Advertisment

ಸಾವಿರಾರು ಕೋಟಿಯಿದ್ರೂ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ದ ಸೈಫ್​ ಅಲಿ ಖಾನ್​​; ಇವರ ಆಸ್ಪತ್ರೆ ಬಿಲ್​ ಎಷ್ಟು?

author-image
Gopal Kulkarni
Updated On
ಸಾವಿರಾರು ಕೋಟಿಯಿದ್ರೂ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ದ ಸೈಫ್​ ಅಲಿ ಖಾನ್​​; ಇವರ ಆಸ್ಪತ್ರೆ ಬಿಲ್​ ಎಷ್ಟು?
Advertisment
  • ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಅಲಿ ಖಾನ್​
  • ಹೆಲ್ತ್​ ಇನ್ಸೂರೆನ್ಸ್​ನಿಂದ ಒಟ್ಟು 25 ಲಕ್ಷ ರೂಪಾಯಿ ಹಣ ಅಪ್ರೂವಲ್
  • ಉಳಿದ ಹಣವನ್ನು ಸಂಪೂರ್ಣ ಚಿಕಿತ್ಸೆ ಬಳಿಕ ನೀಡುವುದಾಗಿ ಹೇಳಿಕೆ

ಬಾಲಿವುಡ್ ನಟ ಸೈಫ್ ಅಲಿಖಾನ್ ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರದೇ ಮನೆಯಲ್ಲಿ ಅವರ ಮೇಲಾದ ಚಾಕು ದಾಳಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಸೈಫ್​ ಸದ್ಯ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಇವರು ತಮ್ಮ ಆರೋಗ್ಯ ವಿಮೆ ಅಂದ್ರೆ ಹೆಲ್ತ್​ ಇನ್ಸೂರೆನ್ಸ್​ಗಾಗಿ ಒಟ್ಟು 35.95 ಲಕ್ಷ ರೂಪಾಯಿ ಕ್ಲೇಮ್ ಮಾಡಲು ಮನವಿ ಮಾಡಿದ್ದರು. ಈಗಾಗಲೇ ನಿವಾಬುಪಾ ಕಂಪನಿಯ ಹೆಲ್ತ್ ಇನ್ಸೂರೆನ್ಸ್​ 25 ಲಕ್ಷ ರೂಪಾಯಿಗೆ ಅಪ್ರೂವಲ್ ಕೊಟ್ಟಿದೆ. ಇನ್ನುಳಿದ ಹಣವನ್ನು ಚಿಕಿತ್ಸೆ ಸಂಪೂರ್ಣಗೊಂಡು ಕೊನೆಯ ಬಿಲ್ ಬಂದ ಮೇಲೆ ಕೊಡುವುದಾಗಿ ಹೇಳಿದೆ.

Advertisment

ಸದ್ಯ ಸೈಫ್ ಅಲಿಖಾನ್​ ಹೆಲ್ತ್​ ಇನ್ಸೂರೆನ್ಸ್​ ಕ್ಲೇಮ್ ಮಾಡಿಕೊಂಡ ದಾಖಲೆಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಹರಿದಾಡುತತಿವೆ. ಚಿಕಿತ್ಸೆಯ ಒಟ್ಟು ಮೊತ್ತ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯ ದಿನಾಂಕ ಹೀಗೆ ಎಲ್ಲವೂ ವೈರಲ್ ಆಗಿದೆ. ಲೀಲಾವತಿ ಆಸ್ಪತ್ರೆಯ ಪ್ರಕಾರ ನಟ ಸೈಫ್ ಅಲಿಖಾನ್ ಜನವರಿ 21 ರಂದು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗುವ ನಿರೀಕ್ಷೆಯಿದೆ ಎಂದು ಹೇಳಿದೆ.

ಇದನ್ನೂ ಓದಿ:ಸೈಫ್​ ​ಬೆನ್ನುಹುರಿಗೆ ಆಳವಾದ ಗಾಯ.. ಈ ಬೆನ್ನುಮೂಳೆ ಗಾಯ ಎಷ್ಟು ಅಪಾಯಕಾರಿ..?

ಆದ್ರೆ ಮೂಲಗಳ ಪ್ರಕಾರ ಸೈಫ್ ಅಲಿಖಾನ್ ಜನವರಿ 20ರಂದೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಸೈಫ್ ಕುಟುಂಬದವರು ಲೀಲಾವತಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಸೈಫ್​ಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ಮಾಹಿತಿಯನ್ನು ಆಚೆ ನೀಡದಂತೆ ಮನವಿ ಮಾಡಿಕೊಂಡಿದ ಎಂದು ಕೂಡ ತಿಳಿದು ಬಂದಿದೆ.

Advertisment


">January 18, 2025

ಇನ್ನು ಆರೋಗ್ಯ ವಿಮೆ ಸಂಸ್ಥೆ ನಿವಾಬುಪಾ ಹೇಳಿಕೊಂಡಿರುವ ಪ್ರಕಾರ. ಇತ್ತೀಚೆಗೆ ನಟ ಸೈಫ್​ ಅಲಿಖಾನ್​ ಬದುಕಲ್ಲಿ ನಡೆದಿದ್ದು ನಿಜಕ್ಕೂ ದುರುದೃಷ್ಟಕರ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಕ್ಯಾಶಲೆಸ್​ ಪೂರ್ವ ದೃಢಿಕರಣದ ಮನವಿಯನ್ನು ಮಾಡಲಾಗಿತ್ತು. ಈಗಾಗಲೇ ನಾವು ಚಿಕಿತ್ಸೆಗೆ ಬೇಕಾದ ಆರಂಭಿಕ ಹಣವನ್ನು ಬಿಡುಗಡೆ ಮಾಡಿದ್ದೇವೆ. ಒಂದು ಬಾರಿ ಅಂತಿಮ ಬಿಲ್ ಬಂದು ಚಿಕಿತ್ಸೆ ಸಂಪೂರ್ಣಗೊಂಡ ಬಳಿಕ ಪಾಲಿಸಿಯ ನಿಯಮದ ಪ್ರಕಾರ ಸಂಪೂರ್ಣ ಹಣವನ್ನು ಸೆಟ್ಲ್​ ಮಾಡಲಾಗುವುದು ಎಂದು ಹೇಳಿದೆ.

ಸದ್ಯ ಸೈಫ್ ಅಲಿ ಖಾನ್​ ಹೆಲ್ತ್​ ಇನ್ಸೂರೆನ್ಸ್ ಮಾಡಿಸಿಕೊಂಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಈಡಾಗುತ್ತಿದೆ. ಹೆಲ್ತ್ ಇನ್ಸೂರೆನ್ಸ್ ಬದುಕಿಗೆ ಎಷ್ಟು ಮುಖ್ಯ ಎಂಬುದು ಇಂತಹ ಪ್ರಸಂಗಗಳಲ್ಲಿ ಗೊತ್ತಾಗುತ್ತದೆ. ದಯವಿಟ್ಟು ಎಲ್ಲರೂ ಹೆಲ್ತ್​ ಇನ್ಸೂರೆನ್ಸ್ ಮಾಡಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment