊಂಡು ಮನೆಗೆ ಬಂದ ಸೈಫ್ ಅಲಿ ಖಾನ್​ಗೆ ಆಸ್ತಿ ನಷ್ಟನಾ?
  • ಸೈಫ್ ಅಲಿ ಖಾನ್ ಮೇಲೆ ಇತ್ತೀಚೆಗೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದನು
  • 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕಳೆದುಕೊಳ್ಳುತ್ತಾರಾ?

ಭೋಪಾಲ್​: ಮಧ್ಯಪ್ರದೇಶದಲ್ಲಿರುವ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಾಲಿವುಡ್​ ಸ್ಟಾರ್ ಸೈಫ್​ ಅಲಿ ಖಾನ್ ಅವರು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸೈಫ್​ ಅಲಿ ಖಾನ್ ಪಟೌಡಿ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶದ ಹೈಕೋರ್ಟ್​ ವಜಾಗೊಳಿಸಿದೆ.

ಕೊಹೆಫಿಜಾ ಪ್ರದೇಶದಿಂದ ಭೋಪಾಲ್‌ನ ಚಿಕ್ಲೋಡ್‌ವರೆಗೆ ಸೈಫ್​ ಅಲಿ ಖಾನ್ ಅವರ ಪಟೌಡಿ ಕುಟುಂಬದ ಪೂರ್ವಿಕರ ಆಸ್ತಿ ವಿಸ್ತರಿಸಿದೆ. ಇದನ್ನು ಶತ್ರು ಆಸ್ತಿ (Enemy Property) ಎಂದು 2014ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಅಲ್ಲದೇ ಈ ಆಸ್ತಿ ಮೇಲೆ ಪಟೌಡಿ ಕುಟುಂಬದ ಉತ್ತರಾಧಿಕಾರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್​ಗೆ ಸೈಫ್ ಅಲಿ ಖಾನ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಇದೀಗ ಹೈಕೋರ್ಟ್​ ವಜಾಗೊಳಿಸಿದೆ.

publive-image

ಹೈಕೋರ್ಟ್‌ನ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಡಿಸೆಂಬರ್ 13, 2024 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಅರ್ಜಿ ವಜಾಗೊಳಿಸಿದೆ. ನಟನ ಕುಟುಂಬಕ್ಕೆ ಮೇಲ್ಮನವಿ ಸಲ್ಲಿಸಲು ಜನವರಿ 13ರವರೆಗೆ ಅವಕಾಶ ಇತ್ತು ಆದರೆ ಅವರು ಮೇಲ್ಮನವಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಇಷ್ಟು ದಿನ ಕೇಂದ್ರ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಆದರೆ ಈಗ ತಡೆಯಾಜ್ಞೆ ತೆರವುಗೊಳಿಸಿದೆ. ಇದರಿಂದ ಕೇಂದ್ರ ಸರ್ಕಾರದ ‌ಆಸ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು. ಈ ಮಧ್ಯೆ ಸೈಫ್ ಅಲಿಖಾನ್ ಪಟೌಡಿ ಕುಟುಂಬ ಸುಪ್ರೀಂ ಕೋರ್ಟ್​ನಿಂದ ರಿಲೀಫ್ ಪಡೆಯದಿದ್ದರೇ 15 ಸಾವಿರ ಕೋಟಿ ಆಸ್ತಿ ಕೇಂದ್ರ ಸರ್ಕಾರದ ವಶವಾಗುವುದು ಪಕ್ಕಾ ಎಂದು ಹೇಳಲಾಗ್ತಿದೆ. ಅಲ್ಲದೇ ಸೈಫ್ ಅಲಿ ಖಾನ್ ಪಟೌಡಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ‌ಮೆಟ್ಟಿಲೇರಲು ಇನ್ನೂ ಅವಕಾಶ ಇದೆ.

ಶತ್ರು ಆಸ್ತಿ ಕಾಯ್ದೆ ಎಂದರೇನು?

ಶತ್ರು ಆಸ್ತಿ ಕಾಯ್ದೆ 1968ರಲ್ಲಿ ಭಾರತ ಸರ್ಕಾರ ಜಾರಿಗೆ ತಂದಿದೆ. ಇದರ ಅಡಿ ಭಾರತ- ಪಾಕ್​ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ಹೋದ ಜನರು, ಭಾರತದಲ್ಲಿ ಬಿಟ್ಟುಹೋದ ಆಸ್ತಿಯ ಮೇಲೆ ಕೇಂದ್ರ ಸರ್ಕಾರಕ್ಕೆ ಮಾತ್ರ ಹಕ್ಕು ಇರುತ್ತದೆ. ಅಲ್ಲದೇ ಈ ಎಲ್ಲ ಆಸ್ತಿಗಳು ಶತ್ರು ಆಸ್ತಿ ಕಾಯ್ದೆ ಅಡಿ ಬರುತ್ತವೆ. ಈ ಕಾಯ್ದೆಯಂತೆ ಸೈಫ್​ ಅಲಿ ಖಾನ್ ಪೂರ್ವಿಕರು ವಿಭಜನೆ ಸಮಯದಲ್ಲಿ ಪಾಕ್​ಗೆ ಹೋಗಿದ್ದಾರೆ.

ಪಾಕಿಸ್ತಾನಕ್ಕೆ ಹೋಗಿದ್ದ ನವಾಬ್ ಹಮೀದುಲ್ಲಾ ಖಾನ್ ಅವರ ಹಿರಿಯ ಮಗಳು ಅಬಿದಾ ಅವರ ಆಸ್ತಿಯ ಕಾನೂನುಬದ್ಧ ಉತ್ತರಾಧಿಕಾರಿ ಎಂದು ಕೇಂದ್ರ ಸರ್ಕಾರ 2015ರಲ್ಲಿ ಸ್ಪಷ್ಟಪಡಿಸಿತ್ತು. ಆದ್ದರಿಂದ ಈ ಆಸ್ತಿ ಶತ್ರು ಆಸ್ತಿ ಕಾನೂನಿನ ಅಡಿಯಲ್ಲಿ ಬರುತ್ತದೆ. ನವಾಬನ 2ನೇ ಮಗಳು ಸಾಜಿದಾ ಸುಲ್ತಾನ್ (ಸೈಫ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರಂತೆ) ವಂಶಸ್ಥರು ಈ ಆಸ್ತಿಯ ಮೇಲೆ ತಮ್ಮ ಹಕ್ಕು ಹೊಂದಿದ್ದಾರೆ.

ಇದನ್ನೂ ಓದಿ:BBK11; ಬಿಗ್​ಬಾಸ್​ ಮನೆಗೆ ಮಜಾ ಟಾಕೀಸ್​ನ ಕುರಿ ಪ್ರತಾಪ್ ಸೇರಿ ಕಾಮಿಡಿ ಟೀಮ್ ಎಂಟ್ರಿ.. ಸರ್ಪ್ರೈಸ್‌

publive-image

ನವಾಬ್ ಹಮೀದುಲ್ಲಾ ಖಾನ್ ಪಾಕ್​ಗೆ ಹೋದ ಕಾರಣ ಕೇಂದ್ರ ಸರ್ಕಾರ ತಡೆಯಾಜ್ಞೆ ತಂದು 2015ರಲ್ಲಿ ಆಸ್ತಿಯನ್ನು ಶತ್ರು ಆಸ್ತಿ ಕಾಯ್ದೆಯಡಿ ತಂದಿದೆ. ಹೀಗಾಗಿ ಇದು ಈಗ ಕೇಂದ್ರದ ವ್ಯಾಪ್ತಿಗೆ ಒಳಪಡಬಹುದು. ಎಲ್ಲ ಆಸ್ತಿಯನ್ನು ಕೇಂದ್ರ ಸರ್ಕಾರವೇ ವಶಕ್ಕೆ ಪಡೆಯುವ ಅವಕಾಶ ಇದೆ.

ನಟನ ಮೇಲೆ ಇತ್ತೀಚೆಗೆ ಹಲ್ಲೆ, ಜೀವ ಉಳಿದಿದ್ದೆ ಹೆಚ್ಚು

ಜನವರಿ 16ರ ಮಧ್ಯೆ ರಾತ್ರಿ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ಖದೀಮ ಹಣಕ್ಕಾಗಿ ನಟ ಸೇರಿ ಮನೆ ಕೆಲಸದವರ ಮೇಲೆ ಹಲ್ಲೆ ಮಾಡಿದ್ದನು. ಸೈಫ್ ಅಲಿ ಖಾನ್ ಸೇರಿ ಅವರನ್ನು ಮನೆ ಸಿಬ್ಬಂದಿಯನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸದ್ಯ ನಟ ಸೇಫ್ ಹಾಗೂ ಸಿಬ್ಬಂದಿ ಆಗಿದ್ದು ಆರೋಗ್ಯವಾಗಿ ಮನೆಗೆ ಹಿಂದಿರುಗಿದ್ದಾರೆ. ಇದರ ಬೆನ್ನಲ್ಲೇ ಕೋರ್ಟ್​ನಿಂದ ಈ ಆದೇಶ ಹೊರ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment