Advertisment

ಆಸ್ಪತ್ರೆಗೆ ತಲುಪಿಸಿದ ಆಟೋ ಡ್ರೈವರ್​ನನ್ನು ಭೇಟಿ ಮಾಡಿದ ಸೈಫ್ ಅಲಿಖಾನ್: ಆ ರಾತ್ರಿ ನಡೆದಿದ್ದೇನು?

author-image
Gopal Kulkarni
Updated On
ಆಸ್ಪತ್ರೆಗೆ ತಲುಪಿಸಿದ ಆಟೋ ಡ್ರೈವರ್​ನನ್ನು ಭೇಟಿ ಮಾಡಿದ ಸೈಫ್ ಅಲಿಖಾನ್: ಆ ರಾತ್ರಿ ನಡೆದಿದ್ದೇನು?
Advertisment
  • ಆಪತ್ಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ ಆಟೋ ಡ್ರೈವರ್​​ನನ್ನು ಭೇಟಿಯಾದ ಸೈಫ್
  • ಲೀಲಾವತಿ ಆಸ್ಪತ್ರೆಯಲ್ಲಿದ್ದಾಗಲೇ ಭಜನ್ ಸಿಂಗ್​ರನ್ನು ಕರೆಸಿ ಮಾತನಾಡಿದ ನಟ
  • ಆಸ್ಪತ್ರೆಗೆ ದಾಖಲಾಗುವವರೆಗೂ ಭಜನ್​ಗೆ ಅವರು ಸೈಫ್ ಎಂದು ಗೊತ್ತೇ ಇರಲಿಲ್ಲ

ಬಾಲಿವುಡ್ ನಟ ಸೈಫ್ ಅಲಿಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಭಜನ್ ಸಿಂಗ್ ರಾಣಾ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ಸೈಫ್ ಅಲಿಖಾನ್ ಮೇಲೆ ಆಗಂತುಕನೊಬ್ಬ ಮಧ್ಯರಾತ್ರಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವೇಳೆ ಆಟೋ ಡ್ರೈವರ್ ಭಜನ್ ಸಿಂಗ್​ ರಾಣಾ ಅವರನ್ನು ಲೀಲಾವತಿ ಆಸ್ಪತ್ರೆ ಕರೆದುಕೊಂಡು ಹೋಗಿ ಆ ನಡುರಾತ್ರಿಯಲ್ಲಿ ಮಾನವೀಯತೆ ಮೆರೆದಿದ್ದ ಅವರನ್ನು ಸೈಫ್ ಅಲಿಖಾನ್ ಮೀಟ್ ಆಗಿದ್ದಾರೆ.

Advertisment

ಸದ್ಯ ಸೈಫ್ ಅಲಿಖಾನ್ ಭಜನ್ ಸಿಂಗ್​ರನ್ನು ಭೇಟಿ ಮಾಡಿದ ಫೋಟೋ ಸದ್ಯ ಎಕ್ಸ್​ ಖಾತೆಯಲ್ಲಿ ವೈರಲ್ ಆಗುತ್ತಿದೆ. ಭಜನ್ ಸಿಂಗ್ ಹಾಗೂ ಸೈಫ್ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಸ್ಪತ್ರೆಯಿಂದ ಬಿಡುಗಡೆಯಾಗುವದಕ್ಕೆ ಮೊದಲೇ ಲೀಲಾವತಿ ಆಸ್ಪತ್ರೆಯ ವಾರ್ಡ್​​ನ ಬೆಡ್​ ಮೇಲೆ ಕುಳಿತುಕೊಂಡು ಇಬ್ಬರು ಪೋಸ್​ ಕೊಟ್ಟಿದ್ದಾರೆ. ಸೈಫ್ ಅಲಿಖಾನ್​, ಅವರ ತಾಯಿ ಶರ್ಮಿಳಾ ಟಾಗೋರ್​ ಸಮೇತ ಇಡೀ ಕುಟುಂಬವೇ ಭಜನ್​ ಸಿಂಗ್​ಗೆ ಧನ್ಯವಾದಗಳನ್ನು ಹೇಳಿದೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಬರ್ತಿದ್ದಂತೆ ಬಿಗ್ ಶಾಕ್.. 15 ಸಾವಿರ ಕೋಟಿ ಆಸ್ತಿ ನಷ್ಟ..? ಸೈಫ್ ಬದುಕಲ್ಲಿ ಏನಾಗ್ತಿದೆ?

ಜನವರಿ 16 ರಂದು ಸೈಫ್ ಅಲಿ ಖಾನ್ ಮೇಲೆ ಆಗಂತುಕನೊಬ್ಬ ನಡುರಾತ್ರಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಈತನನ್ನು ಈಗಾಗಲೇ ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ ಶರಿಫುಲ್ ಶೆಹ್ಜಾದ್ ಎಂಧು ಗುರುತಿಸಲಾಗಿದೆ. ನಡುರಾತ್ರಿ 2.30ರ ಸಮಯದಲ್ಲಿ ಸೈಫ್ ಮೇಲೆ ಇಂತಹದೊಂದು ದಾಳಿ ನಡೆಯಿತು. ಅರ್ಜೆಂಟಾಗಿ ಸೈಫ್​ರನ್ನು ಆಸ್ಪತ್ರೆಗೆ ತಲುಪಿಸಬೇಕಿತ್ತು

Advertisment

ಇದನ್ನೂ ಓದಿ:‘ನಾನೊಬ್ಬ ಸೆಲೆಬ್ರಿಟಿ, ನನಗೆ ಗನ್​ ಬೇಕೇ ಬೇಕು’- ಪೊಲೀಸ್ರ ಮುಂದೆ ನಟ ದರ್ಶನ್​​ ಡಿಮ್ಯಾಂಡ್

ಭಜನ್ ಲಾಲ್ ರಾಷ್ಟ್ರೀಯ ಮಾಧ್ಯಗಳಿಗೆ ಹೇಳಿದ ಪ್ರಕಾರ ಅಂದು ರಾತ್ರಿ ಮೂರು ಗಂಟೆಯ ಸುಮಾರಿಗೆ ನಾನು ಆಟೋ ಓಡಿಸಿಕೊಂಡು ಹೋಗುತ್ತಿದ್ದೆ. ಒಬ್ಬ ಮಹಿಳೆ ಆಟೋ ಬಾಡಿಗೆ ಪಡೆಯಲು ಪರದಾಡುತ್ತಿದ್ರು. ಆದ್ರೆ ಯಾರು ಕೂಡ ಆಟೋಗಳನ್ನು ನಿಲ್ಲಿಸಲಿಲ್ಲ. ನನಗೂ ಕೂಡ ಗೇಟ್ ಒಳಗಿಂದ ರಿಕ್ಷಾ ಎಂಬ ಕೂಗು ಕೇಳಿ ಬಂತು. ನಾನು ಯೂಟರ್ನ್​ ತೆಗೆದುಕೊಂಡು ಗೇಟ್ ಬಳಿ ಹೋದೆ. ಒಬ್ಬ ವ್ಯಕ್ತಿ ರಕ್ತಸಿಕ್ತದಿಂದ ಕೂಡಿದ್ದ ಬಟ್ಟೆಯನ್ನು ಹೊದ್ದುಕೊಂಡು ಆಚೆ ಬಂದರು. ಅವರ ಜೊತೆ ಮೂರು ನಾಲ್ಕು ಜನರು ಇದ್ದರು. ಅವರೆಲ್ಲರೂ ಸೇರಿ ವ್ಯಕ್ತಿಯನ್ನು ಆಟೋದಲ್ಲಿ ಕೂರಿಸಿ ಲೀಲಾವತಿ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ನಾನು ಅವರನ್ನು ಲೀಲಾವತಿ ಆಸ್ಪತ್ರೆಗೆ ಡ್ರಾಪ್ ಮಾಡಿದೆ. ಅದಾದ ನಂತರವೇ ಅವರು ನನಗೆ ಅವರು ಸೈಫ್ ಅಲಿ ಖಾನ್ ಎಂದು ಗೊತ್ತಾಗಿದ್ದು ಎಂದು ಭಜನ್ ಸಿಂಗ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment