ಸೈನಾ ನೆಹ್ವಾಲ್ ಬಾಳಲ್ಲಿ ಬಿರುಗಾಳಿ.. 7 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ

author-image
Ganesh
Updated On
ಒಟ್ಟಿಗೆ ಬೆಳೆದ ಸ್ಟಾರ್ ಜೋಡಿ ಇದು! ಸೈನಾ - ಕಶ್ಯಪ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ..?
Advertisment
  • ಪರುಪಳ್ಳಿ ಕಶ್ಯಪ್-ಸೈನಾ ನೆಹ್ವಾಲ್ ದೂರಾದೂರ
  • 2018 ರಲ್ಲಿ ಪ್ರೀತಿಸಿ ಮದುವೆ ಆಗಿತ್ತು ಸ್ಟಾರ್ ಜೋಡಿ
  • ಸುಮಾರು ದಶಕಗಳ ಕಾಲ ಡೇಟಿಂಗ್ ಮಾಡಿದ್ದ ಜೋಡಿ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ (Badminton star Saina Nehwal) ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ಘೋಷಣೆ ಮಾಡಿದ್ದಾರೆ. ಅವರು ತಮ್ಮ ಪತಿ ಪರುಪಳ್ಳಿ ಕಶ್ಯಪ್ (Parupalli Kashyap) ಅವರಿಂದ ದೂರ ಆಗುತ್ತಿರುವ ಬಗ್ಗೆ ತಿಳಿಸಿದ್ದಾರೆ.

ಏನ್ ಹೇಳಿದ್ರು ನೆಹ್ವಾಲ್..?

ನೆಹ್ವಾಲ್ ಇನ್​ಸ್ಟಾಗ್ರಾಮ್​​ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಕಶ್ಯಪ್ ಜೊತೆಗಿನ 7 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ‘ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು, ನಮ್ಮಿಬ್ಬರಿಗಾಗಿ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞನಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ನೆಹ್ವಾಲ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕರುಣ್ ನಾಯರ್​ಗೆ ಇದು ಒಳ್ಳೆ ಸರಣಿ.. ಕನ್ನಡಿಗನ ಬೆನ್ನಿಗೆ ನಿಂತ ಲೆಜೆಂಡರಿ ಕ್ರಿಕೆಟರ್ ಅನಿಲ್​ ಕುಂಬ್ಳೆ, ಏನಂದ್ರು?

publive-image

ಒಟ್ಟಿಗೆ ಬೆಳೆದವರು..

ಸೈನಾ ಮತ್ತು ಕಶ್ಯಪ್ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ( Pullela Gopichand academy) ಒಟ್ಟಿಗೆ ಬೆಳೆದರು. ಸೈನಾ ಒಲಿಂಪಿಕ್​ನಲ್ಲಿ ಕಂಚು ಮತ್ತು ವಿಶ್ವದ ನಂ. 1 ಶ್ರೇಯಾಂಕದೊಂದಿಗೆ ಜಾಗತಿಕ ತಾರೆಯಾಗಿದ್ದಾರೆ. ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಹೆಸರು ಮಾಡಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಡೇಟಿಂಗ್ ಮಾಡಿ 2018 ರಲ್ಲಿ ವಿವಾಹವಾಗಿತ್ತು ಜೋಡಿ.

ಇದನ್ನೂ ಓದಿ: ಸುಂದರ್​, ಬುಮ್ರಾ, ಸಿರಾಜ್ ಅಬ್ಬರಕ್ಕೆ ಇಂಗ್ಲೆಂಡ್​​ ಬ್ಯಾಟರ್​ಗಳ ಪೆವಿಲಿಯನ್ ಪರೇಡ್.. 193 ಟಾರ್ಗೆಟ್​!

ಬ್ಯಾಡ್ಮಿಂಟನ್‌ನಿಂದ ನಿವೃತ್ತರಾದ ನಂತರ ಕಶ್ಯಪ್ ಕೋಚಿಂಗ್‌ಗೆ ತಿರುಗಿದರು. ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಸೈನಾಗೆ ತರಬೇತಿ ನೀಡಿದರು. 2019ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಕಶ್ಯಪ್ ಕೋಚ್ ಆಗಿದ್ದರು. 2016ರ ನಂತರ ಸೈನಾ ಎದುರಿಸಿದ ಗಾಯಗಳಿಂದ ಚೇತರಿಸಿಕೊಳ್ಳಲು ಕಶ್ಯಪ್ ಸಹಾಯ ಮಾಡಿದ್ದರು. ಕಶ್ಯಪ್ ಮೈದಾನದಲ್ಲಿ ಮತ್ತು ಪಂದ್ಯಾವಳಿಗಳಲ್ಲಿ ನೆಹ್ವಾಲ್​ಗೆ ಗೇಮ್ ಸ್ಟ್ಯಾಟರ್ಜಿಗಳನ್ನು ನೀಡುತ್ತಿದ್ದರು. ನೆಹ್ವಾಲ್ ಕೊನೆಯ ಬಾರಿಗೆ ಜೂನ್ 2023 ರಲ್ಲಿ ವೃತ್ತಿಪರ ಸರ್ಕ್ಯೂಟ್‌ನಲ್ಲಿ ಆಡಿದ್ದಾರೆ. ನೆಹ್ವಾಲ್ ಇನ್ನೂ ಬ್ಯಾಡ್ಮಿಂಟನ್​​ಗೆ ನಿವೃತ್ತಿ ಘೋಷಿಸಿಲ್ಲ.

ಇದನ್ನೂ ಓದಿ: ಟೆಸ್ಟ್​​ನಲ್ಲಿ ಒಂದೇ ಚೆಂಡಿನಿಂದ 80 ಓವರ್​ ಮಾಡಬೇಕಾ..? ಡ್ಯೂಕ್ ಬಾಲ್ ಬಗ್ಗೆ ಗಿಲ್, ಸ್ಟೋಕ್ಸ್ ಅಸಮಾಧಾನ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment