newsfirstkannada.com

ಯಶ್​, ಡಾರ್ಲಿಂಗ್​​ ಫ್ಯಾನ್ಸ್​​ಗೆ ಗುಡ್​ನ್ಯೂಸ್​.. ಸಲಾರ್-2 ಸೆಟ್​ನಲ್ಲಿ ಪ್ರಶಾಂತ್​ ನೀಲ್​, ಪ್ರಭಾಸ್​

Share :

Published May 26, 2024 at 4:15pm

Update May 26, 2024 at 4:19pm

    ಪ್ಯಾನ್​ ಇಂಡಿಯಾ ಸಿನಿಮಾದ ಶೂಟಿಂಗ್ ಆರಂಭಿಸಿದ ಡಾರ್ಲಿಂಗ್​

    ಅದ್ಧೂರಿ ಸೆಟ್​ನಲ್ಲಿ ಒಂದೇ ಕಡೆ ಕಾಣಿಸಿಕೊಂಡ ಪ್ರಭಾಸ್​, ಡೈರೆಕ್ಟರ್

    KGF- 3 ಸಿನಿಮಾ ಬರೋದು ಈಗಾಗಲೇ ಕನ್​ಫರ್ಮ್ ಆಗಿದೆ

ತೆಲುಗು ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಹಾಗೂ ಸ್ಯಾಂಡಲ್​ವುಡ್​ನ ಸ್ಟಾರ್ ಡೈರೆಕ್ಟರ್​ ಪ್ರಶಾಂತ್ ಕಾಂಬಿನೇಷನ್​ನಲ್ಲಿ ಸಲಾರ್​ ಭಾಗ-1 ಬಂದು ಬಿಗ್ ಹಿಟ್ ಕಂಡಿತ್ತು. ಇದೇ ಸಿನಿಮಾದ ಭಾಗ-2 ಬರಬೇಕಿದ್ದು ಡಾರ್ಲಿಂಗ್​ ಅಭಿಮಾನಿಗಳೆಲ್ಲ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಪ್ಯಾನ್​ ಇಂಡಿಯಾ ಮೂವಿ ಕಲ್ಕಿಯಲ್ಲಿ ಪ್ರಭಾಸ್ ಫುಲ್ ಬ್ಯುಸಿಯಾಗಿದ್ದಾರೆ ಎನ್ನಲಾಗಿತ್ತು. ಇದೀಗ ಈ ಎಲ್ಲದರಿಂದ ಬಿಡುವು ಮಾಡಿಕೊಂಡ ಪ್ರಭಾಸ್​ ಅವರು ಸಲಾರ್​-2 ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗಿದ್ದು ಟ್ರೆಂಡಿಂಗ್​​ನಲ್ಲಿದೆ. ಫೋಟೋದಲ್ಲಿ ಸಲಾರ್​ ನಿರ್ದೇಶಕ ಪ್ರಶಾಂತ್ ಹಾಗೂ ಪ್ರಭಾಸ್​ ಇಬ್ಬರು ಇದ್ದು ಯಾವುದೋ ಸಂಗತಿಗೆ ನಗುತ್ತಿದ್ದಾರೆ. ಇನ್ನು ಡಾರ್ಲಿಂಗ್ಸ್​ ಅಭಿಮಾನಿಗಳೆಲ್ಲ ಸಲಾರ್-2 ಶೂಟಿಂಗ್ ಆರಂಭವಾಗಿದೆ ಎಂದು ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಸಲಾರ್ ಮೂವಿಯ ವಿಡಿಯೋ ತುಣುಕುಗಳನ್ನ ಶೇರ್ ಮಾಡುತ್ತಿದ್ದಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಸಲಾರ್-2 ಟ್ರೆಂಡಿಂಗ್​​​ನಲ್ಲಿದೆ.

ಸದ್ಯ ಪ್ರಶಾಂತ್ ನೀಲ್ ಕೈಯಲ್ಲೂ ಸಾಲು ಸಾಲು ಸಿನಿಮಾಗಳು ಇವೆ. ಸಲಾರ್- 2 ಶೂಟಿಂಗ್​ ಅನ್ನು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಯಶ್​ ಅಭಿನಯದ ಕೆಜಿಎಫ್​-3 ಡೈರೆಕ್ಷನ್ ಮಾಡಬೇಕೆಂದು ಪ್ರಶಾಂತ್ ನೀಲ್ ಅವರು ಈಗಾಗಲೇ ಒಂದು ವಿಡಿಯೋದಲ್ಲಿ ಹೇಳಿದ್ದಾರೆ. ಹೀಗಾಗಿ ಕೆಜಿಎಫ್-3 ಬರೋದು ಪಕ್ಕಾ ಆಗಿದೆ.​ ಇದಾದ ಬಳಿಕ ಜ್ಯೂನಿಯರ್ ಎನ್​​ಟಿಆರ್​ ಜೊತೆ ಮತ್ತೊಂದು ಸಿನಿಮಾಕ್ಕೆ ಪ್ರಶಾಂತ್ ನೀಲ್ ಕೈ ಹಾಕಿದ್ದಾರೆ. ಹೀಗಾಗಿ ಈ ಎಲ್ಲವನ್ನು ಹಂತ ಹಂತವಾಗಿ ಮುಗಿಸಿಕೊಂಡು ಹೋಗಬೇಕಿರುವುದರಿಂದ ವರ್ಷಗಳೆ ಕಳೆಯಲಿವೆ. ಆದರೆ ಸದ್ಯಕ್ಕಂತೂ ಪ್ರಶಾಂತ್ ನೀಲ್ ಅವರು ಪ್ರಭಾಸ್​ ಜೊತೆಗಿನ ಪ್ರಾಜೆಕ್ಟ್​ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಇಬ್ಬರು ಒಂದೇ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಶ್​, ಡಾರ್ಲಿಂಗ್​​ ಫ್ಯಾನ್ಸ್​​ಗೆ ಗುಡ್​ನ್ಯೂಸ್​.. ಸಲಾರ್-2 ಸೆಟ್​ನಲ್ಲಿ ಪ್ರಶಾಂತ್​ ನೀಲ್​, ಪ್ರಭಾಸ್​

https://newsfirstlive.com/wp-content/uploads/2024/05/SALAAR_2.jpg

Load More