/newsfirstlive-kannada/media/post_attachments/wp-content/uploads/2024/12/KOHLI-6.jpg)
ಟೀಮ್​ ಇಂಡಿಯಾ ಮಾಜಿ ನಾಯಕ ಎಮ್.ಎಸ್​ ಧೋನಿ ಎಲ್ಲೇ ಹೋಗಲಿ, ಅಲ್ಲಿ ಸೆನ್ಸೇಷನ್​ ಸೃಷ್ಟಿ ಮಾಡ್ತಾರೆ. ಇಂಟರ್ ​ನೆಟ್​ನಲ್ಲಂತೂ ಧೋನಿಯ ವಿಡಿಯೋಗಳು ಧೂಳೆಬ್ಬಿಸ್ತವೆ. ಅಂತಾದ್ರಲ್ಲಿ ಈಗ ಧೋನಿ ಡಾನ್ಸ್​ ಮಾಡಿದ್ದಾರೆ. ಪರಿಣಾಮ ಸೋಷಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎದ್ದಿದೆ.
ಟೀಮ್​ ಇಂಡಿಯಾ ಮಾಜಿ ನಾಯಕ ಎಮ್​.ಎಸ್​ ಧೋನಿ ಏನೇ ಮಾಡಿದ್ರೂ ಅದು ಸೆನ್ಸೇಷನ್​. ಇಂಟರ್​​ ನ್ಯಾಷನಲ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿ ಐಪಿಎಲ್​​ಗೆ ಮಾತ್ರ ಸೀಮಿತವಾಗಿರೋ ಧೋನಿ ಆನ್​ಫೀಲ್ಡ್​ನಲ್ಲಿ ಕಾಣಿಸಿಕೊಳ್ತಿರೋದು ಕೇವಲ 3 ತಿಂಗಳು ಮಾತ್ರ. ಹಾಗಂತ ಧೋನಿ ಕ್ರೇಜ್​ ಕಡಿಮೆಯಾಗಿದೆಯಾ, ಇಲ್ಲ, ಕಿಂಚಿತ್ತೂ ಕೂಡ ಕುಂದಿಲ್ಲ. ಧೋನಿ ಆನ್​ಫೀಲ್ಡ್​ನಲ್ಲಿ ಕಾಣಿಸಿಕೊಳ್ಳದಿದ್ದರೂ ಆಫ್​ ಫೀಲ್ಡ್​ ಆ್ಯಕ್ಟಿವಿಟಿಗಳೇ ಸಖತ್​ ಸೌಂಡ್​ ಮಾಡ್ತವೆ. ಇಂಟರ್​​ನೆಟ್​​ನಲ್ಲಿ ಧೂಳೆಬ್ಬಿಸ್ತಿವೆ. ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿಸ್ತವೆ.
ವಿವಾಹ ಸಮಾರಂಭದಲ್ಲಿ ಧೋನಿ ಶೈನಿಂಗ್​.! ಪಹಾಡಿ ಡಾನ್ಸ್​ ಮಾಡಿದ ಧೋನಿ ದಂಪತಿ.!
ರಾಂಚಿ ಱಂಬೋ ಧೋನಿ ಸಂಬಂದಿಕರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಹೃಷಿಕೇಶದಲ್ಲಿ ನಡೀತಿರೋ ಈ ಸಮಾರಂಭದಲ್ಲಿ ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಇಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹೃಷಿಕೇಶದಲ್ಲಿ ಮಾಹಿ ಮಾಡಿರೋ ಡಾನ್ಸ್​ ಸದ್ಯ ವಿಶ್ವಾದ್ಯಂತ ಟ್ರೆಂಡಿಂಗ್​ನಲ್ಲಿದೆ.
MS dhoni with traditional pahadi dance
He's from uttrakhand so he's also a pahadi ❤️INDIA is a better place to enjoy your Life
There are a lot of players who feel insured & unsafe in INDThat's Why I admire him the most
Respect for mahi bhai ❤️#MSDhoni#Dhoni#IPL2025pic.twitter.com/wmmy6iUNvo— @patelforever (पाटीदार 🚩) (@Patidarforever) December 4, 2024
ಧೋನಿ ಮಾಡಿರೋ ಈ ಡಾನ್ಸ್​ನ ಹೆಸರು ಪಹಾಡಿ ಅಂತಾ. ಉತ್ತರಾಖಾಂಡ ಹಾಗೂ ಹಿಮಾಚಲ ಪ್ರದೇಶದ ಜಾನಪದ ನೃತ್ಯ.! ಈ ನೃತ್ಯವನ್ನ ಧೋನಿ ಪತ್ನಿ ಸಾಕ್ಷಿ ಹಾಗೂ ಆಪ್ತ ಗೆಳೆಯರೊಂದಿಗೆ ಮಾಡಿದ್ದಾರೆ. ಧೋನಿ ಡಾನ್ಸ್​ ಸ್ಕಿಲ್​ಗೆ ಫ್ಯಾನ್ಸ್​ ಫಿದಾ ಆಗಿದ್ದು, ಇದ್ರ ವಿಡಿಯೋ ಇಂಟರ್​​ನೆಟ್​​ನಲ್ಲಿ ಧೂಳೆಬ್ಬಿಸಿದೆ.
ಧೋನಿ ಹೀಗೆ ಡಾನ್ಸ್​ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿಸಿರೋದು ಇದೇ ಮೊದಲೇನಲ್ಲ. ಮಾರ್ಚ್​​ನಲ್ಲಿ ನಡೆದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮುದ್ದಿನ ಪುತ್ರ ಅನಂತ್​​​ ಅಂಬಾನಿಯ ಪ್ರೀ ವೆಡ್ಡಿಂಗ್​ ಇವೆಂಟ್​ ದೇಶದಲ್ಲೇ ಸಂಚಲನ ಮೂಡಿಸಿತ್ತು. ಆದ್ರೆ, ಈ ವಿವಾಹದಲ್ಲಿ ಎಲ್ಲಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​​ ಎಂಎಸ್ ಧೋನಿಯ ಡಾನ್ಸ್​.!
/newsfirstlive-kannada/media/post_attachments/wp-content/uploads/2024/12/DHONI-DANCE-2.jpg)
ಅದ್ಧೂರಿ ಇವೆಂಟ್​ನಲ್ಲಿ ಧೋನಿ ದಾಂಡಿಯಾ ಡಾನ್ಸ್​​​​..!
ಜಾಮ್​​ನಗರದಲ್ಲಿ ಧೂಮ್​​ ಧಾಮ್ ಆಗಿ ನಡೆದ ಅಂಬಾನಿ ಪುತ್ರನ​​​​​ ಪ್ರೀ ವೆಡ್ಡಿಂಗ್ ಇವೆಂಟ್​ನಲ್ಲಿ ಮಿಸ್ಟರ್​ ಕೂಲ್ ಧೋನಿ ದಾಂಡಿಯಾ ಡ್ಯಾನ್ಸ್​​ ಮಾಡಿದ್ದರು. ಕೈಯಲ್ಲಿ ಕೋಲು ಹಿಡಿದು ಮಾಹಿ ಸಖತ್​ ಸ್ಟೆಪ್​​ ಹಾಕಿದ್ರು. ಧೋನಿಗೆ ಪತ್ನಿ ಸಾಕ್ಷಿ ಹಾಗೂ ಮಾಜಿ ಕ್ರಿಕೆಟಿಗ ಡ್ವೇನ್​ ಬ್ರಾವೋ ಸಾಥ್​ ನೀಡಿದ್ದರು.
ಇಷ್ಟೇ ಅಲ್ಲ, ಮುಖೇಶ್ ಅಂಬಾನಿ ಹಾಗೂ ಆಕಾಶ್​ ಅಂಬಾನಿ ಜೊತೆಗೂ ತಲಾ ಧೋನಿ ಕಾಲು ಕುಣಿಸಿದ್ರು.
/newsfirstlive-kannada/media/post_attachments/wp-content/uploads/2024/12/DHONI-DANCE-1.jpg)
ಹಾರ್ದಿಕ್​​​-ಕಿಶನ್​ ಜೊತೆ ಪಾರ್ಟಿಯಲ್ಲಿ ಸಖತ್​​ ಸ್ಟೆಪ್​.!
ಕಳೆದ ವರ್ಷ ದುಬೈನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಹಾರ್ದಿಕ್​ ಪಾಂಡ್ಯ, ಇಶಾನ್​ ಕಿಶನ್​ ಜೊತೆ ಧೋನಿ ಡಾನ್ಸ್​ ಮಾಡಿದ್ರು. ಇವ್ರೇನಾ ಮಿಸ್ಟರ್​ ಕೂಲ್​​ ಧೋನಿ ಅನ್ನಬೇಕು ಹಾಗಿತ್ತು ಧೋನಿಯ ಆ ಡಾನ್ಸ್.​
/newsfirstlive-kannada/media/post_attachments/wp-content/uploads/2024/12/DHONI-DANCE.jpg)
ಪತ್ನಿ ಸಾಕ್ಷಿ, ಮಗಳು ಝೀವಾ ಜೊತೆಗೆ ಮಾಹಿ ಡಾನ್ಸ್​.!
ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಬಳಿಕ ಫ್ಯಾಮಿಲಿಗೆ ಟೈಮ್​ ಮೀಸಲಿಟ್ಟಿರೋ ಧೋನಿ, ಆಗಾಗ ಪತ್ನಿ, ಮಗಳೊಂದಿಗೆ ಹೆಚ್ಚು ಕಾಣಿಸಿಕೊಳ್ತಾರೆ. ಹೀಗೆ ಪಾರ್ಟಿಯೊಂದಕ್ಕೆ ಹೋದಾಗ ಪ್ರೀತಿ ಪುತ್ರಿ ಝೀವಾ ಜೊತೆಗೂ ಸ್ಟೆಪ್​ ಹಾಕಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us