newsfirstkannada.com

ಗುಲಾಬಿಗೆ ಪ್ಲಾಸ್ಟಿಕ್ ಸುತ್ತಿ ಮಾರಾಟ: 959 ಹೂವಿನ ವ್ಯಾಪಾರಿಗಳಿಗೆ BBMP ದಂಡದ ಬರೆ; ಸಂಗ್ರಹವಾದ ದಂಡವೆಷ್ಟು ಗೊತ್ತಾ?

Share :

Published February 17, 2024 at 9:02am

Update February 17, 2024 at 9:03am

    ಪ್ರೇಮಿಗಳ ದಿನಾಚರಣೆಯಿಂದ ಗುಲಾಬಿಗೆ ಭಾರೀ ಡಿಮ್ಯಾಂಡ್​

    ನಿಷೇಧಿತ ಪ್ಲಾಸ್ಟಿಕ್ ಸುತ್ತಿ ಮಾರಾಟ ಮಾಡಿದ ವ್ಯಾಪಾರಿಗಳು

    ಹೂವಿನ ಜೊತೆ ಪ್ಲಾಸ್ಟಿಕ್ ಬಳಕೆ ಮಾಡಿದ್ದಕ್ಕೆ ದಂಡದ ಬರೆ

ಪ್ರೇಮಿಗಳ ದಿನಾಚರಣೆ ಸಂಭ್ರಮದಿಂದ ಗುಲಾಬಿ ಹೂವಿಗೆ ಭಾರೀ ಬೇಡಿಕೆ. ಆದರೆ ಬೇಡಿಕೆಯ ಸಂದರ್ಭದಲ್ಲಿ ಗುಲಾಬಿ ಹೂವಿಗೆ ನಿಷೇಧಿತ ಪ್ಲಾಸ್ಟಿಕ್ ಸುತ್ತಿ ಮಾರಾಟ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ. ಆದರೆ ಈ ರೀತಿ ವ್ಯಾಪಾರ ಮಾಡಿದ್ದ ವ್ಯಾಪಾರಿಗಳಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ.

ವ್ಯಾಪಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದರೂ ಕೂಡ ಹೂವಿನ ಜೊತೆ ಪ್ಲಾಸ್ಟಿಕ್ ಬಳಕೆ ಮಾಡಿದ್ದಾರೆ. ಈ ಹಿನ್ನಲೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದಿಂದ 959 ಹೂವಿನ ವ್ಯಾಪಾರಿಗಳಿಂದ ಬರೋಬ್ಬರಿ 2.46 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ತಾಜ್​ಮಹಲ್, ಗೋಸ್ಟ್ರೈಕ್, ಅವಲಂಚ್​ ವೈಟ್​ ಸೇರಿದಂತೆ ಹಲವು ಬಗೆಯ ಗುಲಾಬಿ ಹೂ ಗಳನ್ನು​ ಆಸ್ಟ್ರೇಲಿಯಾ, ಜಪಾನ್, ಸಿಂಗಾರಪುರ,ಮಲೇಶಿಯಾ ದೇಶಗಳಿಗೆ ರಪ್ತು ಮಾಡಲಾಗಿದೆ. ಇನ್ನು ಜನವರಿ ಹೊಸವರ್ಷ ಹಾಗೂ ವ್ಯಾಲೆಂಟೈನ್ಸ್​ ಡೇ ಬಂದಾಗ ಹೂವಿನ ಬೇಡಿಕೆ ಹೆಚ್ಚಾಗುತ್ತದೆ. ಹಾಗೆಯೇ ಒಳ್ಳೆಯ ಬೆಲೆಯೂ ಸಿಗುತ್ತದೆ. ಪ್ರೇಮಿಗಳ ದಿನದಂದು ಗುಲಾಬಿ ಹೂವಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರವಾಗಿದೆ. ಆದರೀಗ ಬಿಬಿಎಂಪಿ ಪ್ಲಾಸ್ಟಿಕ್​ ಬಳಕೆ ಮಾಡಿದಕ್ಕೆ ದಂಡದ ಮೂಲಕ ವ್ಯಾಪಾರಿಗಳಿಗೆ ಬರೆ ಎಳೆದಿದೆ. ರಸ್ತೆಗಳಲ್ಲಿ, ಅಂಗಡಿಗಳಲ್ಲಿ ಮಾರಾಟ ಮಾಡಿದ ವ್ಯಕ್ತಿಗಳಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುಲಾಬಿಗೆ ಪ್ಲಾಸ್ಟಿಕ್ ಸುತ್ತಿ ಮಾರಾಟ: 959 ಹೂವಿನ ವ್ಯಾಪಾರಿಗಳಿಗೆ BBMP ದಂಡದ ಬರೆ; ಸಂಗ್ರಹವಾದ ದಂಡವೆಷ್ಟು ಗೊತ್ತಾ?

https://newsfirstlive.com/wp-content/uploads/2024/02/Rose-4.jpg

Load More