ಅಂದು ರಾತ್ರಿ ನಿಜಕ್ಕೂ ಆಗಿದ್ದೇನು? ಪೊಲೀಸರ ಮುಂದೆ ಅಸಲಿ ವಿಚಾರ ಹೇಳಿದ ಸೈಫ್..!

author-image
Ganesh
Updated On
ಅಂದು ರಾತ್ರಿ ನಿಜಕ್ಕೂ ಆಗಿದ್ದೇನು? ಪೊಲೀಸರ ಮುಂದೆ ಅಸಲಿ ವಿಚಾರ ಹೇಳಿದ ಸೈಫ್..!
Advertisment
  • ಜನವರಿ 16 ರಂದು ಸೈಫ್ ಅಲಿ ಖಾನ್​ಗೆ ಚೂರಿ ಇರಿತ
  • ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೈಫ್ ಡಿಸ್ಚಾರ್ಜ್
  • ನಿನ್ನೆ ಸಂಜೆ ಬಾಂದ್ರಾ ಪೊಲೀಸರ ವಿಚಾರಣೆಗೆ ಹಾಜರ್

ಜನವರಿ 16 ರಾತ್ರಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಸೈಫ್ ಚೇತರಿಸಿಕೊಂಡು ಮನೆಗೆ ವಾಪಸ್ ಆಗಿದ್ದಾರೆ. ಅಲ್ಲದೇ, ಪ್ರಕರಣದ ತನಿಖೆಯ ಭಾಗವಾಗಿ ನಿನ್ನೆ ಬಾಂದ್ರಾ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಘಟನೆಯ ದಿನ ಏನೆಲ್ಲ ಆಯ್ತು ಅನ್ನೋದ್ರ ಬಗ್ಗೆ ಸೈಫ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸೈಫ್ ಜೀವ ಉಳಿಸಿದ ಆಟೋ ಡ್ರೈವರ್​​ಗೆ ಭರ್ಜರಿ ಬಹುಮಾನ.. ಸಿಕ್ಕ ಹಣ ಎಷ್ಟು..?

publive-image

ಸೈಫ್ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ.. ನಾನು ವಾಸವಾಗಿರುವ ನಿವಾಸವು 11ನೇ ಮಹಡಿಯಲ್ಲಿದೆ. ಬೆಡ್​ರೂಮ್​ನಲ್ಲಿ ನಾನು ಮತ್ತು ಪತ್ನಿ ಕರೀನಾ ಕಪೂರ್​ ಇದ್ದೆವು. ಅದೇ ಅವಧಿಯಲ್ಲಿ ನನ್ನ ಕಿರಿಯ ಮಗ ಜೆಹಂಗಿರ್​ನನ್ನು ನೋಡಿಕೊಳ್ಳುತ್ತಿದ್ದ ದಾದಿ ಇಳಿಯಮ್ಮ ಫಿಲಿಫ್ ಜೋರಾಗಿ ಕಿರುಚಿಕೊಂಡ ಧ್ವನಿ ಕೇಳಿಸಿದೆ. ನಾನು ಮಗನ ರೂಮಿಗೆ ಹೋದೆ. ಅಲ್ಲಿದ್ದ ಅವರು, ಯಾರೂ ಅಪರಿಚಿತ ವ್ಯಕ್ತಿ ಎಂಟ್ರಿ ನೀಡಿರೋದನ್ನು ಕಂಡು ಕಿರುಚಾಡುತ್ತಿದ್ದರು.

ನನ್ನ ಮಗ ಜೋರಾಗಿ ಅಳುತ್ತಿದ್ದ. ಮನೆಗೆ ನುಗ್ಗಿದ ವ್ಯಕ್ತಿಯನ್ನು ತಡೆಯಲು ಮುಂದಾದೆ. ಆಗ ಗಲಾಟೆಯಾಗಿದೆ. ಆಗ ಆತ ನನ್ನ ಬೆನ್ನು, ಕುತ್ತಿಗೆ, ಕೈ ಸೇರಿ ಹಲವು ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ನಾನು ನಿತ್ರಾಣಗೊಂಡೆ. ಹಾಗಿದ್ದೂ, ಮನೆಯೊಳಗೆ ನುಗ್ಗಿದ ವ್ಯಕ್ತಿಯನ್ನು ನಾನು ತಳ್ಳಿದೆ. ಕೊನೆಗೆ ಮನೆಯ ಸಿಬ್ಬಂದಿ ಮಗನ ಜೊತೆ ಹೋದರು ಎಂದು ತಿಳಿಸಿದ್ದಾರೆ. ಮನೆಯ ಕೆಲಸದವಳಿಗೂ ಗಾಯವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ತಲುಪಿಸಿದ ಆಟೋ ಡ್ರೈವರ್​ನನ್ನು ಭೇಟಿ ಮಾಡಿದ ಸೈಫ್ ಅಲಿಖಾನ್: ಆ ರಾತ್ರಿ ನಡೆದಿದ್ದೇನು?

ರಾತ್ರಿ ವೇಳೆ ಚಾಕು ಇರಿತಕ್ಕೆ ಒಳಗಾಗಿದ್ದ ಸೈಫ್ ಅಲಿ ಖಾನ್​ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿ ನಿವಾಸಕ್ಕೆ ವಾಪಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment