ಒಟ್ಟಿಗೆ ಬೆಳೆದ ಸ್ಟಾರ್ ಜೋಡಿ ಇದು! ಸೈನಾ - ಕಶ್ಯಪ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ..?

author-image
Ganesh
Updated On
ಒಟ್ಟಿಗೆ ಬೆಳೆದ ಸ್ಟಾರ್ ಜೋಡಿ ಇದು! ಸೈನಾ - ಕಶ್ಯಪ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ..?
Advertisment
  • 7 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹೇಳಿದ ಸೈನಾ ನೆಹ್ವಾಲ್
  • ಇನ್​ಸ್ಟಾಗ್ರಾಮ್​​ನಲ್ಲಿ ಬ್ರೇಕಿಂಗ್ ನ್ಯೂಸ್ ಹೇಳಿದ ಸ್ಟಾರ್
  • ಭಾರತೀಯ ಬ್ಯಾಡ್ಮಿಂಟನ್​ಗೆ ಇಬ್ಬರ ಕೊಡುಗೆ ಅಪಾರ ​

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ (Badminton star Saina Nehwal) ಅವರು ತಮ್ಮ ದೀರ್ಘಕಾಲದ ಸಂಗಾತಿ ಪುರುಪಳ್ಳಿ ಕಶ್ಯಪ್ (Parupalli Kashyap) ಅವರಿಂದ ಬೇರ್ಪಡುತ್ತಿರೋದಾಗಿ ಘೋಷಿಸಿದ್ದಾರೆ. ಇನ್​​ಸ್ಟಾಗ್ರಾಮ್​​ನಲ್ಲಿ ಸೈನಾ ನೆಹ್ವಾಲ್ ತಮ್ಮ ನಿರ್ಧಾರ ಪ್ರಕಟಿಸಿದ್ದು, ಅಭಿಮಾನಿಗಳು ಸಹಜವಾಗಿಯೇ ಏನಾಯ್ತು ಅಂತಾ ಆಘಾತಕ್ಕೆ ಒಳಗಾಗಿದ್ದಾರೆ.

ನೆಹ್ವಾಲ್ ಹೇಳಿದ್ದೇನು..?

‘ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು, ನಮ್ಮಿಬ್ಬರಿಗಾಗಿ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞನಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ನೆಹ್ವಾಲ್ ಬರೆದುಕೊಂಡಿದ್ದಾರೆ. ಆದರೆ ಕಶ್ಯಪ್ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಸುಂದರ್​, ಬುಮ್ರಾ, ಸಿರಾಜ್ ಅಬ್ಬರಕ್ಕೆ ಇಂಗ್ಲೆಂಡ್​​ ಬ್ಯಾಟರ್​ಗಳ ಪೆವಿಲಿಯನ್ ಪರೇಡ್.. 193 ಟಾರ್ಗೆಟ್​!

publive-image

ಹೇಗಿತ್ತು ಪ್ರೇಮಕ ಕತೆ..?

ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ 7 ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆದರು. ಒಂದು ದಶಕಗಳ ಕಾಲ ಈ ಜೋಡಿ ಡೇಟಿಂಗ್ ನಡೆಸಿತ್ತು. ಇಬ್ಬರ ಪ್ರೇಮಕತೆ ಹೇಗೆ ಶುರುವಾಯಿತು ಅಂತಾ ನೋಡೋದಾದರೆ.. ಭಾರತೀಯ ಬ್ಯಾಡ್ಮಿಂಟನ್ (Indian Badminton) ಅನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಇಬ್ಬರ ಪಾತ್ರ ಪ್ರಮುಖ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ (Beijing Olympics-2008) ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ (Quarter-final) ತಲುಪುವ ಮೂಲಕ ಜನಪ್ರಿಯತೆ ಪಡೆದರು. ಆಗ ಇಡೀ ದೇಶ ಸೈನಾ ನೆಹ್ವಾಲ್ ಯಾರು ಅಂತಾ ನೋಡಿತು.

ನಾಲ್ಕು ವರ್ಷಗಳ ಬಳಿಕ ಅಂದರೆ 2012ರ ಲಂಡನ್ ಸಮ್ಮರ್ ಒಲಿಂಪಿಕ್ಸ್‌ನಲ್ಲಿ (2012 Summer Olympics) ಕಂಚಿನ ಪದಕ (Bronze medal) ಗೆದ್ದ ಮೊಟ್ಟ ಮೊದಲ ಭಾರತೀಯ ಬ್ಯಾಡ್ಮಿಂಟನ್ ತಾರೆ ಎಂಬ ಹೆಗ್ಗಳಿಕೆ ಪಾತ್ರರಾದರು. 2015ರಲ್ಲಿ ವಿಶ್ವದ ನಂ. 1 ಆಟಗಾರ್ತಿ ಆಗುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದರು. ಇದು ಭಾರತೀಯ ಬ್ಯಾಡ್ಮಿಂಟನ್​​ಗೆ ಅಭೂತಪೂರ್ವ ಸಾಧನೆಯಾಗಿದೆ.

ಇದನ್ನೂ ಓದಿ: ಕೌಸ್ತುಭ ಮಣಿ ಈಗ ತುಂಬು ಗರ್ಭಿಣಿ.. ಪತಿಯ ಜೊತೆಗಿರೋ ಸ್ಪೆಷಲ್ ಫೋಟೋಗಳು ಇಲ್ಲಿವೆ

publive-image

ಕಶ್ಯಪ್ ಕೂಡ ಭಾರತೀಯ ಬ್ಯಾಡ್ಮಿಂಟನ್​​ಗೆ ಹೊಸ ಮೈಲಿಗಲ್ಲು. 2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games-2010) ಕಂಚಿನ ಪದಕ ಗೆದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿ ವಿಶೇಷ ಸಾಧನೆ ಮಾಡಿದರು. 2014ರಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ 32 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.

Love Story..

ಇಬ್ಬರ ಪ್ರೇಮ ಕತೆಯು ಹೈದರಾಬಾದ್‌ನಲ್ಲಿ ಪ್ರಾರಂಭವಾಯಿತು. ಕೋಚ್ ಪುಲ್ಲೇಲಾ ಗೋಪಿಚಂದ್ ಅಖಾಡೆಮಿಯಲ್ಲಿ ಒಟ್ಟಿಗೆ ತರಬೇತಿ ಪಡೆದರು. ಈ ಜೋಡಿ 2004ರ ಸುಮಾರಿಗೆ ಡೇಟಿಂಗ್ ಶುರುಮಾಡಿತ್ತು. ನಂತರ ಇಬ್ಬರು ಸ್ಮರ್ಧಾತ್ಮಕ ಬ್ಯಾಡ್ಮಿಂಟ್ನ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ವಿಶೇಷವಾಗಿ ಪ್ರಯಾಣ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪರಸ್ಪರ ಬೆಂಬಲಿಸಿಕೊಂಡು ಮುಂದುವರಿಯುತ್ತಾರೆ. ಈ ಅವಧಿಯಲ್ಲಿ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಗೊಳ್ಳುತ್ತ ಹೋಗುತ್ತದೆ.

2010ರ ದಶಕವು ಇಬ್ಬರಿಗೂ ಹೊಸ ಮೈಲುಗಲ್ಲು ಮತ್ತು ಸವಾಲುಗಳು ಕಾರಣವಾಯಿತು. ಸೈನಾ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಗಳಿಸಿದರು. ಆದರೆ ಕಶ್ಯಪ್ 2015ರಲ್ಲಿ ಕಾಲಿನ ಗಾಯಕ್ಕೆ ಒಳಗಾದರು. ಇದು ಅವರ ವೃತ್ತಿಜೀವನಕ್ಕೆ ಅಡ್ಡಿ ಆಯಿತು. ಆದರೆ ಸೈನಾ ಅವರ ಭಾವನಾತ್ಮಕ ಬೆಂಬಲ ಮತ್ತು ಪ್ರೇರಣೆಯನ್ನು ಕಶ್ಯಪ್ ಪಡೆದರು. ಗಾಯದಿಂದಾಗಿ 2016ರ ರಿಯೊ ಒಲಿಂಪಿಕ್ಸ್ ಕಶ್ಯಪ್ ತಪ್ಪಿಸಿಕೊಂಡರು. ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು ಕಶ್ಯಪ್​ಗೆ ಸೈನಾ ಆಧಾರಸ್ತಂಭವಾಗಿ ನಿಂತರು.

ಇದನ್ನೂ ಓದಿ: ಸೈನಾ ನೆಹ್ವಾಲ್ ಬಾಳಲ್ಲಿ ಬಿರುಗಾಳಿ.. 7 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ

publive-image

ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಸೈನಾಗೆ ತರಬೇತಿ ನೀಡಿದರು. 2019ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೈನಾ, ಪಿವಿ ಸಿಂಧು ಅವರನ್ನು ಸೋಲಿಸಿ ಚಿನ್ನ ಗೆದ್ದರು. ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಕಶ್ಯಪ್ ಕೋಚ್ ಆಗಿದ್ದರು. ಸೈನಾ ಗೆಲುವಿಗೆ ಕಾರಣವಾಗಿದ್ದೇ ಕಶ್ಯಪ್ ಅವರ ತರಬೇತಿ ಮತ್ತು ಗೇಮ್ ಪ್ಲಾನ್. ಕಶ್ಯಪ್ ಮೈದಾನದಲ್ಲಿ ಮತ್ತು ಪಂದ್ಯಾವಳಿಗಳಲ್ಲಿ ನೆಹ್ವಾಲ್​ಗೆ ಗೇಮ್ ಸ್ಟ್ಯಾಟರ್ಜಿಗಳನ್ನು ನೀಡುತ್ತಿದ್ದರು.

ಈ ಜೋಡಿ 2018ರಲ್ಲಿ ಅಧಿಕೃತವಾಗಿ ಮದುವೆ ಮಾಡಿಕೊಂಡಿತು. 2024ರಲ್ಲಿ ಪರುಪಳ್ಳಿ ಕಶ್ಯಪ್ ಕಾಂಪಿಟೆಟೀವ್ ಬ್ಯಾಡ್ಮಿಂಟನ್​​ಗೆ ನಿವೃತ್ತಿ ಘೋಷಣೆ ಮಾಡಿದರು. ನೆಹ್ವಾಲ್ ಕೊನೆಯ ಬಾರಿಗೆ ಜೂನ್ 2023 ರಲ್ಲಿ ವೃತ್ತಿಪರ ಸರ್ಕ್ಯೂಟ್‌ನಲ್ಲಿ ಆಡಿದ್ದಾರೆ. ನೆಹ್ವಾಲ್ ಇನ್ನೂ ಬ್ಯಾಡ್ಮಿಂಟನ್​​ಗೆ ನಿವೃತ್ತಿ ಘೋಷಿಸಿಲ್ಲ.

ಇದನ್ನೂ ಓದಿ: ರಣರೋಚಕ ಘಟ್ಟ ತಲುಪಿದ ಲಾರ್ಡ್ಸ್​ ಟೆಸ್ಟ್.. ಭಾರತದ ಗೆಲುವಿಗೆ ಬೇಕು ಕೆಲವೇ ಕೆಲವು ರನ್ಸ್​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment