ಸೈಫ್ ಅಲಿ ಖಾನ್​ಗೆ ಚೂರಿ ಇರಿತ.. ಆರೋಪಿ ಬಗ್ಗೆ ಪೊಲೀಸರಿಂದ ಬಿಗ್​ ಅಪ್​​ಡೇಟ್ಸ್

author-image
Ganesh
Updated On
ಸೈಫ್ ಅಲಿ ಖಾನ್ ಕುತ್ತಿಗೆ ಚಾಕು ಇರಿದ ಕಳ್ಳ.. 10 ಸೆಂಟಿ ಮೀಟರ್ ಗಾಯ..
Advertisment
  • ನಿನ್ನೆ ರಾತ್ರಿ ಸೈಫ್ ಅಲಿ ಖಾನ್​ಗೆ ಚಾಕು ಇರಿತ
  • ಮನೆಗೆ ನುಗ್ಗಿ ಚಾಕು ಹಾಕಿರುವ ಅಪರಿಚಿತ ವ್ಯಕ್ತಿ
  • ತನಿಖೆ ಆರಂಭವಾಗಿದೆ, ಆರೋಪಿ ಪತ್ತೆಗೆ ಪ್ರಯತ್ನ

ಸೈಫ್ ಅಲಿ ಖಾನ್ ಮೇಲಿನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಿಗ್​ ಅಪ್​ಡೇಟ್ಸ್​ ನೀಡಿದ್ದಾರೆ. ಚೂರಿ ಚುಚ್ಚಿರುವ ಆರೋಪಿಯನ್ನು ಗುರುತಿಸಲಾಗಿದೆ. ಚಾಕು ಹಾಕಿದ ಬಳಿಕ ಮೆಟ್ಟಿಲುಗಳ ಮೇಲೆ ಓಡಿ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಘಟನೆಯು ಸೈಫ್ ಅಲಿ ಖಾನ್ ಅವರ ಮಕ್ಕಳಿರುವ ಕೋಣೆಯಲ್ಲಿ ಚಾಕು ಹಾಕಲಾಗಿದೆ. ಸೈಫ್ ಅವರ ಮನೆಯ ಸಹಾಯಕರು, ಅಪರಿಚಿತರು ಮನೆಗೆ ನುಗ್ಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಗೆ ನುಗ್ಗಿ ಸೈಫ್ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:ಸೈಫ್ ಅಲಿ ಖಾನ್ ಆಟೋದಲ್ಲಿ ಆಸ್ಪತ್ರೆಗೆ ಬಂದ್ರಾ? ಕಾರು ಯಾಕೆ ಬಳಸಲಿಲ್ಲ? ಬಹು ದೊಡ್ಡ ಅನುಮಾನ! VIDEO

publive-image

ಬಾಂದ್ರಾದಲ್ಲಿ ಸೈಫ್ ಅಲಿ ಖಾನ್ ತಮ್ಮ ಕುಟುಂಬದೊಂದಿಗೆ ವಾಸವಿದ್ದಾರೆ. ಅವರು ಇರುವ ಅಪಾರ್ಟ್​​ಮೆಂಟ್ ಕಟ್ಟಡದ 7ನೇ ಮಹಡಿಯಲ್ಲಿದೆ. ಇದೀಗ ದಾಳಿಕೋರ ಸೈಫ್ ನಿವಾಸಕ್ಕೆ ಹೇಗೆ ನುಗ್ಗಿದ ಎಂಬ ಪ್ರಶ್ನೆ ಕಾಡಿದೆ.

ಆಗಿದ್ದೇನು..?

ಅಪರಿಚಿತ ವ್ಯಕ್ಯಿ ಮನೆಗೆ ನುಗ್ಗಿದ್ದನ್ನು ನೋಡುತ್ತಿದ್ದಂತೆಯೇ ಮಹಿಳಾ ಸಿಬ್ಬಂದಿ ಕೂರಲು ಶುರುಮಾಡಿದ್ದಾಳೆ. ಇದು ಸೈಫ್ ಅಲಿ ಖಾನ್​ಗೆ ಕೇಳಿದೆ. ಸೈಫ್ ಓಡೋಡಿ ಅಲ್ಲಿಗೆ ಬಂದಿದ್ದಾರೆ. ನಂತರ ಮಾತಿನ ಚಕಮಕಿ ನಡೆದಿದೆ. ಅಪರಿಚಿತ ಮಹಿಳೆಗೂ ಚಾಕು ಇರಿದು ಗಾಯಗೊಳಿಸಿ, ಪರಾರಿ ಆಗಿದ್ದಾನೆ. ಆದರೆ ಸೈಫ್ ಅಲಿ ನಿವಾಸಕ್ಕೆ ಎಂಟ್ರಿ ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗದಿರೋದು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮುಂಬೈ to ಅಲಿಭಾಗ್​ಗೆ ಕೊಹ್ಲಿ ನಿತ್ಯ ಪ್ರಯಾಣ.. ನೆರವೇರುತ್ತಿದೆ ವಿರುಷ್ಕಾ ಜೋಡಿಯ ಕನಸು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment