ರಕ್ತದ ಮಡುವಿನಲ್ಲೇ 7 ವರ್ಷದ ಮಗನೊಂದಿಗೆ ಆಸ್ಪತ್ರೆಗೆ ಬಂದಿದ್ದ ಸೈಫ್​ ಅಲಿ ಖಾನ್​​; ಫೋಟೋ ರಿಲೀಸ್​

author-image
Ganesh Nachikethu
Updated On
1 ಗಂಟೆ ಅಪಾರ್ಟ್ಮೆಂಟ್​ನಲ್ಲಿದ್ದ.. ಸೈಫ್​​ಗೆ ಚೂರಿ ಚುಚ್ಚಿದವನ ಜಾಡು ಹಿಡಿದ ಪೊಲೀಸರಿಗೆ ಏನೆಲ್ಲ ಗೊತ್ತಾಯ್ತು..?
Advertisment
  • ಜನವರಿ 16ನೇ ತಾರೀಕು ರಾತ್ರಿ ಸೈಫ್ ಅಲಿ ಖಾನ್ ಮೇಲೆ ದಾಳಿ
  • ಸೈಫ್​ಗೆ ಬರೋಬ್ಬರಿ 6 ಬಾರಿ ಚಾಕುವಿನಿಂದ ಇರಿದಿದ್ದ ದಾಳಿಕೋರ
  • ಅಂದು ರಾತ್ರಿ ಆಸ್ಪತ್ರೆಯಲ್ಲಿ ನಡೆದಿದ್ದೇನು? ಎಂದು ಬಿಚ್ಚಿಟ್ಟ ವೈದ್ಯರು

ಮುಂಬೈ: ಕಳೆದ ಎರಡು ದಿನಗಳ ಜನವರಿ 16ನೇ ತಾರೀಕು ರಾತ್ರಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಂತಕನೋರ್ವ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ನಟ ಸೈಫ್​ ಅಲಿ ಖಾನ್​​ಗೆ ಗಂಭೀರ ಗಾಯಗಳಾಗಿವೆ. ಬಳಿಕ ಸೈಫ್​ ಅಲಿಖಾನ್​​ ತನ್ನ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಆಸ್ಪತ್ರೆಗೆ ಹೋಗಿದ್ದರು ಎಂದು ವರದಿ ಆಗಿದೆ. ಅಂದು ರಾತ್ರಿ ಸೈಫ್ ಯಾರ ಜೊತೆ ಆಸ್ಪತ್ರೆಗೆ ಬಂದಿದ್ದರು ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಅಲ್ಲದೇ ಸೈಫ್​ಗೆ ಚಾಕುವಿನಿಂದ ಇರಿದಿದ್ದ ಭಾಗವನ್ನು ತೋರಿಸಿದ್ದಾರೆ.

ವೈದ್ಯರು ಏನಂದ್ರು?

ಈ ಬಗ್ಗೆ ಮಾತಾಡಿದ ವೈದ್ಯರು, ಸೈಫ್ ಆಸ್ಪತ್ರೆಗೆ ಬಂದಾಗ ನಾನೇ ಮೊದಲು ಭೇಟಿ ಆಗಿದ್ದು. ಆಗ ಅವರು ರಕ್ತದ ಮಡುವಿನಲ್ಲಿದ್ದರು. ತಮ್ಮ 7 ವರ್ಷದ ಮಗ ತೈಮೂರ್ ಜೊತೆ ಸಿಂಹದಂತೆ ನಡೆದು ಬಂದರು. ಸೈಫ್ ನಿಜವಾದ ಹೀರೋ ಎಂದರು.

publive-image

ಸಿನಿಮಾಗಳಲ್ಲಿನ ಯಾರು ಬೇಕಾದ್ರೂ ಹೀರೋ ಆಗಬಹುದು. ನಿಮ್ಮ ಮನೆ ಮೇಲೆ ದಾಳಿ ನಡೆದಾಗ ಧೈರ್ಯದಿಂದ ಎದುರಿಸುವುದು ಅಷ್ಟು ಸುಲಭವಲ್ಲ. ಎಲ್ಲವನ್ನು ಎದುರಿಸಿ ಹೀಗೆ ಆಸ್ಪತ್ರೆಗೆ ಬರುವುದಕ್ಕೆ ಗುಂಡಿಗೆ ಬೇಕು. ಅಂಥವರನ್ನು ನಿಜ ಜೀವನದ ಹೀರೋ ಎಂದು ಕರೆಯಬೇಕು ಎಂದರು.

6 ಬಾರಿ ಚಾಕುವಿನಿಂದ ಇರಿದಿದ್ದ ದಾಳಿಕೋರ

ಸೈಫ್ ಮೇಲೆ ದಾಳಿಕೋರ 6 ಬಾರಿ ಚಾಕುವಿನಿಂದ ಇರಿದಿದ್ದ. ಇವರು ಆಸ್ಪತ್ರೆಗೆ ಬಂದಾಗ ದೇಹದಲ್ಲಿ ಚಾಕು ಚುಚ್ಚಿತ್ತು. ಆಪರೇಷನ್​ ಮಾಡಿ ವೈದ್ಯರು ಸೈಫ್ ದೇಹದಿಂದ ಚಾಕು ಹೊರ ತೆಗೆದರು. ಈ ಫೋಟೋವನ್ನು ಈಗ ರಿಲೀಸ್​ ಮಾಡಿದ್ದಾರೆ.

ಇದನ್ನೂ ಓದಿ:ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿದ ಆಗಂತುಕ ಮೊದಲು ಮಾಡಿದ್ದೇನು? ಇಂಚಿಂಚು ಮಾಹಿತಿ ಬಹಿರಂಗ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment